ಬಾಲಿವುಡ್ ಬಹುಬೇಡಿಕೆ ಕಲಾವಿದರಾದ ರಣ್ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅಭಿನಯದ ಇತ್ತೀಚಿನ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಸಿನಿಮಾ ಹಲವು ವಿಷಯಗಳಿಂದ ಸುದ್ದಿ ಮಾಡಿತ್ತು.
ಸಿನಿಮಾ ಹೆಡ್ಲೈನ್ ಆಗಲು ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಅವರ ಲಿಪ್ ಲಾಕ್ ಸೀನ್ ಕೂಡ ಒಂದು. ಈ ಚುಂಬನದ ದೃಶ್ಯ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ ಇಬ್ಬರು ಅನುಭವಿ ನಟರು ಡೀಪ್ ಕಿಸ್ಸಿಂಗ್ ಸೀನ್ ಮಾಡಲು ಒಪ್ಪಿಕೊಂಡ ದಿಟ್ಟ ನಿರ್ಧಾರಕ್ಕೆ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಪ್ರಶಂಸಿಸಿದ್ದರು. ಇದೀಗ ಹಿರಿಯ ನಟ ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ ಈ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಕಥಾವಸ್ತು ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ನಾನು ತೆರೆ ಮೇಲೆ ಚುಂಬನದಂತಹ ದೃಶ್ಯಗಳಲ್ಲಿ ನಟಿಸಲು ಸಿದ್ಧ ಎಂದು ತಿಳಿಸಿದ್ದಾರೆ.
ಹಿರಿಯ ನಟಿ ಹೇಮಾ ಮಾಲಿನಿ ಅವರಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಚುಂಬನದ ಕುರಿತಾಗಿ ಪ್ರಶ್ನೆ ಎದುರಾಗಿತ್ತು. ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಮಾಡಲು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ನಟಿ 'ಹೌದು' ಎಂಬ ಉತ್ತರ ಕೊಟ್ಟಿದ್ದಾರೆ. ''ನಾನೇಕೆ ಮಾಡುವುದಿಲ್ಲ, ಖಂಡಿತ ಅಭಿನಯಿಸುತ್ತೇನೆ. ಒಂದು ವೇಳೆ ಸೀನ್ ಬಹಳ ಉತ್ತಮವಾಗಿದ್ದರೆ, ಚಿತ್ರಕ್ಕೆ ಸಂಬಂಧಿಸಿದ್ದರೆ ಬಹುಶಃ ನಾನು ಈ ಸೀನ್ ಮಾಡಬಹುದು'' ಎಂದು ತಿಳಿಸಿದ್ದಾರೆ. ಇದೇ ಸಂದರ್ಶನದಲ್ಲಿ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾವನ್ನು ನಾನಿನ್ನೂ ವೀಕ್ಷಿಸಿಲ್ಲ ಎಂಬುದನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ: ಪತ್ನಿ, ಮಕ್ಕಳೊಂದಿಗೆ ಸಂಭ್ರಮಿಸಿದ 'ಅತ್ಯುತ್ತಮ ನಟ' ಅಲ್ಲು ಅರ್ಜುನ್; ಮಹೇಶ್ ಬಾಬುಗೆ ಬಂದಿತ್ತು ಪುಷ್ಪ ಆಫರ್!
74ರ ಹರೆಯದ ನಟಿ ಈ ಹಿಂದಿನ ಸಂದರ್ಶನಗಳಲ್ಲಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಮತ್ತು ಪತಿ ಧರ್ಮೇಂದ್ರ ಅವರ ಕುರಿತು ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದರು. ವೀಕ್ಷಕರು ಸಿನಿಮಾ ಇಷ್ಟಪಟ್ಟಿದ್ದಾರೆ. ಧರ್ಮೇಂದ್ರ ಅವರ ಬಗ್ಗೆ ನನಗೆ ಖುಷಿ ಇದೆ. ಅವರು ಯಾವಾಗಲು ಕ್ಯಾಮರಾ ಮುಂದಿರಲು ಇಷ್ಟ ಪಡುತ್ತಾರೆ. ಅವರು ನಟನೆ, ಕೆಲಸವನ್ನು ಬಹಳ ಪ್ರೀತಿಯಿಂದ ಮಾಡುತ್ತಾರೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಬಿಳಿ ಚುಕ್ಕಿ ಹಳ್ಳಿ ಹಕ್ಕಿ: ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾದರು ವೈಷ್ಣವಿ ಗೌಡ
ಈ ಹಿಂದಿನ ಸಂದರ್ಶನವೊಂದರಲ್ಲಿ, ಶಬಾನಾ ಅಜ್ಮಿ ಜೊತೆ ಲಿಪ್ ಲಾಕ್ ಮಾಡಿ ಕುರಿತು ಪ್ರತಿಕ್ರಿಯಿಸಲು ಧರ್ಮೇಂದ್ರ ಅವರಲ್ಲಿ ಕೇಳಲಾಗಿತ್ತು. ನಾಯಕ ಉತ್ತಮವಾಗಿದ್ದರೆ, ಇಡೀ ತಂಡ ಅದ್ಭುತವಾಗಿ ಕೆಲಸ ಮಾಡುತ್ತದೆ. ಕಥೆ ಕೇಳಿದಾಗ ನನಗೆ ಹೊಸತೆನಿಸಿತು. ಈ ಚಿತ್ರತಂಡದೊಂದಿಗೆ ಪ್ರತಿ ಕ್ಷಣವನ್ನೂ ಆನಂದಿಸಿದೆ. ಪ್ರಪಂಚದಾದ್ಯಂತ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದರು.