ಬ್ರೆಜಿಲ್ನ ಸಾವೊ ಪೌಲೊದಲ್ಲಿ ನಡೆದ ನೆಟ್ಫ್ಲಿಕ್ಸ್ ಟುಡುಮ್ 2023ರ ಸಮಾರಂಭದಲ್ಲಿ 'ಹಾರ್ಟ್ ಆಫ್ ಸ್ಟೋನ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದು ಬಾಲಿವುಡ್ ನಟಿ ಆಲಿಯಾ ಭಟ್ ಅವರ ಹಾಲಿವುಡ್ನ ಚೊಚ್ಚಲ ಚಿತ್ರವಾಗಿದೆ. ಇದರಲ್ಲಿ ಗಾಲ್ ಗಡೋಟ್ ಮತ್ತು ಜಿಮಿ ಡೊರ್ನನ್ ಕೂಡ ನಟಿಸಿದ್ದಾರೆ. ಬಿಡುಗಡೆಯಾದ ಟ್ರೇಲರ್‌ನಲ್ಲಿ ಹಲವಾರು ಅದ್ಭುತ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಕಾಣಬಹುದು.
ಬಿಡುಗಡೆಗೆ ಸಿದ್ಧಗೊಂಡಿರುವ 'ಹಾರ್ಟ್ ಆಫ್ ಸ್ಟೋನ್' ಚಿತ್ರದ ಟ್ರೇಲರ್ ಅನ್ನು ಆಲಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಆಲಿಯಾ ಭಟ್ ವಿಲನ್ ಆಗಿ ಕಂಡಿದ್ದಾರೆ. ಗಾಲ್ ಗಡೋಟ್ ಮತ್ತು ಜಿಮಿ ಡೊರ್ನನ್ ಅವರ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. 2.5 ನಿಮಿಷಗಳ ಈ ಟ್ರೇಲರ್‌ನಲ್ಲಿ ಆಲಿಯಾ ಕೇವಲ 5-6 ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಯಾವುದೇ ಸ್ನೇಹಿತರು, ಸಂಬಂಧಗಳು, ಅಥವಾ ಇತರೆ ಸಾಮಾಜಿಕ ಸಂಪರ್ಕಗಳನ್ನು ಹೊಂದಲು ಅನುಮತಿಸದ ಚಾರ್ಟರ್‌ನ 'ಅತ್ಯಂತ ಹೆಚ್ಚು ತರಬೇತಿ ಪಡೆದ' ಸದಸ್ಯರಾಗಿ ಗಾಲ್ ಗಡೋಟ್ ಮತ್ತು ಜೇಮೀ ಡೋರ್ನಾನ್ ಅವರನ್ನು ಪರಿಚಯಿಸಲಾಗಿದೆ. ಟ್ರೇಲರ್‌ನಲ್ಲಿ ಆಲಿಯಾ ಯಾವುದೇ ಸಾಹಸ ದೃಶ್ಯಗಳನ್ನು ಪ್ರದರ್ಶಿಸದಿದ್ದರೂ ಸಹ, ಚಾರ್ಟರ್ ಅನ್ನು ಮಣ್ಣುಮುಕ್ಕಿಸುವ ಸಾಮರ್ಥ್ಯ ಆಕೆಗಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ: Gucci ರಾಯಭಾರಿಯಾಗಿ ಆಲಿಯಾ ಭಟ್: ಖ್ಯಾತ ಹಾಲಿವುಡ್ ಸೆಲೆಬ್ರಿಟಿಗಳ ಜೊತೆ ಭಾರತೀಯ ತಾರೆ
ಇಟಲಿ, ಲಂಡನ್ ಮತ್ತು ಲಿಸ್ಬನ್ ಸೇರಿದಂತೆ ಹಲವೆಡೆ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಆಲಿಯಾ ಭಟ್, ಗಾಲ್ ಗಡೋಟ್, ಜಿಮಿ ಡೊರ್ನನ್ ಅಲ್ಲದೇ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ನಿರ್ಮಾಪಕ ಬೋನಿ ಕಪೂರ್ ಪುತ್ರಿ ಖುಷಿ ಕಪೂರ್ ಮತ್ತು ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ಇದ್ದಾರೆ.
ಆಗಸ್ಟ್ 11 ರಂದು ಬಿಡುಗಡೆ: ಚಿತ್ರವು ಆಗಸ್ಟ್ 11 ರಿಂದ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ. ಇತ್ತೀಚೆಗೆ ಹಾರ್ಟ್ ಆಫ್ ಸ್ಟೋನ್ ತಯಾರಕರು ಅಧಿಕೃತ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಏತನ್ಮಧ್ಯೆ, ನಿರ್ದೇಶಕ ಕರಣ್ ಜೋಹರ್ ಅವರ ಮುಂದಿನ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣವೀರ್ ಸಿಂಗ್ ಜೊತೆ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟ್ರೇಲರ್ ಜುಲೈ 28ರಂದು ಬಿಡುಗಡೆಯಾಗಲಿದೆ.
ಇದಲ್ಲದೇ ನಟಿ ಆಲಿಯಾ ಗಂಡ ರಣಬೀರ್ ಕಪೂರ್ ಜೊತೆಗೆ ಮತ್ತೊಂದು ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಮಾಯಣ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣ ಪಾತ್ರ ನಿರ್ವಹಣೆ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಯಶ್ ಈ ಪಾತ್ರದಲ್ಲಿ ನಟಿಸುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಈ ಚಿತ್ರವೂ ಈ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ಗೆ ಸೆಟ್ಟೇರಲಿದೆ.
ಇದನ್ನೂ ಓದಿ: ಪತ್ನಿ ಕತ್ರಿನಾ ಕೈಫ್ ಎದುರು ಆಲಿಯಾ ಭಟ್ ಆಲಂಗಿಸಿದ ವಿಕ್ಕಿ ಕೌಶಲ್: ವಿಡಿಯೋ ವೈರಲ್