ETV Bharat / entertainment

ಬಹು ನಿರೀಕ್ಷಿತ 'ಹೆಡ್ ಬುಷ್' ಬಿಡುಗಡೆಗೆ ಮುಹೂರ್ತ ಫಿಕ್ಸ್​ - Head Bush actress actors

ಬಹು ನಿರೀಕ್ಷಿತ 'ಹೆಡ್ ಬುಷ್' ಸಿನಿಮಾ ಇದೇ ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Head Bush film
ಹೆಡ್ ಬುಷ್ ಸಿನಿಮಾ
author img

By

Published : Jun 11, 2022, 3:40 PM IST

Updated : Jun 11, 2022, 3:55 PM IST

ಭರ್ಜರಿ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್. ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಡಾನ್‌ ಎಂ.ಪಿ ಜಯರಾಜ್‌ ಅವರ ಜೀವನಾಧಾರಿತ ಸಿನಿಮಾ‌ ಮಾಡುತ್ತಿರುವುದು ಸೌಥ್​ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​​ ಟಾಕ್ ಆಗುತ್ತಿದೆ. ಚಿತ್ರೀಕರಣ ಮುಗಿದಿರುವ ಹೆಡ್ ಬುಷ್ ಸಿನಿಮಾವನ್ನು ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದೆಂದು ಚಿತ್ರತಂಡ ತಿಳಿಸಿದೆ.

Head Bush film
'ಹೆಡ್ ಬುಷ್' ಬಿಡುಗಡೆಗೆ ಮುಹೂರ್ತ ಫಿಕ್ಸ್​

ಈಗಾಗಲೇ ಡಾಲಿ ಧನಂಜಯ್ ಎಂ.ಪಿ ಜಯರಾಜ್ ಸ್ಟೈಲ್​ನಲ್ಲಿ ಸಿಗರೇಟ್ ಸೇದುವ ಪೋಸ್ಟರ್ ರಿಲೀಸ್​ ಆಗಿದ್ದು, ಸಖತ್​ ಸದ್ದು ಮಾಡುತ್ತಿದೆ. ಬರಹಗಾರ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ. 1970ರ ಬೆಂಗಳೂರಿನ ಭೂಗತ ಜಗತ್ತನ್ನು ಶೂನ್ಯ ಅವರು ಈ ಚಿತ್ರದಲ್ಲಿ ತೋರಿಸಲಿದ್ದಾರೆ. ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಎನ್. ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

Head Bush film
'ಹೆಡ್ ಬುಷ್' ಬಿಡುಗಡೆಗೆ ಮುಹೂರ್ತ ಫಿಕ್ಸ್​

ಇದನ್ನೂ ಓದಿ: ‘ಸೆಲ್ಫಿ ಮಮ್ಮಿ.. ಗೂಗಲ್ ಡ್ಯಾಡಿ..’ ಸಿನಿಮಾ ನೋಡಿ ಮೆಚ್ಚಿದ ಸುಧಾಮೂರ್ತಿ!

ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಶೂನ್ಯ ರಕ್ಷಿತ್ ಶೆಟ್ಟಿ ಅವರ ಬಳಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸಿ ಅನುಭವ ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಫಿಲಂ ಮೇಕಿಂಗ್ ಕುರಿತು ಎಂಎಸ್​ಸಿ, ಸಂಶೋಧನೆ ಕೂಡ ಮಾಡಿದ್ದಾರೆ. ಅದ್ಭುತ ಹಾಡುಗಳಿಗೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸುನೊಜ್ ವೇಲಾಯಧನ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಕಲಾ ನಿರ್ದೇಶಕರು ಬಾಡಲ್ ನಂಜುಂಡಸ್ವಾಮಿ. ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Last Updated : Jun 11, 2022, 3:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.