ಭಾರತದ, ಅದ್ರಲ್ಲೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದ (ಟಾಲಿವುಡ್) ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್‌ಆರ್‌ಆರ್ ಸಿನಿಮಾವು ಚಿತ್ರರಂಗದಲ್ಲಿ ಯಶಸ್ಸಿನ ದಾಖಲೆ ಬರೆಯುತ್ತಲೇ ಇದೆ. ಈಗಾಗಲೇ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಚಿತ್ರ ಇತ್ತೀಚೆಗೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಪಿಲ್ಮ್ ಅವಾರ್ಡ್ನಲ್ಲಿ ಅತ್ಯುನ್ನತ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಜೂನಿಯರ್ ಎನ್ಟಿಆರ್ ಗೈರು: ಅಮೆರಿಕದಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (ಹೆಚ್‌ಸಿಎ) ಆಯೋಜಿಸಿದ್ದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ರಾಜಮೌಳಿ, ನಟ ರಾಮ್ ಚರಣ್ ಮತ್ತು ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಆರ್‌ಆರ್‌ಆರ್ ಚಿತ್ರ ತಂಡವನ್ನು ಪ್ರತಿನಿಧಿಸಿದ್ದರು. ಆದ್ರೆ ಸಮಾರಂಭಕ್ಕೆ ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಅನುಪಸ್ಥಿತಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
-
Hollywood never looked cooler. @RRRMovie #RRRForOscars pic.twitter.com/UJNMW6b1wV
— Beyond Fest (@BeyondFest) February 26, 2023 " class="align-text-top noRightClick twitterSection" data="
">Hollywood never looked cooler. @RRRMovie #RRRForOscars pic.twitter.com/UJNMW6b1wV
— Beyond Fest (@BeyondFest) February 26, 2023Hollywood never looked cooler. @RRRMovie #RRRForOscars pic.twitter.com/UJNMW6b1wV
— Beyond Fest (@BeyondFest) February 26, 2023
ಹೆಚ್‌ಸಿಎ ಟ್ವೀಟ್ ಏನು?: ಜೂನಿಯರ್ ಎನ್ಟಿಆರ್ ಕಾರ್ಯಕ್ರಮಕ್ಕೆ ಬಾರದಿರುವ ಬಗ್ಗೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ''ನಟ ಜೂನಿಯರ್ ಎನ್ಟಿಆರ್ ಭಾರತದಲ್ಲಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿರುವುದರಿಂದ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಸಮಾರಂಭಕ್ಕೆ ಸಾಕ್ಷಿಯಾಗಲು ನಾವು ಅವರನ್ನು ಆಹ್ವಾನಿಸಿದ್ದೇವೆ, ಆದರೆ ಅವರು ಹೊಸ ಚಿತ್ರದ ಚಿತ್ರೀಕರಣದಲ್ಲಿದ್ದಾರೆ, ಅವರು ಶೀಘ್ರದಲ್ಲೇ ನಮ್ಮಿಂದ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ತಿಳಿಸಿದೆ.
ಆರ್‌ಆರ್‌ಆರ್ ಹೆಚ್‌ಸಿಎ ಪ್ರಶಸ್ತಿ: ಇತ್ತೀಚೆಗೆ ಅಮೆರಿಕದಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಜೂ.ಎನ್ಟಿಆರ್ ಮತ್ತು ರಾಮ್ಚರಣ್ ನಟನೆಯ ಆರ್‌ಆರ್‌ಆರ್ ಸಿನಿಮಾ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ', 'ಅತ್ಯುತ್ತಮ ಆಕ್ಷನ್ ಚಿತ್ರ, 'ಅತ್ಯುತ್ತಮ ಹಾಡು', 'ಅತ್ಯುತ್ತಮ ಸ್ಟಂಟ್' ವಿಭಾಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯುತ್ತಾರಾ ಆರ್‌ಆರ್‌ಆರ್ ನಿರ್ದೇಶಕ ರಾಜಮೌಳಿ?!
-
Dear RRR fans & supporters,
— Hollywood Critics Association (@HCAcritics) February 27, 2023 " class="align-text-top noRightClick twitterSection" data="
We did invite N. T. Rama Rao Jr. to attend the #HCAFilmAwards but he is shooting a new film in India.
He will be receiving his awards from us shortly.
Thank you for all your love and support.
Sincerely,
The Hollywood Critics Association
">Dear RRR fans & supporters,
— Hollywood Critics Association (@HCAcritics) February 27, 2023
We did invite N. T. Rama Rao Jr. to attend the #HCAFilmAwards but he is shooting a new film in India.
He will be receiving his awards from us shortly.
Thank you for all your love and support.
Sincerely,
The Hollywood Critics AssociationDear RRR fans & supporters,
— Hollywood Critics Association (@HCAcritics) February 27, 2023
We did invite N. T. Rama Rao Jr. to attend the #HCAFilmAwards but he is shooting a new film in India.
He will be receiving his awards from us shortly.
Thank you for all your love and support.
Sincerely,
The Hollywood Critics Association
ಆರ್‌ಆರ್‌ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನದ ಕಾಲ್ಪನಿಕ ಕಥೆ. ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮುಖ್ಯಭೂಮಿಕೆಯಲ್ಲಿ ಅದ್ಭುತವಾಗಿ ನಟಿಸಿದ್ದರು. ಇವರಲ್ಲದೇ ಆಲಿಯಾ ಭಟ್, ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 1,200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಈ ಆರ್‌ಆರ್‌ಆರ್ ಸಿನಿಮಾ.
ಇದನ್ನೂ ಓದಿ: ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಫಿಲ್ಮ್ ಅವಾರ್ಡ್: 'ಆರ್‌ಆರ್‌ಆರ್' ಮುಡಿಗೇರಿದ 4 ಅತ್ಯುನ್ನತ ಪ್ರಶಸ್ತಿಗಳು
ನಾಟು ನಾಟು ಹಾಡು 'ಅತ್ಯುತ್ತಮ ಮೂಲ ಗೀತೆ' ವಿಭಾಗದಲ್ಲಿ 'ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ'ಯನ್ನು ಗೆದ್ದುಕೊಂಡಿದೆ. ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ನಲ್ಲಿಯೂ ಎರಡು ಪ್ರಶಸ್ತಿಗಳನ್ನು ಗಳಿಸಿದೆ. ಇದೀಗ ಹೆಚ್‌ಸಿಎ ಪ್ರಶಸ್ತಿ ಪಡೆದುಕೊಂಡಿದ್ದು, ಸದ್ಯ ಎಲ್ಲರ ಕಣ್ಣು ಆಸ್ಕರ್ ಮೇಲಿದೆ. ಆಸ್ಕರ್ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೇ ಮಾರ್ಚ್ 13 ರಂದು ನಡೆಯಲಿದ್ದು, ನಮ್ಮ ಭಾರತದ ಚಿತ್ರತಂಡ ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯುತ್ತದೆ ಎಂಬುದು ಭಾರತೀಯರ ಭರವಸೆ.