ETV Bharat / entertainment

ವಸಿಷ್ಠ - ಹರಿಪ್ರಿಯಾ ಪ್ರೇಮಾಂಕುರಕ್ಕೆ ಕಾರಣನಾದ 'ಕ್ರಿಸ್ಟಲ್​' - haripriya vasishta simha news

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವೆ ಪ್ರೀತಿ ಶುರುವಾಗಲು ಕಾರಣ ಆಗಿದ್ದು ಒಂದು ನಾಯಿಮರಿ ಅನ್ನೋ ವಿಚಾರವನ್ನು ಸ್ವತಃ ಈ ಜೋಡಿಯೇ ಬಯಲು ಮಾಡಿದ್ದಾರೆ.

haripriya and vasishta simha love story
ವಸಿಷ್ಠ - ಹರಿಪ್ರಿಯಾ ಪ್ರೇಮಾಂಕುರಕ್ಕೆ ಕಾರಣನಾದ 'ಕ್ರಿಸ್ಟಲ್​'
author img

By

Published : Dec 7, 2022, 1:06 PM IST

ಸ್ಯಾಂಡಲ್​​ವುಡ್​​ ನಟಿ ಹರಿಪ್ರಿಯಾ, ನಟ ವಸಿಷ್ಠ ಸಿಂಹ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ವೈರಲ್​ ಫೋಟೋಗಳು ಖಚಿತ ಪಡಿಸಿವೆ. ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ​ಸಿಂಪಲ್​​ ಆಗಿ ಈ ಶುಭ ಕಾರ್ಯ ನಡೆದಿತ್ತು. ಈ ಇಬ್ಬರ ನಡುವಿನ ಪ್ರೀತಿ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಕಳೆದ ವಾರದಿಂದ ಈ ಜೋಡಿಯ ಲವ್​​ ಮ್ಯಾಟರ್​​ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವೆ ಪ್ರೀತಿ ಶುರುವಾಗಲು ಕಾರಣ ಆಗಿದ್ದು ಒಂದು ನಾಯಿಮರಿ ಅನ್ನೋ ವಿಚಾರವನ್ನೀಗ ಸ್ವತಃ ಈ ಜೋಡಿಯೇ ಬಹಿರಂಗಪಡಿಸಿದ್ದಾರೆ.

ವಸಿಷ್ಠ ಸಿಂಹ ನೀಡಿದ ಮುದ್ದಾದ ನಾಯಿಮರಿಯಿಂದ ಇವರ ಪ್ರೇಮ್​ ಕಹಾನಿ ಶುರುವಾಯಿತು. ಆ ಮರಿಯ ಹೆಸರು ಕ್ರಿಸ್ಟಲ್​. ಹರಿಪ್ರಿಯಾ ಅವರು ಲಕ್ಕಿ ಮತ್ತು ಹ್ಯಾಪಿ ಎಂಬ ಶ್ವಾನಗಳನ್ನು ಸಾಕಿದ್ದರು. ಆದರೆ ಲಕ್ಕಿ ಸಾವಿನ ನಂತರ ಹ್ಯಾಪಿ ಒಂಟಿಯಾಯ್ತು. ಹರಿಪ್ರಿಯಾ ಕೂಡ ಲಕ್ಕಿಯನ್ನು ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್​ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದ್ದರು. ಬಳಿಕ ಇವರಿಬ್ಬರ ಸ್ನೇಹ ಗಟ್ಟಿಯಾಗುತ್ತಾ ಬೆಳೆಯಿತು.

haripriya and vasishta simha love story
ಹ್ಯಾಪಿ ಮತ್ತು ಕ್ರಿಸ್ಟಲ್​

'ಹ್ಯಾಪಿ ಮತ್ತು ಕ್ರಿಸ್ಟಲ್​ ನಡುವೆ ಸ್ನೇಹವಾಗಲು ಕೆಲ ಸಮಯ ಹಿಡಿಯಿತು. ಕ್ರಿಸ್ಟಲ್​ ಹ್ಯಾಪಿಯ ವಸ್ತುಗಳ ಜೊತೆ ಆಟ ಆಡ್ತಿದ್ದ. ಅದರಿಂದ ಹ್ಯಾಪಿಗೆ ಸಿಟ್ಟು ಬರುತ್ತಿತ್ತು. ಆದ್ರೆ ಕ್ರಿಸ್ಟಲ್ ಯಾರನ್ನೂ​ ಮೋಡಿ ಮಾಡುವ ಕಲೆ ಹೊಂದಿದ್ದಾನೆ. ಹ್ಯಾಪಿ ಜೊತೆಗೂ ಸ್ನೇಹ​ ಬೆಳೆಸಿಕೊಂಡ. ಈಗ ಅವರಿಬ್ಬರೂ ಜೊತೆಯಲ್ಲೇ ಇರುತ್ತಾರೆ' ಎಂದು ಹರಿಪ್ರಿಯಾ ಹೇಳಿದ್ದಾರೆ.

haripriya and vasishta simha love story
ಲಕ್ಕಿ ಮತ್ತು ಹ್ಯಾಪಿ

'ಇಂದು ನಿಮಗೊಂದು ಸೀಕ್ರೆಟ್​ ಹೇಳ್ತೀನಿ. ವಸಿಷ್ಠ ಸಿಂಹ ಈ ನಾಯಿಯನ್ನು ಗಿಫ್ಟ್​ ಮಾಡಿದಾಗ ಇವನು ಒಂದು ಮೆಸೇಜ್​ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಾರ್ಟ್​ ಶೇಪ್​ನ ಒಂದು ಬರ್ತ್​ ಮಾರ್ಕ್​ ಕೂಡ ಇದೆ, ಅವನು ಎಂದಿಗೂ ನನಗೆ ತುಂಬಾನೆ ಸ್ಪೆಷಲ್​, ಹ್ಯಾಪಿ ಬರ್ತ್​ ಡೇ ಕ್ರಿಸ್ಟಲ್​​' ಎಂದು ಹರಿಪ್ರಿಯಾ ಬರೆದಿದ್ದಾರೆ.

ಇದನ್ನೂ ಓದಿ: ವಸಿಷ್ಠ ಸಿಂಹ - ಹರಿಪ್ರಿಯಾ ನಿಶ್ಚಿತಾರ್ಥ... ಫೋಟೋಗಳು ವೈರಲ್​​

ಹ್ಯಾಪಿ ಮತ್ತು ಕ್ರಿಸ್ಟಲ್​ ಕಥೆಯನ್ನು ಒಂದು ವಿಡಿಯೋ ಮೂಲಕ ಹರಿಪ್ರಿಯಾ ಮತ್ತು ವಸಿಷ್ಠ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿ​ದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.