ETV Bharat / entertainment

OMG 2: ಹರ್ ಹರ್ ಮಹಾದೇವ್ ಹಾಡು ಬಿಡುಗಡೆ- ಶಿವನ ವೇಷದಲ್ಲಿ ಅಕ್ಷಯ್​ ಕುಮಾರ್ - ಅಕ್ಷಯ್​ ಕುಮಾರ್

OMG 2- Har Har Mahadev song out: ಅಕ್ಷಯ್​ ಕುಮಾರ್ ಅಭಿನಯದ ಓಎಂಜಿ 2 ಸಿನಿಮಾದ 'ಹರ್ ಹರ್ ಮಹಾದೇವ್' ಹಾಡು ಅನಾವರಣಗೊಂಡಿದೆ.

Har Har Mahadev song
ಹರ್ ಹರ್ ಮಹಾದೇವ್ ಹಾಡು
author img

By

Published : Jul 27, 2023, 12:39 PM IST

ಬಾಲಿವುಡ್​ ಕಿಲಾಡಿ ಜನಪ್ರಿಯತೆಯ ನಟ ಅಕ್ಷಯ್​ ಕುಮಾರ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾದ ಹೆಸರು ಓಎಂಜಿ 2. ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದು, ಚಿತ್ರತಂಡ ಪ್ರಚಾರ ಕಾರ್ಯ ಪ್ರಾರಂಭಿಸಿದೆ. ಹಂತಹಂತವಾಗಿ ಚಿತ್ರದ ಹಾಡುಗಳನ್ನೂ ಬಿಡುಗಡೆ ಮಾಡಲಾಗುತ್ತಿದೆ. ಓಎಂಜಿ 2ರ ಎರಡನೇ ಹಾಡು 'ಹರ್ ಹರ್ ಮಹಾದೇವ್' ಅಂತಿಮವಾಗಿ ಇಂದು ರಿಲೀಸ್ ಆಗಿದೆ. ನಾಯಕ ನಟ ಅಕ್ಷಯ್ ಕುಮಾರ್ ಇನ್​ಸ್ಟಾಗ್ರಾಮ್​ನಲ್ಲಿ ಈ ಹಾಡನ್ನು ಶೇರ್ ಮಾಡಿದ್ದಾರೆ. ಭಗವಾನ್ ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಅವರ ಸುತ್ತಲೂ ಹಲವು ನೃತ್ಯಗಾರರಿದ್ದಾರೆ.

ಹರ್ ಹರ್ ಮಹಾದೇವ್ ಹಾಡು: ಇನ್​ಸ್ಟಾಗ್ರಾಮ್​ನಲ್ಲಿ ಸಾಂಗ್​ ಶೇರ್ ಮಾಡಿರುವ ಅಕ್ಷಯ್​ ಕುಮಾರ್​, "ಹರ್ ಹರ್ ಮಹಾದೇವ್ ಹಾಡು ಅನಾವರಣ, ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ಓಎಂಜಿ 2 ಬಿಡುಗಡೆ" ಎಂದು ಬರೆದಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣ ನಟನ ಅಭಿಮಾನಿಗಳು ರೆಡ್ ಹಾರ್ಟ್, ಫೈಯರ್​ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗದಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

  • " class="align-text-top noRightClick twitterSection" data="">

ಸಿನಿಮಾದ ಪವರ್​ಫುಲ್​ ಹಾಡಿಗೆ ಪ್ರತಿಕ್ರಿಯಿಸಿದ ಅಭಿಮಾನಿಯೋರ್ವರು, 'ಅದ್ಭುತ' ಎಂದು ಮೆಚ್ಚಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್​ ಮಾಡಿ, "ಸಿನಿಮಾ ವೀಕ್ಷಿಸಲು ಕಾಯುತ್ತಿದ್ದೇನೆ" ತಿಳಿಸಿದರು. ಹೆಚ್ಚಿನವರು 'ಹರ್ ಹರ್ ಮಹಾದೇವ್' ಘೋಷಣೆಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

ಹರ್ ಹರ್ ಮಹಾದೇವ್ ಹಾಡಿನಲ್ಲಿ, ಶಿವನ ಪಾತ್ರದ ಹಿನ್ನೆಲೆಯಲ್ಲಿ ಅಕ್ಷಯ್‌ ಮುಖಕ್ಕೆ ಬೂದಿ ಬಳಿಯಲಾಗಿದೆ. ಉದ್ದನೆಯ ಕೂದಲು ನಟನನ್ನು ವಿಭಿನ್ನವಾಗಿ ಪ್ರದರ್ಶಿಸಿದೆ. ಟ್ರಕ್‌ನ ಹಿಂಭಾಗದಲ್ಲಿ ಅಕ್ಷಯ್​ ಕುಮಾರ್​ ಕುಳಿತಿದ್ದರೆ, ಇತರೆ ನೃತ್ಯಗಾರರು ಹಾಡಿನ ಬೀಟ್‌ಗೆ ಹೆಜ್ಜೆ ಹಾಕಿದ್ದಾರೆ. ನಂತರ ಅಕ್ಷಯ್​ ಶಿವನಾಗಿ ಗುಂಪಿನೊಂದಿಗೆ ಸೇರುತ್ತಾರೆ. ಹರ್ ಹರ್ ಮಹಾದೇವ್ ಚಿತ್ರದ ಎರಡನೇ ಹಾಡು, 'ಊಂಚಿ ಊಂಚಿ ವಾದಿ' ಎಂಬ ಚಿತ್ರದ ಮೊದಲ ಹಾಡು ಒಂದು ವಾರದ ಹಿಂದೆ ಬಿಡುಗಡೆಯಾಗಿತ್ತು.

ಇದನ್ನೂ ಓದಿ: Hbd Kriti Sanon: ಜನ್ಮದಿನದ ಸಂಭ್ರಮದಲ್ಲಿ ಕೃತಿ ಸನೋನ್​ 'ಆದಿಪುರುಷ'ನ ಸೀತೆಗೆ ಶುಭಾಶಯಗಳ ಸುರಿಮಳೆ

'ಊಂಚಿ ಊಂಚಿ ವಾದಿ' ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಹರ್ ಹರ್ ಮಹಾದೇವ್ ಹಾಡು ಸಖತ್​ ಸದ್ದು ಮಾಡುತ್ತಿದೆ. ಅಮಿತ್ ರೈ ನಿರ್ದೇಶನದ ಚಿತ್ರ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅಕ್ಷಯ್ ಕುಮಾರ್ ಜೊತೆಗೆ, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಯು ಅಕ್ಷಯ್‌ ಕುಮಾರ್​ ಸುತ್ತ ಸುತ್ತುತ್ತದೆ. ಕಾಂತಿ ಕುಟುಂಬವು ಒಂದು ದೊಡ್ಡ ಸಮಸ್ಯೆಗೆ ಸಿಲುಕಿದಾಗ ಅವರಿಗೆ ಸಹಾಯ ಮಾಡಲು ಬರುವ ಶಿವನಂತೆ ಚಿತ್ರಿಸಲಾಗಿದೆ. ಪಂಕಜ್ ತ್ರಿಪಾಠಿ ಅವರು ಶಿವನ ಭಕ್ತರು. ಕಾಂತಿ ಶರಣ್ ಮುದ್ಗಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: OMG 2 ಸಾಂಗ್​ ರಿಲೀಸ್​​: ಅಕ್ಷಯ್​ ಕುಮಾರ್​ ನಟನೆಯ ಮತ್ತೊಂದು ಸಿನಿಮಾ ಯಾವುದು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.