ETV Bharat / entertainment

'ಹನುಮಾನ್​​', 'ಗುಂಟೂರು ಖಾರಂ'​ ಕಲೆಕ್ಷನ್​​ ಮಾಹಿತಿ ನಿಮಗಾಗಿ - ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್

HanuMan and Guntur Kaaram: ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರೋ ಹನುಮಾನ್​ ಮತ್ತು ಗುಂಟೂರು ಖಾರಂ ಕಲೆಕ್ಷನ್​ ಮಾಹಿತಿ ಈ ಕೆಳಗಿದೆ.

HanuMan and Guntur Kaaram
ಹನುಮಾನ್​​ ಮತ್ತು ಗುಂಟೂರು ಖಾರಂ ಕಲೆಕ್ಷನ್​
author img

By ETV Bharat Karnataka Team

Published : Jan 18, 2024, 2:03 PM IST

ಜನವರಿ 12 ರಂದು ತೆರೆಗಪ್ಪಳಿಸಿರೋ ತೆಲುಗು ಚಿತ್ರರಂಗದ ಎರಡು ಬಹುನಿರೀಕ್ಷಿತ ಸಿನಿಮಾಗಳು ಉತ್ತಮ ಪ್ರದರ್ಶನ ಮುಂದುವರಿಸಿವೆ. ಕಳೆದ ಶುಕ್ರವಾರ ತೇಜ ಸಜ್ಜಾ ಅವರ ಹನುಮಾನ್ ಮತ್ತು ಮಹೇಶ್ ಬಾಬು ಅವರ ಗುಂಟೂರು ಖಾರಂ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಮುಖಾಮುಖಿಯಾಗಿ ಬಾಕ್ಸ್ ಆಫೀಸ್​ ಪೈಪೋಟಿ ಪ್ರಾರಂಭಿಸಿದವು. ಭರ್ಜರಿ ಫೈಟ್​​ ನಡುವೆಯೂ, ಎರಡೂ ಚಿತ್ರಗಳು ಯಶಸ್ವಿಯಾಗಿವೆ. ಗುಂಟೂರು ಖಾರಂ ತೆರೆಕಂಡ ಆರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಹನುಮಾನ್ ಗಳಿಕೆಯ ಅಂಕಿ-ಅಂಶ ಕೂಡ ಚೆನ್ನಾಗಿದೆ.

ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಚಿತ್ರದಲ್ಲಿ ತೇಜ ಸಜ್ಜಾ ಮತ್ತು ವಿನಯ್ ರೈ ನಟಿಸಿದ್ದಾರೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ.ನತ್ತ ದಾಪುಗಾಲು ಹಾಕುತ್ತಿದೆ. ಜನವರಿ 17 ರಂದು ಅಂದರೆ ನಿನ್ನೆ ಚಿತ್ರದ ಗಳಿಕೆಯಲ್ಲಿ ಸಣ್ಣ ಮಟ್ಟಿನ ಇಳಿಕೆ ಆಗಿದ್ದರೂ ಕೂಡ, ವಾರದ ದಿನಗಳಲ್ಲಿ ಎರಡಂಕಿಯ ಕಲೆಕ್ಷನ್​​ ಮಾಡುತ್ತಿದೆ.

ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಬುಧವಾರದಂದು ಹನುಮಾನ್ ಭಾರತದಲ್ಲಿ ಸರಿಸುಮಾರು 11.5 ಕೋಟಿ ರೂ. ಗಳಿಸಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್​ 80.46 ಕೋಟಿ ರೂಪಾಯಿ. ತೆಲುಗು, ಮಲಯಾಳಂ, ತಮಿಳು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ಹನುಮಾನ್ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಮೆಚ್ಚುಗೆ

ಬಾಕ್ಸ್ ಆಫೀಸ್‌ನಲ್ಲಿ ಮಹೇಶ್ ಬಾಬು ಅವರ ಗುಂಟೂರು ಖಾರಂ ಸಿನಿಮಾದೊಂದಿಗೆ ಪೈಪೋಟಿ ನಡೆಸುತ್ತಿದ್ದರೂ, ಹನುಮಾನ್​ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ, ತೇಜ ಸಜ್ಜಾ ಭಗವಾನ್ ಹನುಮಂತನಿಂದ ಶಕ್ತಿ ಪಡೆದ ನಂತರ ತನ್ನ ಜನರಿಗಾಗಿ ಹೋರಾಡುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ತೇಜ ಸಜ್ಜಾ ಜೊತೆಗೆ ವಿನಯ್ ರೈ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಅಮೃತಾ ಅಯ್ಯರ್ ಕೂಡ ಇದ್ದಾರೆ.

ಇದನ್ನೂ ಓದಿ: 'ಕಾಟೇರ' ಮೂಲಕ 2024 ಶುಭಾರಂಭ: ಮುಂದಿನ ಕನ್ನಡ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ

ಇನ್ನು ಸೌತ್​ ಸೂಪರ್ ಸ್ಟಾರ್ ಮಹೇಶ್​ ಬಾಬು ಅವರ ಗುಂಟೂರು ಖಾರಂ ಭಾರತದಲ್ಲಿ 100 ಕೋಟಿ ಮೈಲಿಗಲ್ಲನ್ನು ದಾಟಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ ಬಿಗ್​ ಬಜೆಟ್ ಆ್ಯಕ್ಷನ್ ಸಿನಿಮಾ ಭಾರತದಲ್ಲಿ ತನ್ನ ಆರನೇ ದಿನ ಸುಮಾರು 7 ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಅಂದಾಜು 100.95 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ. ಆ್ಯಕ್ಷನ್ ಡ್ರಾಮಾದಲ್ಲಿ ಮಹೇಶ್ ಬಾಬು ಜೊತೆಗೆ, ಪ್ರಕಾಶ್ ರಾಜ್, ರಮ್ಯಾ ಕೃಷ್ಣನ್, ಮೀನಾಕ್ಷಿ ಚೌಧರಿ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.