ಕನ್ನಡ ಚಿತ್ರರಂಗ ಮಾತ್ರವಲ್ಲ, ಹಾಲಿವುಡ್ ಅಂಗಳದಲ್ಲೂ ತನ್ನದೇ ವಿಭಿನ್ನ ಮ್ಯೂಸಿಕ್ನಿಂದ ಬ್ರ್ಯಾಂಡ್ ಆಗಿರುವ ಸಂಗೀತ ನಿರ್ದೇಶಕ ರಿಕ್ಕಿ ಕೇಜ್. ಸದ್ಯ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ, ಪರಿಸರವಾದಿಯೂ ಆಗಿರುವ ರಿಕ್ಕಿ ಕೇಜ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಟ್ಟಿದ್ದಾರೆ. ಸ್ವಾತಂತ್ರ್ಯ ದಿನಕ್ಕೂ ಮುನ್ನ ದಿನ ಅಂದ್ರೆ, ಇದೇ 14ರಂದು 5 ಗಂಟೆಗೆ ವಿಭಿನ್ನ ಬಗೆಯ ರಾಷ್ಟ್ರಗೀತೆ ಬಿಡುಗಡೆಯಾಗಲಿದೆ.
ವಿಶೇಷ ಎಂದರೆ, ಭಾರತ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ ಅಂದರೆ ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಕೇವಲ 3 ಗಂಟೆ ಸಮಯದಲ್ಲಿ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ.
ರಿಕ್ಕಿ ಕೇಜ್ ಮಾತನಾಡಿ, "ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಡಲಾಗಿದೆ. ಗೀತೆ ಪ್ರೆಸೆಂಟ್ ಮಾಡಲು ಕಾತುರನಾಗಿದ್ದೇನೆ. ಲಂಡನ್ ಮೂಲದ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದಲ್ಲಿ ಗೀತೆ ರೆಕಾರ್ಡ್ ಮಾಡಲಾಗಿದೆ. ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಕೈಚಳಕದಿಂದ ಭಾರತದ ರಾಷ್ಟ್ರಗೀತೆ ಸಿದ್ಧವಾಗಿದೆ" ಎಂದರು.
ಇದನ್ನೂ ಓದಿ: ಉತ್ತರಕರ್ನಾಟಕ ಭಾಷೆಯಲ್ಲಿ ಕ್ಷೇತ್ರಪತಿ ರೆಡಿ: ನವೀನ್ ಶಂಕರ್ ನಟನೆಯ ಸಿನಿಮಾ ಆಗಸ್ಟ್‌ನಲ್ಲಿ ತೆರೆಗೆ
ಜವಾನ್ ಚಿತ್ರದ ಜಿಂದಾ ಬಂದಾ ಮೇಕಿಂಗ್ ವಿಡಿಯೋ ರಿಲೀಸ್ : ಇಂದು ಜವಾನ್ ಸಿನಿಮಾದ ಚಿತ್ರತಂಡ ಜಿಂದಾ ಬಂದಾ ಮೇಕಿಂಗ್ ವಿಡಿಯೋ ಅನಾವರಣಗೊಳಿಸಿದೆ. ಜವಾನ್ ಮೊದಲ ಹಾಡು ಜಿಂದಾ ಬಂದಾ ಜುಲೈ 31 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಹಾಡು ಸಿನಿಮಾ ಕುರಿತ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿತ್ತು. ಇದೀಗ ಹಾಡಿನ ತೆರೆಮರೆ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಿನಿ ಅಭಿಮಾನಿಗಳ ಕಾತರ ಹೆಚ್ಚಿಸಿದ್ದಾರೆ.
ಜಿಂದಾ ಬಂದಾ ಮೇಕಿಂಗ್ ವಿಡಿಯೋ ಅನಾವರಣ ಸಿನಿಮಾ ಪ್ರಮೋಶನ್ನ ಒಂದು ಭಾಗ. ಪ್ರಚಾರದ ವಿಡಿಯೋದಲ್ಲಿ ನಿರ್ದೇಶಕ ಅಟ್ಲೀ ಮತ್ತು ನಾಯಕ ನಟ ಎಸ್ಆರ್ಕೆ ಹಂಚಿಕೊಂಡಿರುವ ಪ್ರೀತಿಯ ಕ್ಷಣ ಎಲ್ಲರ ಗಮನ ಸೆಳೆಯುತ್ತಿದೆ. 1 ನಿಮಿಷ 39 ಸೆಕೆಂಡ್ಸ್ ಇರುವ ವಿಡಿಯೋ, ಆಡಿಯೋ ರೆಕಾರ್ಡರ್ ಮತ್ತು ನೃತ್ಯಗಾರರಿಂದ ಆರಂಭವಾಗುತ್ತದೆ. ಡ್ಯಾನ್ಸರ್ಸ್ ತಮ್ಮ ನೃತ್ಯಕ್ಕೆ ಪೂರ್ವಾಭ್ಯಾಸ ಮಾಡುತ್ತಿರುವ ದೃಶ್ಯವಿದು. ವಸ್ತ್ರವಿನ್ಯಾಸಕರಿಂದ ಹಿಡಿದು ತಾಂತ್ರಿಕ ಸಿಬ್ಬಂದಿವರೆಗೆ ಎಲ್ಲರನ್ನು ಒಳಗೊಂಡಿದೆ.
ಬಿಡುಗಡೆಯಾದ ಗದರ್ 2 ಸಿನಿಮಾ: ಇಂದು 22 ವರ್ಷಗಳ ಹಿಂದಿನ 'ಗದರ್' ಸಿನಿಮಾ ಸೀಕ್ವೆಲ್ ಅದ್ದೂರಿಯಾಗಿ ತೆರೆ ಕಂಡಿತು. ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದ ಮೇಲೆ ಪ್ರೇಕ್ಷಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2001ರಲ್ಲಿ ಅನಿಲ್ ಶರ್ಮಾ ಆ್ಯಕ್ಷನ್ ಕಟ್ ಹೇಳಿರುವ ಚಿತ್ರವು ರೊಮ್ಯಾಂಟಿಕ್ ಆ್ಯಂಡ್ ಆ್ಯಕ್ಷನ್ ಚಿತ್ರವಾಗಿದ್ದು, 'ಗದರ್ 2' ಕೂಡ ಅನಿಲ್ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿದೆ.