ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಆದ ನಟ ಗಣೇಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಿರುತೆರೆ ಹಾಗೂ ಕಾಮಿಡಿ ಶೋಗಳನ್ನು ಮಾಡುತ್ತಾ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಸ್ಟಾರ್ ಪಟ್ಟ ಅಲಂಕರಿಸಿದ ಅವರು ಇಂದು 41ನೇ ವಸಂತಕ್ಕೆ ಕಾಲಿಟ್ಟರು. ಆದರೆ, ಈ ಸಂಭ್ರಮದಿಂದ ಅವರು ದೂರ ಉಳಿಯುವುದಾಗಿ ಹೇಳಿದ್ದಾರೆ. ಕೆಲವು ಕಾರಣಗಳಿಂದ ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ನಾನು ಮನೆಯಲ್ಲಿಯೂ ಇರುವುದಿಲ್ಲ. ಯಾರೂ ಸಹ ಮನೆ ಹತ್ತಿರ ಬರಬೇಡಿ ಅಂತಾ ಅವರು ಅಭಿಮಾನಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
![Golden Star Ganesh Birthday; Naannadadha Matahaleva Song Released](https://etvbharatimages.akamaized.net/etvbharat/prod-images/kn-bng-02-ganesh-birthdayge-naannadadha-matahaleva-song-release-7204735_02072022123126_0207f_1656745286_861.jpg)
ಇನ್ನು ಗಣೇಶ್ ಅವರು ಫ್ಯಾಮಿಲಿ ಜೊತೆ ಹೊರಗಡೆ ಹೋಗುತ್ತಿರುವ ಕಾರಣ ಗಾಳಿಪಟ 2 ಚಿತ್ರ ತಂಡ ರೊಮ್ಯಾಂಟಿಕ್ ಹಾಡೊಂದನ್ನು ಇಂದು ಬಿಡುಗಡೆ ಮಾಡಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದೆ. ಹಾಡಿನಲ್ಲಿ ಗಣೇಶ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದು, ವೈಭವಿ ಶಾಂಡಿಲ್ಯ ಜೊತೆ ರೊಮ್ಯಾನ್ಸ್ ಮಾಡಿರುವ ಹಾಡು ಇದಾಗಿದೆ. ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಶನಲ್ಲಿ ಬರುತ್ತಿರುವ ಗಾಳಿಪಟ 2 ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸದ್ಯ ಬಿಡುಗಡೆ ಆಗಿರುವ ನಾನಾಡದ ಮಾತೆಲ್ಲವ ಹಾಡು ಸಖತ್ ರೊಮ್ಯಾಂಟಿಕ್ ಆಗಿದೆ.
- " class="align-text-top noRightClick twitterSection" data="">
ರೊಮ್ಯಾಂಟಿಕ್ ಹಾಡುಗಳ ಸರ್ದಾರ ಜಯಂತ್ ಕಾಯ್ಕಿಣಿ ಈ ಹಾಡನ್ನ ಬರೆದಿದ್ದ, ಸೋನು ನಿಗಮ್ ಕಂಠದಾನಾ ಮಾಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಕುದುರೆಮುಖದ ಹಸಿರು, ನೀರು, ಕಾಡಿನ ಮಧ್ಯೆ ಈ ಹಾಡನ್ನ ಚಿತ್ರೀಕರಿಸಲಾಗಿದೆ. ಕ್ಯಾಮರಾಮ್ಯಾನ್ ಸಂತೋಷ್ ರೈ ಪಾತಾಜೆ ಅವರ ಕ್ಯಾಮರಾ ಕಣ್ಣುಗಳಿಂದ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಪಂಡಿತ್ ಅವರ ಕಲಾ ನಿರ್ದೇಶನ ಈ ಚಿತ್ರದ ಹಾಡಿನ ತೂಕವನ್ನ ಹೆಚ್ಚಿಸಿದೆ. ಇದು ನೈಜ ಪ್ರೇಮಿಗಳ ಹಾಡಾಗಿದ್ದು, ಮನಸ್ಸಿಗೆ ಹಿಡಿಸುವ ಮತ್ತು ಆಪ್ತ ಎನಿಸುವ ತುಂಟತನದ ಹಾಡು ಇದಾಗಿದೆ.
![Golden Star Ganesh Birthday; Naannadadha Matahaleva Song Released](https://etvbharatimages.akamaized.net/etvbharat/prod-images/kn-bng-02-ganesh-birthdayge-naannadadha-matahaleva-song-release-7204735_02072022123126_0207f_1656745286_549.jpg)
ನಿರ್ಮಾಪಕ ರಮೇಶ್ ರೆಡ್ಡಿ, ಈ ಸಿನಿಮಾವನ್ನ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಆಗಸ್ಟ್ ತಿಂಗಳಲ್ಲಿ ಗಾಳಿಪಟ 2 ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಮತ್ತು ಮಕ್ಕಳ ಜೊತೆ ಹೊರಗಡೆ ಹೋಗಿದ್ದು, ತಮ್ಮ ಫ್ಯಾಮಿಲಿ ಜೊತೆ ಈ ವರ್ಷ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲಿದ್ದಾರೆ. ಸದ್ಯ ನಾನಾಡದ ಮಾತೆಲ್ಲವ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇನ್ನು ಈ ನಗು ಮುಖದ ಅರಸನ ಜನ್ಮದಿನದ ಹಿನ್ನೆಲೆ ನಟ/ನಟಿಯರು, ಅಭಿಮಾನಿಗಳು ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.
![Golden Star Ganesh Birthday; Naannadadha Matahaleva Song Released](https://etvbharatimages.akamaized.net/etvbharat/prod-images/kn-bng-02-ganesh-birthdayge-naannadadha-matahaleva-song-release-7204735_02072022123126_0207f_1656745286_899.jpg)