ETV Bharat / entertainment

ಸಕಾರಾತ್ಮಕ ಸ್ಪಂದನೆ ಸಿಕ್ಕರೂ ಕಲೆಕ್ಷನ್​ ಕಮ್ಮಿ: ಅಭಿಷೇಕ್​ ಬಚ್ಚನ್​ 'ಘೂಮರ್'​ ಗಳಿಸಿದ್ದೆಷ್ಟು?​

Ghoomer Box Office Collection Day 3: ಅಭಿಷೇಕ್​ ಬಚ್ಚನ್​​ ಮತ್ತು ಸೈಯಾಮಿ ಖೇರ್ ನಟನೆಯ 'ಘೂಮರ್​' ಚಿತ್ರ ಭಾನುವಾರ ಕೇವಲ 1.5 ಕೋಟಿ ರೂಪಾಯಿ ಗಳಿಸಿದೆ.

Ghoomer
ಘೂಮರ್
author img

By

Published : Aug 21, 2023, 8:00 PM IST

ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​​ ಮತ್ತು ನಟಿ ಸೈಯಾಮಿ ಖೇರ್ ಮುಖ್ಯಭೂಮಿಕೆಯ 'ಘೂಮರ್​' ಸಿನಿಮಾ ಆಗಸ್ಟ್ 18ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದುಕೊಂಡಿದೆ. ಆರ್​. ಬಾಲ್ಕಿ ಆ್ಯಕ್ಷನ್​ ಕಟ್ ಹೇಳಿರುವ ಸಿನಿಮಾಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆಯಾದರೂ, ಬಾಲಿವುಡ್​ ಬಾಕ್ಸ್ ಆಫೀಸ್​ ಪೈಪೋಟಿ ಹಿನ್ನೆಲೆಯಲ್ಲಿ 'ಘೂಮರ್​' ಕಲೆಕ್ಷನ್​ ತಗ್ಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಕೊಂಚ ಹಿನ್ನಡೆ ಎದುರಿಸಿದೆ.

ಭಾನುವಾರದಂದು ಕೇವಲ 1.5 ಕೋಟಿ ರೂಪಾಯಿ ಗಳಿಸುವ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಕಳಪೆ ಪ್ರದರ್ಶನ ಕಂಡಿದೆ. ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಈ ಚಿತ್ರವು ಭಾರತದಲ್ಲಿ ಬಿಡುಗಡೆಯಾದ ಮೂರು ದಿನಗಳಲ್ಲಿ 3.45 ಕೋಟಿ ರೂಪಾಯಿಗಳನ್ನು ಗಳಿಸಿದೆ. ಸಿನಿಮಾ ತೆರೆಕಂಡ ಮೊದಲ ದಿನ ಕೇವಲ 85 ಲಕ್ಷ ರೂ. ಗಳಿಸಿತ್ತು. ಎರಡನೇ ದಿನ ಶನಿವಾರದಂದು 1.2 ಕೋಟಿ ರೂ. ಮತ್ತು ಮೂರನೇ ದಿನ 1.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಬಾಕ್ಸ್​ ಆಫೀಸ್​ ಪೈಪೋಟಿ: ಆಗಸ್ಟ್ 11ರಂದು ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳಾದ ಗದರ್​ 2 ಮತ್ತು ಓಎಂಜಿ​ 2 ಸಿನಿಮಾ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿವೆ. ಗದರ್​ 2 ಕಲೆಕ್ಷನ್​ ಸಂಖ್ಯೆಯಂತೂ ಎಲ್ಲರ ಹುಬ್ಬೇರಿಸುವಂತಿದೆ. ಇತ್ತ ಓಎಂಜಿ ಸೀಕ್ವೆಲ್​ ಸಹ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್​ ಪೈಪೋಟಿ, ಸೂಪರ್​ ಹಿಟ್​ ಸಿನಿಮಾಗಳ ಸೀಕ್ವೆಲ್ಸ್​​ ಈ ಘೂಮರ್​ ಚಿತ್ರದ ಮೇಲೆ ಪರಿಣಾಮ ಬೀರಿದೆ.

ಇದನ್ನೂ ಓದಿ: ವಾವ್​! ಬಾರ್ಬಿ ಲುಕ್​ನಲ್ಲಿ ಸ್ಟಾರ್​ ನಟಿಯರು; ಇದು ಕೃತಕ ಬುದ್ಧಿಮತ್ತೆ (AI) ಮೋಡಿ

ಸ್ಫೂರ್ತಿದಾಯಕ ಕ್ರೀಡಾ ಸಿನಿಮಾದಲ್ಲಿ ಜೂನಿಯರ್​ ಬಚ್ಚನ್​​ ತರಬೇತಿದಾರನ ಪಾತ್ರದಲ್ಲಿ ಕಾಣಿಸಿಕೊಂಡರೆ, ಬಚ್ಚನ್​ ಮಾರ್ಗದರ್ಶನದಲ್ಲಿ ಕ್ರಿಕೆಟ್​ ತರಬೇತಿ ಪಡೆಯುವ ಪಾತ್ರದಲ್ಲಿ ಸೈಯಾಮಿ ಖೇರ್ ನಟಿಸಿದ್ದಾರೆ. 'ಘೂಮರ್' ಚಿತ್ರಕ್ಕೆ​ ಆರ್. ಬಾಲ್ಕಿ ಅವರೇ ಕಥೆ ಬರೆದು ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಶಬಾನಾ ಅಜ್ಮಿ ಮತ್ತು ಅಂಗದ್​ ಬೇಡಿ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಘೂಮರ್ ಚಿತ್ರಕಥೆ..: ಘೂಮರ್ ಚಿತ್ರಕಥೆಯು ಮಹಿಳಾ ಆಟಗಾರ್ತಿ ಅನಿನಾ ಮೇಲೆ ಕೇಂದ್ರೀಕೃತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಮುನ್ನ ಭೀಕರ ಅಪಘಾತಕ್ಕೊಳಗಾಗಿ ತಮ್ಮ ಬಲಗೈ ಕಳೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಹತಾಶ ಮನೋಭಾವ ಹೊಂದುತ್ತಾರೆ. ಈ ಹತಾಶ ಆಟಗಾರ್ತಿಯೇ ಅನಿನಾ ಅವರ ಮುಂದಿನ ಹೋರಾಟಕ್ಕೆ ಪ್ರೇರಣೆ ಒದಗಿಸುತ್ತದೆ. ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳುತ್ತಾರೆ. ಬೌಲರ್​ ಆಗಿ ದೇಶಕ್ಕೆ ಕೊಡುಗೆ ನೀಡಲು ಉತ್ತಮ ತರಬೇತಿ ಪಡೆಯಲು ನಿರ್ಧರಿಸುತ್ತಾರೆ. ಅಭಿಷೇಕ್​ ಬಚ್ಚನ್​​ ಕೋಚ್ ಆಗಿ ಅವರಿಗೆ ಮಾರ್ಗದರ್ಶನ ನೀಡುತ್ತಾರೆ. ಇದೇ ಘೂಮರ್​ ಸಿನಿಮಾದ ಹೂರಣ. ಚಿತ್ರದಲ್ಲಿ ಹೊಸ ಬೌಲಿಂಗ್​ ಶೈಲಿಯನ್ನು ವಿನ್ಯಾಸಗೊಳಿಸಲಾಗಿದೆ. ಸಿನಿಮಾ ಅಥ್ಲೀಟ್​ ಕರೋಲಿ ಟಕಾಕ್ಸ್​ (Karoly Takacs) ಸಾಧನೆಯಿಂದ ಸ್ಫೂರ್ತಿ ಪಡೆದಿದೆ.

ಇದನ್ನೂ ಓದಿ: ನಿರ್ದೇಶಕನ ಕ್ಯಾಪ್​ ತೊಟ್ಟ ಸೃಜನ್​ ಲೋಕೇಶ್​; ಸಿನಿಮಾ ಯಾವುದು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.