ETV Bharat / entertainment

Deshmukh family: ವಿಕ್ರಮ್​ ಚಂದ್ರನನ್ನು ಸ್ಪರ್ಶಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ರಿತೇಶ್​ ದೇಶ್​ಮುಖ್​ ಜೆನಿಲಿಯಾ ಕುಟುಂಬ - ರಿತೇಶ್​ ದೇಶ್​ಮುಖ್

Genelia Riteish Deshmukh family: ಚಂದ್ರಯಾನ 3 ಯಶಸ್ವಿಯಾಗುತ್ತಿದ್ದಂತೆ ತಾರಾ ದಂಪತಿ ರಿತೇಶ್​ ದೇಶ್​ಮುಖ್​ ಮತ್ತು ಜೆನಿಲಿಯಾ ಡಿಸೋಜಾ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

Riteish Deshmukh Genelia D'Souza
ರಿತೇಶ್​ ಜೆನಿಲಿಯಾ
author img

By ETV Bharat Karnataka Team

Published : Aug 24, 2023, 12:32 PM IST

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇಸ್ರೋ ಮಹತ್ತರ ಸಾಧನೆಗೈದಿದೆ. ಚಂದ್ರಯಾನ 3 ಗಗನ ನೌಕೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್​ ಆಗುವಲ್ಲಿ ಯಶಸ್ವಿಯಾಗಿದೆ. ನಿನ್ನೆ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್​ ಚಂದ್ರನನ್ನು ಸ್ಪರ್ಶಿಸಿದ್ದು, ದಕ್ಷಿಣ ಧ್ರುವದಲ್ಲಿ ಗಗನ ನೌಕೆಯನ್ನು ಇಳಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ನಮ್ಮ ಭಾರತ ಪಾತ್ರವಾಗಿದೆ. ವಿಕ್ರಮ್​ ಚಂದ್ರನನ್ನು ಸ್ಪರ್ಶಿಸುತ್ತಿದ್ದಂತೆ, ಎಲ್ಲೆಡೆ ಸಂಭ್ರಮಾಚರಣೆ ಮಾಡಲಾಗಿದೆ. ಸಿನಿ ಗಣ್ಯರು ಸಹ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಕುಣಿದು ಕುಪ್ಪಳಿಸಿದ ರಿತೇಶ್​ ಜೆನಿಲಿಯಾ ಫ್ಯಾಮಿಲಿ: ಬಾಲಿವುಡ್​ ತಾರಾ ದಂಪತಿ ರಿತೇಶ್​ ದೇಶ್​ಮುಖ್​ ಮತ್ತು ಜೆನಿಲಿಯಾ ಡಿಸೋಜಾ ಸಹ ಸೋಷಿಯಲ್​ ಮೀಡಿಯಾದಲ್ಲಿ ಸುಂದರ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ದೃಶ್ಯ ಸಖತ್​ ವೈರಲ್​ ಆಗಿ ಅಭಿಮಾನಿಗಳಿಂದ ಪ್ರೀತಿ ಗಳಿಸಿದ್ದಾರೆ. ಹಂಚಿಕೊಂಡಿರುವ ದೃಶ್ಯದಲ್ಲಿ ಸಂಪೂರ್ಣ ಕುಟುಂಬ ಕಾಣಿಸಿಕೊಂಡಿದೆ. ರಿತೇಶ್​ ಮತ್ತು ಜೆನಿಲಿಯಾ ತಮ್ಮ ಇಬ್ಬರು ಮಕ್ಕಳೊಂದಿಗೆ ಚಂದ್ರಯಾನ 3ರ ಲೈವ್ ಅನ್ನು ಟಿವಿಯಲ್ಲಿ ವೀಕ್ಷಿಸಿದರು. ವಿಕ್ರಮ್​ ಲ್ಯಾಂಡರ್​ ಚಂದ್ರನನ್ನು ಸ್ಪರ್ಶಿಸುತ್ತಿದ್ದಂತೆ ಇಡೀ ಫ್ಯಾಮಿಲಿ ಕುಣಿದು ಕುಪ್ಪಳಿಸಿದೆ. ಎಲ್ಲರಂತೆ ಈ ಜೋಡಿ ಸಹ ದೇಶದ ಸಾಧನೆಯನ್ನು ಮೆಚ್ಚಿ ಕೊಂಡಾಡಿದೆ.

Riteish Deshmukh Genelia D'Souza
ರಿತೇಶ್​ ಜೆನಿಲಿಯಾ ಫ್ಯಾಮಿಲಿ

ಜನಪ್ರಿಯ ಸೆಲೆಬ್ರಿಟಿ ಕಪಲ್.. ರಿತೇಶ್​ ದೇಶ್​ಮುಖ್​ ಮತ್ತು ಜೆನಿಲಿಯಾ ಡಿಸೋಜಾ ಜನಪ್ರಿಯ ಸೆಲೆಬ್ರಿಟಿ ಕಪಲ್​​. ಈ ಜೋಡಿ ಅಭಿನಯ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಸಕ್ರಿಯ. ಹೊಸ ಪೋಸ್ಟ್​​ಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇವರ ಫನ್ನಿ ವಿಡಿಯೋಗಳು ಹೆಚ್ಚಾಗಿ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತವೆ. ಈ ಮೂಲಕ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಸಂಪಾದಿಸುತ್ತಾರೆ. ಇದೀಗ ಅವರ ಹೊಸ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ: Photos: ಕ್ರಿಕೆಟ್​ ವಿಶ್ವಕಪ್​​ ಟ್ರೋಫಿ ಅನಾವರಣಗೊಳಿಸಿದ ರೂಪವತಿ ಊರ್ವಶಿ ರೌಟೇಲಾ

ಇಸ್ರೋ ತಂಡಕ್ಕೆ ಅಭಿನಂದನೆ: ನಟಿ ಜೆನಿಲಿಯಾ ಡಿಸೋಜಾ ತಮ್ಮ ಅಧಿಕೃತ ಇನ್​ಸ್ಟಾ ಸ್ಟೋರಿಯಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ದಂಪತಿ ತಮ್ಮ ಮುದ್ದಾದ ಮಕ್ಕಳೊಂದಿಗೆ ಟಿವಿ ವೀಕ್ಷಿಸಿರುವುದು ದಾಖಲಾಗಿದೆ. ಚಂದ್ರಯಾನ 3 ಲ್ಯಾಂಡರ್​ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಇಡೀ ಕುಟುಂಬ ಸಂಭ್ರಮಿಸಿದೆ. ಈ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದೆ. ಅಲ್ಲದೇ ಸ್ಟಾರ್ ಕಪಲ್​ ಇಡೀ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ.

ಇದನ್ನೂ ಓದಿ: ವಿವಾದಿತ 'ಚಾಯ್‌ವಾಲ' ಟ್ವೀಟ್‌ ಬಳಿಕ ಚಂದ್ರಯಾನ-3 ಯಶಸ್ಸಿಗೆ ನಟ ಪ್ರಕಾಶ್‌ ರಾಜ್‌ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.