ETV Bharat / entertainment

ಅ. 20ಕ್ಕೆ 'ಗಣಪತ್​​' ಬಿಡುಗಡೆ: ಆ್ಯಕ್ಷನ್​ ಸಿನಿಮಾದ ಕನ್ನಡ ಟ್ರೇಲರ್​ ನೋಡಿದ್ರಾ? - Ganapath latest news

Ganapath Trailer Release: ಟೈಗರ್ ಶ್ರಾಫ್‍ ಹಾಗೂ ಕೃತಿ ಸನೋನ್​ ಅಭಿನಯದ 'ಗಣಪತ್​​' ಟ್ರೇಲರ್ ಅನಾವರಣಗೊಂಡಿದೆ.

Ganapath trailer
ಗಣಪತ್ ಟ್ರೇಲರ್
author img

By ETV Bharat Karnataka Team

Published : Oct 10, 2023, 1:54 PM IST

ಬಾಲಿವುಡ್​​ ಸ್ಟಾರ್ಸ್ ಟೈಗರ್ ಶ್ರಾಫ್‍ ಹಾಗೂ ಕೃತಿ ಸನೋನ್​ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗಣಪತ್​​'. ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಗಣಪತ್‍'ನ ಟ್ರೇಲರ್ ಅನಾವರಣಗೊಂಡಿದೆ. ಟೈಗರ್ ಶ್ರಾಫ್‍ - ಕೃತಿ ಸನೋನ್ ಅವರ ಸಾಹಸ ಸನ್ನಿವೇಶಗಳು ಮತ್ತು ಯಂಗ್​​ ಸ್ಟಾರ್ಸ್ ಜೊತೆ ಬಿಗ್​ ಬಿ ಅಮಿತಾಭ್ ಬಚ್ಚನ್‍ ಕಾಂಬಿನೇಷನ್ ಚಿತ್ರದ ಮೇಲಿರುವ ಕುತೂಹಲ ದುಪ್ಪಟ್ಟುಗೊಳಿಸಿದೆ.

  • " class="align-text-top noRightClick twitterSection" data="">

ಆ್ಯಕ್ಷನ್​​ ಪ್ರಪಂಚಕ್ಕೆ ಕರೆದೊಯ್ಯಲಿದೆ ಸಿನಿಮಾ: ಇದೀಗ ಬಿಡುಗಡೆಗೊಂಡಿರುವ ಟ್ರೇಲರ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಅದ್ಭುತ ತಾರಾಗಣ ಟ್ರೇಲರ್​ ದೃಶ್ಯಗಳ ಮೆರುಗು ಹೆಚ್ಚಿಸಿದೆ. ಈ ಚಿತ್ರ ಪ್ರೇಕ್ಷಕರನ್ನು ಆ್ಯಕ್ಷನ್​​ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದು ಚಿತ್ರತಂಡದ ವಿಶ್ವಾಸ.

ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಿರಲಿವೆ. ಜಗತ್ತಿನಾದ್ಯಂತ ಇರುವ ನುರಿತ ಗ್ರಾಫಿಕ್ಸ್ ತಜ್ಞರ ಸ್ಪರ್ಶ ಈ ಚಿತ್ರಕ್ಕಿದೆ. ಈವರೆಗೆ ಮೂಡಿ ಬಂದಿರುವ ಯಾವುದೇ ಭಾರತೀಯ ಸಿನಿಮಾದಲ್ಲಿ ನೋಡಿರದ ವಿಎಫ್‍ಎಕ್ಸ್ ಕೆಲಸ ಈ ಚಿತ್ರದಲ್ಲಿ ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ಗಣಪತ್‍ ಭಾರತೀಯ ಚಿತ್ರರಂಗದಲ್ಲಿ ಹೊಸ ಮಾದರಿ. ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಅನುಭವ ನೀಡುವ ಪ್ರಯತ್ನವನ್ನು ಈ ಚಿತ್ರತಂಡ ಮಾಡಿದೆ ಎಂಬುದು ನಿರ್ಮಾಪಕರಲ್ಲೊಬ್ಬರಾದ ಜಾಕಿ ಭಗ್ನಾನಿ ಅವರ ಅನಿಸಿಕೆ.

ಇದನ್ನೂ ಓದಿ: ಎಸ್‌ಎಸ್ ರಾಜಮೌಳಿ ಜನ್ಮದಿನ: ದೂರದೃಷ್ಟಿಯ ನಿರ್ದೇಶಕರಿಂದ ಹೆಣೆಯಲ್ಪಟ್ಟ ಅತ್ಯುತ್ತಮ ಖಳನಾಯಕ ಪಾತ್ರಗಳಿವು!

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನಿರ್ಮಾಪಕರು, ಗಣಪತ್‍ ಚಿತ್ರದ ಹಾಡು ಮತ್ತು ಟೀಸರ್​ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ನೋಡಿ ಹೃದಯ ತುಂಬಿ ಬಂದಿದೆ. ನಮ್ಮ ಕಲ್ಪನೆ ಪ್ರೇಕ್ಷಕರಿಗೂ ಇಷ್ಟವಾಗಿರುವುದನ್ನು ನೋಡಿ ಖುಷಿಯಾಗಿದೆ. ಟ್ರೇಲರ್​ಗೂ ಅದೇ ಮಟ್ಟದ ಪ್ರೀತಿ ಹಾಗೂ ಮೆಚ್ಚುಗೆ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಷಯಗಳಿದ್ದು, ಮುಂದಿನ ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Animal: ರೊಮ್ಯಾಂಟಿಕ್​ ಮೂಡ್​ನಲ್ಲಿ ರಣ್​ಬೀರ್​ - ರಶ್ಮಿಕಾ; 'ಹುವಾ ಮೈನ್' ಹಾಡು ನಾಳೆ ಬಿಡುಗಡೆ

ಹತ್ತು ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಬಾಲಿವುಡ್‍ನ ಖ್ಯಾತ ನಿರ್ಮಾಣ ಸಂಸ್ಥೆಯಾದ ಪೂಜಾ ಎಂಟರ್​ಟೈನ್ಮೆಂಟ್ ಬ್ಯಾನರ್ ಅಡಿ ಗಣಪತ್‍ ಚಿತ್ರ ನಿರ್ಮಾಣಗೊಂಡಿದೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಹೊಸ ಸಿನಿಅನುಭವ ನೀಡುವುದಕ್ಕೆ ಗಣಪತ್​ ಸಜ್ಜಾಗಿದೆ. ಪೂಜಾ ಎಂಟರ್‌ ಪ್ರೈಸಸ್ ಅರ್ಪಿಸುತ್ತಿರುವ ಗಣಪತ್‍ (ಎ ಹೀರೋ ಈಸ್‍ ಬಾರ್ನ್) ಚಿತ್ರವನ್ನು ವಾಶು ಭಗ್ನಾನಿ, ಜಾಕಿ ಭಗ್ನಾನಿ, ದೀಪಶಿಖಾ ದೇಶ್ ಮುಖ್ ಮತ್ತು ವಿಕಾಸ್‍ ಬಹ್ಲ್ ಜಂಟಿಯಾಗಿ ನಿರ್ಮಿಸಿದ್ದಾರೆ. ವಿಕಾಸ್‍ ಬಹ್ಲ್ ನಿರ್ದೇಶಿಸಿರುವ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಅಕ್ಟೋಬರ್ 20ರಂದು ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.