'ಆರ್ಆರ್ಆರ್' ಖ್ಯಾತಿಯ ರಾಮ್‌ಚರಣ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ನಿರ್ದೇಶಕ ಶಂಕರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಸಿನಿಮಾದಿಂದ ಇಲ್ಲಿಯವರೆಗೆ ಯಾವುದೇ ಅಪ್ಡೇಟ್ಸ್ ಬಂದಿಲ್ಲ. ಆದರೆ, ಈ ಚಿತ್ರ ಸೆಟ್ಟೇರಿದ ದಿನದಿಂದಲೂ ಕೆಲವು ವಿಚಾರಗಳು ಸೋರಿಕೆಯಾಗುತ್ತಿವೆ. ಇತ್ತೀಚೆಗೆ ಸಿನಿಮಾದ ಹಾಡು ಲೀಕ್ ಆಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದ ಸೈಬರ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
-
#GameChanger pic.twitter.com/1pWlhYFT1I
— Shankar Shanmugham (@shankarshanmugh) October 23, 2023 " class="align-text-top noRightClick twitterSection" data="
">#GameChanger pic.twitter.com/1pWlhYFT1I
— Shankar Shanmugham (@shankarshanmugh) October 23, 2023#GameChanger pic.twitter.com/1pWlhYFT1I
— Shankar Shanmugham (@shankarshanmugh) October 23, 2023
ರಾಮ್‌ಚರಣ್ ನಟನೆಯ ಸಿನಿಮಾ ಆಗಿದ್ದರಿಂದ 'ಗೇಮ್ ಚೇಂಜರ್' ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಇತ್ತೀಚೆಗೆ ಈ ಸಿನಿಮಾದ ಹಾಡು ಆನ್ಲೈನ್ನಲ್ಲಿ ಸೋರಿಕೆಯಾಗಿ, ವೈರಲ್ ಆಗಿತ್ತು. ಒಪ್ಪಿಗೆಯಿಲ್ಲದೇ, ಹಾಡು ಲೀಕ್ ಆಗಿದ್ದರ ಬಗ್ಗೆ ಕೋಪಗೊಂಡಿದ್ದ ಚಿತ್ರ ತಯಾರಕರು ಅಧಿಕೃತ ದೂರು ದಾಖಲಿಸಿದ್ದರು. ಅಲ್ಲದೇ, ಎಫ್ಐಆರ್ನ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹಂಚಿಕೊಂಡಿದ್ದರು. ಇದೀಗ ಹಾಡು ಸೋರಿಕೆಗೆ ಕಾರಣವಾದ ಇಬ್ಬರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಲೀಕ್ ಆದ ಹಾಡು ಅಂತಿಮವಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಇದು ಜಸ್ಟ್ ಟೆಸ್ಟಿಂಗ್ ಹಾಡಾಗಿತ್ತು. ಅಲ್ಲದೇ ಸ್ಟಾರ್ ಗಾಯಕರು ಈ ಹಾಡಿಗೆ ಧ್ವನಿಯಾಗಲಿದ್ದಾರೆ. ಫೈನಲ್ ಮಿಕ್ಸ್ನಲ್ಲಿ ಇನ್ನೂ ಸಾಕಷ್ಟು ಕೆಲಸಗಳಿವೆಯಂತೆ. ಸೌಂಡ್ ಮಿಕ್ಸಿಂಗ್ ನಂತರ ಈ ಹಾಡು ಮತ್ತಷ್ಟು ಚೆನ್ನಾಗಿ ಮೂಡಿ ಬರಲಿದೆ ಎನ್ನಲಾಗಿದೆ. ಇದು ಒರಿಜಿನಲ್ ಹಾಡು ಅಲ್ಲ. 15 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಆದರೆ, ಸೋರಿಕೆಯಾದ 30 ಸೆಕೆಂಡ್ಗಳ ಹಾಡು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಇದನ್ನೂ ಓದಿ: 'ಆರ್ಆರ್ಆರ್' ತಾರೆ ರಾಮ್‌ಚರಣ್ ಅವರ ಹೊಸ ಫ್ರೆಂಡ್ ಇವರೇ ನೋಡಿ!
ಇನ್ನೂ 'ಗೇಮ್ ಚೇಂಜರ್' ಚಿತ್ರದ ಮೊದಲ ಹಾಡು 'ಜರಗಂಡಿ'ಯನ್ನು ದೀಪಾವಳಿ ಸಮಯದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಹಾಡಿನ ಎಸ್.ತಮನ್ ಸಂಗೀತ ಸಂಯೋಜಿಸಿದ್ದಾರೆ. ಹಾಡು ತೆಲುಗು, ತಮಿಳು, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರತಂಡ ಹೀಗಿದೆ.. 'ಗೇಮ್ ಚೇಂಜರ್' ಸಿನಿಮಾವನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಅದ್ಧೂರಿ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ಆಕ್ಷನ್ ಎಂಟರ್ಟೈನ್ಮೆಂಟ್ ಚಿತ್ರವಾಗಿ ಇದು ತಯಾರಾಗುತ್ತಿದೆ. ಸಿನಿಮಾದಲ್ಲಿ ರಾಮ್‌ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ಚರಣ್ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ತಮನ್ ಸಂಗೀತಾ ಸಂಯೋಜನೆ ಇರಲಿದೆ. ಹಿರಿಯ ನಟ ಎಸ್.ಜೆ ಸೂರ್ಯ, ಅಂಜಲಿ, ಶ್ರೀಕಾಂತ್, ಸುನೀಲ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಆಗಸ್ಟ್ ನಂತರ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಪತ್ನಿ, ಮಗಳೊಂದಿಗೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷರಾದ ನಟ ರಾಮ್ ಚರಣ್: ಎಲ್ಲಿಗೆ ಪಯಣ?