ಹೈದರಾಬಾದ್: ಬಾಲಿವುಡ್ ನಟಿ ರಿಚಾ ಚಡ್ಡಾ ಅವರ ಗಲ್ವಾನ್ ಟ್ವೀಟ್ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ರಿಚಾ ಅವರ ಈ ವಿವಾದಾತ್ಮಕ ಟ್ವೀಟ್‌ಗೆ ಬಾಲಿವುಡ್ ತಾರೆಯರಲ್ಲಿ ಕೆಲವು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಕೆಲವರು ನಟಿಯನ್ನು ಬೆಂಬಲಿಸುತ್ತಿದ್ದಾರೆ.
ರಿಚಾ ಚಡ್ಡಾ ಅವರ ವಿವಾದಾತ್ಮಕ ಟ್ವೀಟ್ ಏನು? ಇಡೀ ವಿಷಯವು ನಟಿಯ ಆಕ್ಷೇಪಾರ್ಹ ಮತ್ತು ವಿವಾದಾತ್ಮಕ ಟ್ವೀಟ್‌ನೊಂದಿಗೆ ಪ್ರಾರಂಭವಾಗಿದೆ, ಇದರಲ್ಲಿ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ''ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಆದೇಶವನ್ನು ಜಾರಿಗೆ ತರಲು ಭಾರತೀಯ ಸೇನೆ ಸಿದ್ಧವಾಗಿದೆ. ನಾವು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ, ನಾವು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪೂರ್ಣಗೊಳಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದರು, ಇದಕ್ಕೆ ನಟಿ ರಿಚಾ ಚಡ್ಡಾ 'ಗಲ್ವಾನ್ನಿಂದ್ ಹೈಯ್' ಎಂದು ಟ್ವೀಟ್ ಮಾಡಿ ಚರ್ಚೆಗೆ ಕಾರಣವಾಗಿದ್ದರು.
ನಟಿ ಮಾಡಿದ ಟ್ವೀಟ್‌ಗೆ ದೇಶದೆಲ್ಲೆಡೆ ಭಾರಿ ವಿರೋಧ ವ್ಯಕ್ತವಾಗಿದ್ದು, ಅನೇಕ ನಟ - ನಟಿಯರು ಸಾಮಾಜಿಕ ಜಾಲತಾಣದಲ್ಲಿ ನಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕೆಲ ಕಲಾವಿದರು ನಟಿಗೆ ಬೆಂಬಲವಾಗಿಯೂ ನಿಂತಿದ್ದಾರೆ.
ನಟಿಯ ವಿರುದ್ಧ ಯಾರು ಪ್ರತಿಭಟನೆ ನಡೆಸುತ್ತಿದ್ದಾರೆ?
ಅಕ್ಷಯ್ ಕುಮಾರ್: 'ಇದನ್ನು ನೋಡಲು ನೋವಾಗುತ್ತದೆ. ಯಾವತ್ತೇ ಆಗಲಿ ನಮ್ಮ ಸೇನಾಪಡೆಗಳಿಗೆ ನಾವು ಕೃತಜ್ಞ ರಹಿತರಾಗಿಬಾರದು, ಅವರಿಂದಲೇ ಇಂದು ನಾವಿಲ್ಲಿದ್ದೇವೆ ಎಂದಿದ್ದಾರೆ.
ಅನುಪಮ್ ಖೇರ್: ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಖೇರ್ ತಮ್ಮ ಬಹಿರಂಗ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದು 'ದೇಶಕ್ಕೆ ಕೆಟ್ಟದ್ದನ್ನು ಮಾಡುವ ಮೂಲಕ ಕೆಲವು ಜನರು ಜನಪ್ರಿಯರಾಗಲು ಪ್ರಯತ್ನಿಸುವುದು ಹೇಡಿಗಳು ಮತ್ತು ಸಣ್ಣ ಜನರ ಕೆಲಸ ಎಂದು ನಟಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ರವೀನಾ ಟಂಡನ್: ಜನರು ವಿಭಿನ್ನ ರಾಜಕೀಯ ಅಭಿಪ್ರಾಯಗಳು ಮತ್ತು ಆದ್ಯತೆಗಳನ್ನು ಹೊಂದಿದ್ದಾರೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ನಮ್ಮ ಸೇನೆ, ಸೈನಿಕರು, ನಮ್ಮ ಹುತಾತ್ಮರು ಮತ್ತು ಅವರ ಕುಟುಂಬಗಳು ಮಾಡಿದ ತ್ಯಾಗದ ವಿಷಯಕ್ಕೆ ಬಂದಾಗ, ಯಾವುದೇ ವ್ಯಂಗ್ಯವಿಲ್ಲ ಮತ್ತು ತಮಾಷೆ ಮಾಡಬಾರದು ಎಂದು ರವೀನಾ ಟ್ವೀಟ್ ಮಾಡಿದ್ದಾರೆ.
ಗಜೇಂದ್ರ ಚೌಹಾಣ್: 'ಮಹಾಭಾರತ' ಖ್ಯಾತಿಯ ನಟ ಗಜೇಂದ್ರ ಚೌಹಾಣ್ ಅವರು ಟಿವಿ ಮತ್ತು ಬಾಲಿವುಡ್‌ನಲ್ಲಿ ಹೆಸರುವಾಸಿಯಾಗಿದ್ದು, ನಟಿಯ ವಿವಾದಾತ್ಮಕ ಹೇಳಿಕೆಗೆ 'ರಿಚಾ ಚಡ್ಡಾ ಯಾರು? ನಮ್ಮ ನಾಯಕನನ್ನು ಅವಮಾನಿಸುವ ಕೆಳಮಟ್ಟದ ಯತ್ನ.. ಅವಳಿಗೆ ನಾಚಿಕೆಯಾಗಬೇಕು' ಉತ್ತರಿಸಿದ್ದಾರೆ.
ಪರೇಶ್ ರಾವಲ್: ಬಾಲಿವುಡ್ ಹಿರಿಯ ನಟ ಮತ್ತು ನಾಯಕ ಪರೇಶ್ ರಾವಲ್ ಅವರು ರಿಚಾ ಚಡ್ಡಾ ವಿರುದ್ಧ ಕಮೆಂಟ್ ಮಾಡಿದ್ದು 'ಭಾರತೀಯ ಸಶಸ್ತ್ರ ಪಡೆಗಳು, ಅವರಿಂದಲೇ ಇಂದು ನಾವಿಲ್ಲಿದ್ದೇವೆ ಎಂದು ಹೇಳಿದ್ದಾರೆ.
ಅಶೋಕ್ ಪಂಡಿತ್: ನಟಿಯ ವಿರುದ್ಧ ಕ್ರಮ ಕೈಗೊಂಡು, ಖ್ಯಾತ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ನಟಿಯ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ನಾನು ನಟಿ ರಿಚಾ ಚಡ್ಡಾ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ (ಮುಂಬೈ) ಪೊಲೀಸ್ ದೂರು ದಾಖಲಿಸಿದ್ದೇನೆ, ನಮ್ಮ ಜವಾನರನ್ನು ಗೇಲಿ ಮಾಡುವ ಹಕ್ಕು ಯಾರಿಗೂ ಇಲ್ಲ, ದೇಶದ ಕಾನೂನಿನ ಪ್ರಕಾರ ಮುಂಬೈ ಪೊಲೀಸರು ಅವರ ವಿರುದ್ಧ ಕ್ರಮಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ವಿವೇಕ್ ಅಗ್ನಿಹೋತ್ರಿ:'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ರಿಚಾ ಚಡ್ಡಾ ಅವರನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. 'ಈ ನಡವಳಿಕೆಯಿಂದ ನನಗೆ ಆಶ್ಚರ್ಯವಾಗಿಲ್ಲ, ಅವರು ನಿಜವಾಗಿಯೂ ಭಾರತ ವಿರೋಧಿ ಎಂದು ಹೃದಯದಿಂದ ಬಂದಿದೆ ಇದಕ್ಕಾಗಿಯೆ ಜನರು ಬಾಲಿವುಡ್ ಅನ್ನು ಬಹಿಷ್ಕರಿಸಲು ಬಯಸುತ್ತಾರೆ ಎಂದು ಹೇಳಿದರು.
ಯಾರು ಬೆಂಬಲಿಸುತ್ತಿದ್ದಾರೆ?
ಪ್ರಕಾಶ್ ರಾಜ್: ಈ ವಿವಾದಾತ್ಮಕ ಪ್ರಕರಣದಲ್ಲಿ ನಟಿಯ ಪರವಾಗಿ ಬಂದಿರುವ ಅಕ್ಷಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್, ಅಕ್ಷಯ್ ಅವರ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿ 'ಅಕ್ಷಯ್ ಕುಮಾರ್ ನಿಮ್ಮಿಂದ ನಾವು ಇದನ್ನು ನಿರೀಕ್ಷಸಿರಲಿಲ್ಲ, ರಿಚಾ ಚಡ್ಡಾ ಅವರು ನಿಮಗಿಂತ ನಮಗೆ ಹೆಚ್ಚು ಸಂಬಂಧಪಟ್ಟವರಾಗಿದ್ದಾರೆ ಸಾರ್.. ಎಂದಿದ್ದಾರೆ.
ಇದಕ್ಕೂ ಮೊದಲು, ಪ್ರಕಾಶ್ ರಾಜ್ ಅವರು ರಿಚಾ ಅವರ ಗಲ್ವಾನ್ ಟ್ವೀಟ್‌ನಲ್ಲಿ, 'ನಾವು ನಿಮ್ಮೊಂದಿಗೆ ಇದ್ದೇವೆ ರಿಚಾ ಚಡ್ಡಾ, ನೀವು ಏನು ಹೇಳಲು ಬಯಸುತ್ತೀರಿ ಎಂದು ನಮಗೆ ತಿಳಿದಿದೆ' ಎಂದು ಬರೆದುಕೊಂಡಿದ್ದಾರೆ.
ಸ್ವರಾ ಭಾಸ್ಕರ್: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಯಾವಾಗಲೂ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುವ ಮೂಲಕ ವಿವಾದಲ್ಲಿರುತ್ತಾರೆ. ಈಗ ಈ ವಿಷಯದಲ್ಲಿ ಸ್ವರಾ ಅವರು ರಿಚಾ ಚಡ್ಡಾ ಅವರನ್ನು ಬೆಂಬಲಿಸುತ್ತಾ, 'ದೇವರು ನಿಮಗೆ ಸಾಕಷ್ಟು ಪ್ರೀತಿ ಮತ್ತು ಶಕ್ತಿಯನ್ನು ನೀಡಲಿ, ರಿಚಾ' ಎಂದು ಬರೆದಿದ್ದಾರೆ.
ಇದನ್ನೂ ಓದಿ: ರಿಚಾ ಚಡ್ಡಾ ವಿವಾದಿತ ಟ್ವೀಟ್.. ಕ್ಷಮೆ ಕೋರಿದ ಬಾಲಿವುಡ್ ನಟಿ