ETV Bharat / entertainment

ದಸರಾ ಧಮಾಕ: ಮನೆಯಲ್ಲೇ ಕುಟುಂಬಸ್ಥರೊಂದಿಗೆ ನೋಡಬಹುದು ಗಾಳಿಪಟ 2 ಸಿನಿಮಾ - galipata 2 movie

ದಸರಾ ಹಿನ್ನೆಲೆ ಗಾಳಿಪಟ 2 ಸಿನಿಮಾ ಅಕ್ಟೋಬರ್ 5ರಂದು ಒಟಿಟಿಗೆ ಎಂಟ್ರಿ ಕೊಡಲಿದೆ.

galipata 2 movie in zee5 on October 5
ಗಾಳಿಪಟ 2 ಸಿನಿಮಾ
author img

By

Published : Sep 28, 2022, 4:50 PM IST

ಬೆಳ್ಳಿ ತೆರೆ ಸಿನಿಮಾ ಪ್ರೇಕ್ಷಕರನ್ನು ರಂಜಿಸಿರುವ ಸ್ಟಾರ್ ಸಿನಿಮಾಗಳು ಈಗ ಸ್ಮಾಲ್ ಸ್ಕ್ರೀನ್​ನಲ್ಲಿ ಮೋಡಿ ಮಾಡುತ್ತಿವೆ. ‌ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ರು ಕಾಂಬಿನೇಶನ್​​ನಲ್ಲಿ ಮೂಡಿ ಬಂದ ಗಾಳಿಪಟ 2 ಸಿನಿಮಾ ತೆರೆ ಮೇಲೆ ಮೋಡಿ ಮಾಡಿತ್ತು. ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಚಿತ್ರಕ್ಕೆ ಸಿನಿಮಾ ಪ್ರೇಮಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆಗಸ್ಟ್ 12ರಂದು ರಾಜ್ಯ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿಯೂ ಹಾರಿದ್ದ ಗಾಳಿಪಟ 2 ಸಿನಿಮಾ ಹೊಸ ದಾಖಲೆ ಬರೆದಿತ್ತು. ಸ್ನೇಹ, ಪ್ರೇಮ, ವಿರಹ, ತ್ಯಾಗ, ಭಾವನೆಯ ಜೊತೆಗೆ ಒಂದಿಷ್ಟು ಮಸಾಲೆ ಸೇರಿಸಿ ಭಟ್ರು ತಯಾರಿಸಿದ್ದ ಸಿನಿಮಾ ಈಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ನಟಿಸಿದ್ದ ಈ ಚಿತ್ರದಲ್ಲಿ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದೊಳ್ಳೆ ಫ್ಯಾಮಿಲಿ ಎಂಟರ್​ಟೈನ್​ಮೆಂಟ್ ಆಗಿರುವ ಗಾಳಿಪಟ 2 ಸಿನಿಮಾ ಅಕ್ಟೋಬರ್ 5ರಂದು ದಸರಾ ಹಿನ್ನೆಲೆ ಝೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ತೆರೆ ಮೇಲೆ ಚಾಮರಾಜನಗರ ಆಮ್ಲಜನಕ ದುರಂತ: ಲಾಭಾಂಶದ ಒಂದು ಭಾಗ ಸಂತ್ರಸ್ತರಿಗೆ

ಹಿರಿಯ ನಟ ಅನಂತ್ ನಾಗ್ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಪದ್ಮಜಾ ರಾವ್‌, ಸುಧಾ ಬೆಳವಾಡಿ, ರಂಗಾಯಣ ರಘು ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಸಂತೋಷ್‌ ರೈ ಪಾತಾಜೆ ಕ್ಯಾಮೆರಾ ವರ್ಕ್, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ರಮೇಶ್‌ ರೆಡ್ಡಿ ನಿರ್ಮಾಣದಲ್ಲಿ ಮೂಡಿಬಂದ ಗಾಳಿಪಟ 2 ಸಿನಿಮಾವನ್ನು ಥಿಯೇಟರ್​ನಲ್ಲಿ ಮಿಸ್ ಮಾಡಿಕೊಂಡವರು ಈಗ ಮನೆಯಲ್ಲಿಯೇ ಕುಳಿತು ನೋಡಬಹುದು. ಈಗಾಗಲೇ ಝೀ5 ಒಟಿಟಿಯಲ್ಲಿ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಹಂಗಾಮ ಸೃಷ್ಟಿಸಿದ್ದು, ಟಾಪ್ ಟ್ರೇಡಿಂಗ್​ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.