ETV Bharat / entertainment

ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ 22 ವರ್ಷಗಳ ಹಿಂದಿನ 'ಗದರ್' ಸೀಕ್ವೆಲ್ - ಗದರ್ 2 ಬಿಡುಗಡೆ ದಿನಾಂಕ

22 ವರ್ಷಗಳ ಹಿಂದಿನ ಗದರ್ ಸಿನಿಮಾದ ಸೀಕ್ವೆಲ್​ ಈ ಸಾಲಿನ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇಂದು ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.

Gadar 2 poster
ಗದರ್ 2 ಪೋಸ್ಟರ್
author img

By

Published : Jan 26, 2023, 8:35 PM IST

ನಟ ಸನ್ನಿ ಡಿಯೋಲ್ ಮತ್ತು ನಟಿ ಅಮಿಷಾ ಪಟೇಲ್ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದ ಸೂಪರ್​ ಹಿಟ್ ಗದರ್ ಏಕ್​ ಪ್ರೇಮ್ ಕಥಾ ಚಿತ್ರದ ಸೀಕ್ವೆಲ್ ತೆರೆಕಾಣಲು ಸಿದ್ಧತೆ ನಡೆಯುತ್ತಿದೆ. 2001ರಲ್ಲಿ ನಿರ್ದೇಶಕ ಅನಿಲ್ ಶರ್ಮಾ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರವು ರೊಮ್ಯಾಂಟಿಕ್ ಆ್ಯಂಡ್ ಆ್ಯಕ್ಷನ್ ಚಿತ್ರವಾದ್ದು, ಗದರ್ 2 ಕೂಡ ಅನಿಲ್ ಶರ್ಮಾ ನಿರ್ದೇಶನದಲ್ಲಿ ತಯಾರಾಗಿದೆ.

ಗದರ್ 2 ಪೋಸ್ಟರ್ ರಿಲೀಸ್: ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ 'ಗದರ್' ಚಿತ್ರ 22 ವರ್ಷಗಳ ಹಿಂದೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿತ್ತು. 'ಗದರ್' ಮುಂದುವರಿದ ಭಾಗದೊಂದಿಗೆ ತೆರೆಮೇಲೆ ಮರಳುತ್ತಿದೆ. 'ಗದರ್ 2' ಚಿತ್ರದ ಮೊದಲ ಪೋಸ್ಟರ್ ಇಂದು ಅನಾವರಣಗೊಂಡಿದೆ. ನಟ ಸನ್ನಿ ಡಿಯೋಲ್ ಆ್ಯಕ್ಷನ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಗದರ್ 2 ಬಿಡುಗಡೆ ದಿನಾಂಕ: ಈ ಸಾಲಿನ ಆಗಸ್ಟ್ 11ರಂದು ಚಿತ್ರ ಬಿಡುಗಡೆ ಆಗಲಿದೆ. 2001ರಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆ ಆದಾಗ ಬಾಲಿವುಡ್‌ನಲ್ಲಿ ಸಂಚಲನವನ್ನು ಸೃಷ್ಟಿಸಿತು. ಅಲ್ಲದೇ ಅಮೀರ್ ಖಾನ್ ಅವರ ಆಸ್ಕರ್ ನಾಮನಿರ್ದೇಶಿತ 'ಲಗಾನ್' ಚಿತ್ರಕ್ಕೆ ಪೈಪೋಟಿ ಕೊಟ್ಟು ದೊಡ್ಡ ಹೆಸರು ಮಾಡಿತ್ತು.

ನಟ ಸನ್ನಿ ಡಿಯೋಲ್ ಹೇಳಿದ್ದೇನು?: ಗದರ್ - ಏಕ್ ಪ್ರೇಮ್ ಕಥಾ ಸಿನಿಮಾ ನನ್ನ ಜೀವನದಲ್ಲಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಒಂದು ಪ್ರಮುಖ ಭಾಗವಾಗಿದೆ. 22 ವರ್ಷಗಳ ನಂತರ ತಂಡದೊಂದಿಗೆ ಮತ್ತೆ ಸೇರಿರುವುದು ಸೃಜನಾತ್ಮಕವಾಗಿ ಶ್ರೀಮಂತ ಅನುಭವ ನೀಡಿದೆ ಎಂದು ನಟ ಸನ್ನಿ ಡಿಯೋಲ್​ ತಿಳಿಸಿದ್ದಾರೆ. ಆ್ಯಕ್ಷನ್​ ಅವತಾರದಲ್ಲಿ ನಟ ಸನ್ನಿ ಡಿಯೋಲ್ ಅನ್ನು ಪರಿಚಯಿಸಿರುವುದನ್ನು ನೋಡಿದರೆ ಗದರ್ 2 ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂಬ ಸುಳಿವು ನೀಡಿದಂತಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವ 2023: ದೇಶಭಕ್ತಿ ಮೂಡಿಸುವ ಸಂಗೀತಗಳಿವು!

ಗದರ್ ಚಿತ್ರಕಥೆ: 1947ರ ಭಾರತ ಮತ್ತು ಪಾಕ್​ ವಿಭಜನೆಯ ಸಂದರ್ಭ ಹಾಗೂ ತಾರಾ ಸಿಂಗ್ ಜೀವನವನ್ನು ಆಧರಿಸಿ ಗದರ್​​ 1 ಚಿತ್ರ ಮಾಡಲಾಗಿತ್ತು. 400 ಹುಡುಗಿಯರ ಪೈಕಿ ಓರ್ವ ನಾಯಕಿಯನ್ನು ನಿರ್ದೇಶಕ ಅನಿಲ್ ಶರ್ಮಾ ಆಯ್ಕೆ ಮಾಡಿದ್ದು ಚಿತ್ರದ ವಿಶೇಷತೆಗಳಲ್ಲೊಂದು. ಇನ್ನೂ ಹಿಮಾಚಲ ಪ್ರದೇಶದ ಪರ್ವತಗಳಲ್ಲಿ ಗದರ್ 2 ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ: ಕೆಜಿಎಫ್​ 2 ದಾಖಲೆ ಮುರಿದ ಪಠಾಣ್​: ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡ ಶಾರುಖ್ ಸಿನಿಮಾ

ನಿರ್ದೇಶಕ ಮತ್ತು ನಿರ್ಮಾಪಕ ಅನಿಲ್ ಶರ್ಮಾ ಅವರು ಗದರ್ 2 ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಝೀ ಸ್ಟುಡಿಯೋಸ್ ನಿರ್ಮಾಣದ ಹೊಣೆ ಹೊತ್ತಿದೆ. ಚಿತ್ರದಲ್ಲಿ ಸನ್ನಿ ಡಿಯೋಲ್, ಅಮೀಷಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಪೋಸ್ಟರ್ ಬಿಡುಗಡೆಯ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡ ನಿರ್ದೇಶಕ ಮತ್ತು ನಿರ್ಮಾಪಕ ಅನಿಲ್ ಶರ್ಮಾ, ಹಿಂದೂಸ್ತಾನ್ ಝಿಂದಾಬಾದ್ ಹೈ, ಝಿಂದಾಬಾದ್ ಥಾ, ಝಿಂದಾಬಾದ್ ರಹೇಗಾ ಎಂದು ಹೇಳಿದ್ದಾರೆ. ತಾರಾ ಸಿಂಗ್ ಮತ್ತೆ ಆ್ಯಕ್ಷನ್​ ಅವತಾರಕ್ಕೆ ಮರಳಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಬಾಲಿವುಡ್​ ಬ್ಯಾಡ್​ ಬಾಯ್'​​ ಬಳಿ ಇವೆ ಕೋಟ್ಯಂತರ ಮೌಲ್ಯದ ಕಾರುಗಳು!: ಬೆಂಜ್​ನಿಂದ ಔಡಿವರೆಗೆ ಸಲ್ಲು ಕಲೆಕ್ಷನ್ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.