ETV Bharat / entertainment

ಲಿಖಿತ್​ ಶೆಟ್ಟಿ ನಿರ್ಮಿಸಿ ನಟಿಸುತ್ತಿರುವ 'ಫುಲ್​ ಮೀಲ್ಸ್​' ಪೋಸ್ಟರ್ ಬಿಡುಗಡೆ

ಲಿಖಿತ್​ ಶೆಟ್ಟಿ ನಿರ್ಮಿಸಿ ನಟಿಸಿರುವ 'ಫುಲ್​ ಮೀಲ್ಸ್​' ಪೋಸ್ಟರ್​ ಬಿಡುಗಡೆಯಾಗಿದೆ.

author img

By

Published : Mar 28, 2023, 10:30 AM IST

full meals
'ಫುಲ್​ ಮೀಲ್ಸ್​'

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕಂಟೆಂಟ್​ ಹೊಂದಿರುವ ಸಿನಿಮಾಗಳು ನಿರ್ಮಾಣವಾಗುತ್ತಿವೆ. ವಿಭಿನ್ನ ಕಥೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತಿದೆ. ಉತ್ತಮ ಕಥಾಹಂದರದ ಜೊತೆಗೆ ಮೇಕಿಂಗ್​ ವಿಷಯದಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. 2022ರಲ್ಲಿ ಸ್ಯಾಂಡಲ್​ವುಡ್​ ಅದ್ಭುತ ಯಶಸ್ಸು ಸಾಧಿಸಿದ್ದು, ಅದೇ ಹಾದಿಯಲ್ಲಿ ಸಾಗಲು ಪ್ರತಿ ಚಿತ್ರತಂಡವೂ ಪೂರ್ಣ ಪ್ರಮಾಣದಲ್ಲಿ ಶ್ರಮ ಹಾಕುತ್ತಿದೆ. ಸದ್ಯ 'ಫುಲ್​ ಮೀಲ್ಸ್​' ಚಿತ್ರ ಕೂಡ ಅದರ ಹೊರತಾಗಿಲ್ಲ.

ಸ್ಯಾಂಡಲ್​ವುಡ್​ನಲ್ಲಿ 'ಸಂಕಷ್ಟಕರ ಗಣಪತಿ' ಮತ್ತು ದಿವಂಗತ ಡಾ.ಪುನೀತ್ ರಾಜ್​ಕುಮಾರ್​ ನಿರ್ಮಿಸಿದ್ದ 'ಫ್ಯಾಮಿಲಿ ಪ್ಯಾಕ್​' ಸಿನಿಮಾಗಳ ಮೂಲಕ ಮನರಂಜಿಸಿರುವ ಲಿಖಿತ್​ ಶೆಟ್ಟಿ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಫುಲ್​ ಮೀಲ್ಸ್​' ಎಂಬ ಟೈಟಲ್​ ನೀಡಲಾಗಿದ್ದು, ಸ್ವತಃ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ಸಿನಿಮಾದ ನೂತನ ಪೋಸ್ಟರ್​ ಬಿಡುಗಡೆಗೊಂಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಸಿನಿಮಾ ಕೂಡಾ ನಿರೀಕ್ಷೆ ಹೆಚ್ಚಿಸಿದೆ.

full meals
'ಫುಲ್​ ಮೀಲ್ಸ್​' ಪೋಸ್ಟರ್

ಫೋಟೋಗ್ರಾಫರ್​ ಆದ್ರು ಲಿಖಿತ್​: ಫುಲ್​ ಮೀಲ್ಸ್‌ನಲ್ಲಿ ಲಿಖಿತ್​ ಶೆಟ್ಟಿ ಫೋಟೋಗ್ರಾಫರ್​ ಪಾತ್ರ ನಿರ್ವಹಿಸಲಿದ್ದಾರೆ. ಮದುವೆ ಮನೆಗೆ ಫೋಟೋ ತೆಗೆಯಲು ಹೋದಾಗ ಮದುಮಗಳ ಮೇಲೆಯೇ ಪ್ರೀತಿ ಆಗುತ್ತದೆ. ಆನಂತರ ಏನಾಗುತ್ತದೆ? ಎಂಬುದೇ ಕಥೆ. ಅವನ ಪ್ರೀತಿ ಅಲ್ಲಿಗೆ ಕೊನೆಗೊಳ್ಳುತ್ತಾ? ಅಥವಾ ಮದುವೆ ನಿಶ್ಚಯವಾಗಿರುವ ಹುಡುಗಿಯ ಜೊತೆಗೆ ಮದುವೆಯಾಗುತ್ತಾ? ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಫುಲ್ ಮೀಲ್ಸ್​ ಚಿತ್ರ ಕಂಪ್ಲೀಟ್​ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ ಅನ್ನೋದು ಚಿತ್ರತಂಡದ ಮಾತು.

ಇದನ್ನೂ ಓದಿ: ಬಾಲಿವುಡ್​ ಲೈಫ್​ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್​ ಶೆಟ್ಟಿ ಅತ್ಯುತ್ತಮ ನಟ

ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನ ಅರಮನೆಯಲ್ಲಿ ಶೂಟಿಂಗ್​ ಮಾಡಲಾಗಿದೆ. ರಾಮನಗರ ಹಾಗೂ ಮಂಗಳೂರಿನಲ್ಲೂ ಚಿತ್ರೀಕರಣ ನಡೆಯುತ್ತಿದೆ. ಸಂಪೂರ್ಣ ಮನರಂಜನಾತ್ಮಕ ಸಿನಿಮಾ ಇದಾಗಿದ್ದು, ಎನ್.ವಿನಾಯಕ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರವಿದು. ಗುರುಕಿರಣ್​ ಸಂಗೀತ ನಿರ್ದೇಶನ ಮತ್ತು ಮನೋಹರ್​ ಜೋಶಿ ಛಾಯಾಗ್ರಹಣವಿದೆ.

ಇದನ್ನೂ ಓದಿ: ರಾಘವ್​ ಚಡ್ಡಾ ಮದುವೆ​ ವದಂತಿ ಮಧ್ಯೆ ಖ್ಯಾತ ಡಿಸೈನರ್ ಭೇಟಿಯಾದ ಪರಿಣಿತಿ ಚೋಪ್ರಾ

ಚಿತ್ರತಂಡ ಹೀಗಿದೆ: ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ವಿಜಯ್​ ಚೆಂಡೂರ್​, ರಾಜೇಶ್​ ನಟರಂಗ, ರಮೇಶ್​ ಪಂಡಿತ್​, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್​, ಸಂಜಯ್​ ಶಾಸ್ರ್ರಿ, ಗಣೇಶ್​ ರಾವ್​ ಸೇರಿದಂತೆ ಅನುಭವಿ ಕಲಾವಿದರ ತಾರಾಗಣವಿದೆ. ಸಿನಿಮಾ ಬಿಡುಗಡೆ ವಿಚಾರವಾಗಿ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಇದನ್ನೂ ಓದಿ: 'ಕಾಂತಾರ'ಗೆ ಮತ್ತೆರಡು ಗರಿ: 'ಗೇಮ್​ ಚೇಂಜರ್​' ರಿಷಬ್​, 'ರೈಸಿಂಗ್​ ಸ್ಟಾರ್' ಸಪ್ತಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.