ETV Bharat / entertainment

ಜಮ್ಮು ಕಾಶ್ಮೀರದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ

author img

By

Published : May 3, 2022, 12:03 PM IST

ಫೀಚರ್ ಫಿಲ್ಮ್‌ಗಳು, ನಾನ್-ಫೀಚರ್ ಫಿಲ್ಮ್‌ಗಳು ಮತ್ತು ಮ್ಯೂಸಿಕ್ ವಿಡಿಯೋಗಳು ಎಂಬ ಮೂರು ವಿಭಾಗಗಳಲ್ಲಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಬಹುದಾಗಿದೆ. ಭಾರತೀಯ ಚಲನಚಿತ್ರ ನಿರ್ಮಾಪಕರು ಮತ್ತು ಸಂಗೀತ ನಿರ್ಮಾಪಕರು, ಕಲಾವಿದರು ತಾವು ಸಿನಿಮಾ, ಸಾಕ್ಷ್ಯಚಿತ್ರ, ಒಟಿಟಿ ಚಲನಚಿತ್ರಗಳ ಅಥವಾ ಕಿರುಚಿತ್ರಗಳು ಮತ್ತು ಸಂಗೀತ ವಿಡಿಯೋಗಳನ್ನು ಆಹ್ವಾನಿಸಲಾಗಿದೆ..

First ever J&K National Film Festival from June 15-20
ಜಮ್ಮು ಕಾಶ್ಮೀರದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿ

ಜಮ್ಮು, ಜಮ್ಮು ಕಾಶ್ಮೀರ : ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಕೇಂದ್ರ ಮಾಹಿತಿ, ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಜಮ್ಮು ಮತ್ತು ಕಾಶ್ಮೀರ ಚಲನಚಿತ್ರ ಅಭಿವೃದ್ಧಿ ಮಂಡಳಿಯು ಜೂನ್ 15ರಿಂದ 20ರವರೆಗೆ ಮೊಟ್ಟ ಮೊದಲ ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಚಲನಚಿತ್ರೋತ್ಸವದ ಉದ್ದೇಶ ಜಮ್ಮು ಮತ್ತು ಕಾಶ್ಮೀರದಲ್ಲಿನ ಚಲನಚಿತ್ರ, ಸಂಗೀತ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವುದಾಗಿದೆ. ಅದರ ಜೊತೆಗೆ ಕಾಶ್ಮೀರದ ನೈಸರ್ಗಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸೌಂದರ್ಯವನ್ನು ಭಾರತದ ಇತರ ಭಾಗಗಳಿಗೆ ಮತ್ತು ಪ್ರಪಂಚಕ್ಕೆ ಪಸರಿಸುವುದಾಗಿದೆ.

ಫೀಚರ್ ಫಿಲ್ಮ್‌ಗಳು, ನಾನ್-ಫೀಚರ್ ಫಿಲ್ಮ್‌ಗಳು ಮತ್ತು ಮ್ಯೂಸಿಕ್ ವಿಡಿಯೋಗಳು ಎಂಬ ಮೂರು ವಿಭಾಗಗಳಲ್ಲಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಬಹುದಾಗಿದೆ. ಭಾರತೀಯ ಚಲನಚಿತ್ರ ನಿರ್ಮಾಪಕರು ಮತ್ತು ಸಂಗೀತ ನಿರ್ಮಾಪಕರು, ಕಲಾವಿದರು ತಾವು ಸಿನಿಮಾ, ಸಾಕ್ಷ್ಯಚಿತ್ರ, ಒಟಿಟಿ ಚಲನಚಿತ್ರಗಳ ಅಥವಾ ಕಿರುಚಿತ್ರಗಳು ಮತ್ತು ಸಂಗೀತ ವಿಡಿಯೋಗಳನ್ನು ಆಹ್ವಾನಿಸಲಾಗಿದೆ.

ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಸಮಾರಂಭದಲ್ಲಿ 40ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಲಾಗುವುದು ಮತ್ತು ವಿಜೇತರು ಪ್ರಮಾಣ ಪತ್ರ ಅಥವಾ ಪದಕದ ಜೊತೆಯಲ್ಲಿ ನಗದನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿಗಳು ಮತ್ತು ಬಹುಮಾನಗಳ ಪಟ್ಟಿ, ನಿಯಮಗಳನ್ನು https://filmfreeway.com/nffjk ವೆಬ್​ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: Met Gala 2022: ಚಿನ್ನದ ಸೀರೆಯುಟ್ಟು ದೇಶಿ ಸ್ಟೈಲಿನಲ್ಲಿ ಮಿಂಚಿದ ನತಾಶಾ ಪೂನವಾಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.