ಕಪುರ್ತಲಾ (ಪಂಜಾಬ್) : ಪಂಜಾಬಿ ಗಾಯಕ ಮನ್ಪ್ರೀತ್ ಸಿಂಗ್ ಸಿಂಗಾ ಅವರಿಗೆ ಸಂಕಷ್ಟ ಎದುರಾಗಿವೆ. ಭೀಮ್ ರಾವ್ ಯುವ ಫೋರ್ಸ್‌ನ ಮುಖ್ಯಸ್ಥ ಅಮನ್ದೀಪ್ ಸಗೋತಾ ಅವರು ನೀಡಿದ ದೂರಿನ ಮೇರೆಗೆ ಗಾಯಕ ಮನ್ಪ್ರೀತ್ ಸಿಂಗ್ ಸಿಂಗಾ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಶ್ಲೀಲತೆ, ಶಸ್ತ್ರಾಸ್ತ್ರಗಳನ್ನು ಉತ್ತೇಜಿಸಿದ ಆರೋಪದ ಮೇರೆಗೆ ಕಪುರ್ತಲಾ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕೇಸು ದಾಖಲಿಸಲಾಗಿದೆ.
ಹಾಡುಗಳಲ್ಲಿ ಆಯುಧಗಳ ಕುರಿತು ಉತ್ತೇಜನ: ಮನ್ಪ್ರೀತ್ ಸಿಂಗ್ ಸಿಂಗಾ ಅಲಿಯಾಸ್ ಸಿಂಗಾ ಅವರು ಹೋಶಿಯಾರ್ಪುರ ಜಿಲ್ಲೆಯ ಜಗ್ನಿವಾಲ್ ಗ್ರಾಮದ ನಿವಾಸಿ. ಆಯುಧಗಳನ್ನು ಹೊಂದಿರುವ ಹಾಡುಗಳನ್ನು ಪ್ರಮೋಟ್ ಮಾಡುವ ಮೂಲಕ ಪಂಜಾಬ್ ಯುವಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಭೀಮ್ ರಾವ್ ಯುವ ಫೋರ್ಸ್ ಸದಸ್ಯರು ಕಪುರ್ತಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಹಾಡಿನಲ್ಲಿ ಅಶ್ಲೀಲ ಪದಗಳ ಬಳಕೆ: ಹಾಡುಗಳಲ್ಲಿ ಆಯುಧಗಳ ಕುರಿತು ಉತ್ತೇಜನ ಆರೋಪ ಮಾತ್ರವಲ್ಲ, ಅಶ್ಲೀಲ ಪದಗಳ ಬಳಕೆ ಮಾಡಲಾಗಿದೆ ಎಂಬ ಆರೋಪವೂ ಇದೆ. ಇತ್ತೀಚೆಗಷ್ಟೇ ಗಾಯಕನ ಹೊಸ ಹಾಡು ಲಾಂಚ್ ಆಗಿದೆ. ಪಂಜಾಬಿ ಚಾನೆಲ್ಗಳಲ್ಲಿ ಈ ಹಾಡು ಪ್ಲೇ ಆಗುತ್ತಿದೆ. ಅಶ್ಲೀಲ ಪದಗಳ ಬಳಕೆ ಮಾಡಲಾಗಿದೆ ಎಂದು ದೂರುದಾರರು ಆರೋಪಗಳ ಸುರಿಮಳೆಗೈದಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಇಂತಹ ಹಾಡುಗಳು ಕೇಳಲು ಯೋಗ್ಯವಲ್ಲ ಎಂದು ಭೀಮ್ ರಾವ್ ಯುವ ಫೋರ್ಸ್ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.
ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನ: ಗಾಯಕ ಮನ್ಪ್ರೀತ್ ಸಿಂಗ್ ಸಿಂಗಾ ಸೇರಿದಂತೆ ಐವರ ವಿರುದ್ಧ ದೂರುಗಳು ಬಂದಿವೆ. ಸಿಂಗಾ ಅವರನ್ನು ಹೊರತುಪಡಿಸಿ ನಿರ್ದೇಶಕ, ನಿರ್ಮಾಪಕ, ಹಾಡಿನ ಸಂಕಲನಕಾರರ ಮೇಲೂ ಆರೋಪಗಳಿವೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 294, 120 ಬಿ ಅಡಿ ಪ್ರಕರಣ ದಾಖಲಾಗಿದೆ.
ಬಂದೂಕು, ಶಸ್ತ್ರಾಸ್ತ್ರ ವಿಚಾರವಾಗಿ ಪಂಜಾಬ್ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತವೆ. ಈ ಬಗ್ಗೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನೂ ನೀಡಲಾಗಿದೆ. ಈ ಹಿಂದೆ ಪಂಜಾಬಿ ಗಾಯಕರು ಮತ್ತು ಗೀತರಚನೆಗಕಾರರು ತಮ್ಮ ಹಾಡುಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ ಕೆಲ ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಪ್ರೇಮಪಕ್ಷಿಗಳ ಸದ್ದು: ಗಮನ ಸೆಳೆದ ಪರಿಣಿತಿ ರಾಘವ್ ಜೋಡಿ