ETV Bharat / entertainment

'ಧರ್ಮಕ್ಕಿಂತಲೂ ಮನುಷ್ಯತ್ವ ದೊಡ್ಡದು' ಎಂದಿದ್ದ ನಟಿ ಸಾಯಿ ಪಲ್ಲವಿ ವಿರುದ್ಧ ಎಫ್​ಐಆರ್​ - ಸಾಯಿ ಪಲ್ಲವಿ ವಿರುದ್ಧ ಎಫ್​ಐಆರ್​

ಧರ್ಮ ಸಂಘರ್ಷದ ಬಗ್ಗೆ ಮಾತನಾಡಿರುವ ಕಾರಣ ನಟಿಯ ವಿರುದ್ಧ ಹೈದರಾಬಾದ್​ನ ಪೊಲೀಸ್​ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಲಾಗಿದೆ..

Sai Pallavi make controversial statements about Kashmiri Hindus, FIR
ನಟಿ ಸಾಯಿ ಪಲ್ಲವಿ ವಿರುದ್ಧ ಎಫ್​ಐಆರ್​
author img

By

Published : Jun 17, 2022, 3:13 PM IST

ಹೈದರಾಬಾದ್​​ : ಖ್ಯಾತ ನಟಿ ಸಾಯಿ ಪಲ್ಲವಿ ವಿರುದ್ಧ ನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಕಾಶ್ಮೀರಿ ಫೈಲ್ಸ್​ ಚಿತ್ರದ ಕುರಿತು ಧಾರ್ಮಿಕ ಸಂಘರ್ಷದ ಬಗ್ಗೆ ಮಾತಾನಾಡಿದ್ದಾರೆ.

ಚಿತ್ರವನ್ನು ಧಾರ್ಮಿಕ ಸಂಘರ್ಷದ ದೃಷ್ಟಿಯಿಂದ ನೀವು ನೋಡುತ್ತೀರಿ ಎಂದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಕಳ್ಳಸಾಗಾಣಿಕೆ ಎರಡು ಒಂದೇ ಎಂದು ನೀಡಿದ್ದ ಹೇಳಿಕೆಯೇ ವಿವಾದಕ್ಕೆ ಕಾರಣವಾಗಿದೆ.

ಅವರ ಈ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳಾಗುತ್ತಿವೆ. ಇದೀಗ ನಟಿಯ ವಿರುದ್ಧ ಹೈದರಾಬಾದ್ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಯೂಟ್ಯೂಬ್​ ಸಂದರ್ಶನವೊಂದರಲ್ಲಿ ಕಾಶ್ಮೀರ್​ ಫೈಲ್ಸ್‌ನಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎನ್ನುವುದು ನೋಡಿದ್ದೇವೆ.

ಈ ವಿಷಯವನ್ನು ನೀವು ಧಾರ್ಮಿಕ ಸಂಘರ್ಷದಿಂದ ನೋಡುವುದಾರೆ, ಇತ್ತೀಚೆಗೆ ಹಸುವನ್ನು ಹೊತ್ತೊಯ್ಯುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ಬಲವಂತವಾಗಿ ಜೈಶ್ರೀರಾಮ್​ ಎಂಬ ಘೋಷಣೆ ಹಾಕುವಂತೆ ಒತ್ತಾಯಿಸಿದ್ದರು. ಎರಡು ಘಟನೆಗಳ ನಡುವೆ ಯಾವುದೇ ವ್ಯತ್ಯಸಾವಿಲ್ಲ ಎಂದು ಹೇಳಿದ್ದರು.

ಧರ್ಮಕ್ಕಿಂತಲೂ ಮನುಷ್ಯತ್ವವೇ ದೊಡ್ಡದು ಅಂತಾ ನಟಿ ಸಾಯಿ ಪಲ್ಲವಿ ನಿರ್ಭಯವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹೇಳಿಕೆಯನ್ನು ಕೆಲವರು ಖಂಡಿಸಿದರೆ, ಕೆಲವರು ಅವರ ಧೈರ್ಯದ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ತ್ರಿಪ್ತಿ ಡಿಮ್ರಿ ಜೊತೆ ನಟ ವಿಕ್ಕಿ ಕೌಶಲ್ ರೊಮ್ಯಾನ್ಸ್; ಜಾಲತಾಣದಲ್ಲಿ ವೈರಲ್​ ಆದ ಫೋಟೋಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.