ETV Bharat / entertainment

ಹೆಲ್ಮೆಟ್​ ಧರಿಸದೇ ಬೈಕ್​ ಸವಾರಿ: ಅನುಷ್ಕಾ ಶರ್ಮಾ ಅಂಗರಕ್ಷಕನಿಗೆ ಬಿತ್ತು ಭಾರಿ ದಂಡ!

ಹೆಲ್ಮೆಟ್​ ಧರಿಸದೇ ಬೈಕ್​ ಸವಾರಿ ಮಾಡಿದ ಹಿನ್ನೆಲೆ ಮುಂಬೈ ಟ್ರಾಫಿಕ್ ಪೊಲೀಸರು ನಟಿ ಅನುಷ್ಕಾ ಶರ್ಮಾ ಅವರ ಅಂಗರಕ್ಷಕನಿಗೆ ಹತ್ತೂವರೆ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

fine to Anushka Sharma bodyguard
ಅನುಷ್ಕಾ ಶರ್ಮಾ ಅಂಗರಕ್ಷಕನಿಗೆ ದಂಡ
author img

By

Published : May 17, 2023, 5:30 PM IST

ಬಾಲಿವುಡ್ ನಟರಾದ ಅಮಿತಾಭ್​​ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರು ಇತ್ತೀಚೆಗಷ್ಟೇ ಹೆಲ್ಮೆಟ್​ ಇಲ್ಲದೇ ಬೈಕ್​ ಏರಿ ಸದ್ದು ಮಾಡಿದ್ದರು. ಟ್ರಾಫಿಕ್​ ಹಿನ್ನೆಲೆ ತಮ್ಮ ಐಷಾರಾಮಿ ಕಾರುಗಳ ಬದಲು ಬೈಕ್​ಗಳನ್ನು ಬಳಸಿ ಅಭಿಮಾನಿಗಳ ಗಮನ ಸೆಳೆದಿದ್ದರು. ಜೊತೆಗೆ, ಹೆಲ್ಮೆಟ್​ ಧರಿಸದೇ ಸಮಸ್ಯೆಯನ್ನು ಆಹ್ವಾನಿಸಿದ್ದರು. ಇದೀಗ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಭಾನುವಾರದಂದು ಬಾಲಿವುಡ್​ ಹಿರಿಯ ನಟ ಅಮಿತಾಭ್​​ ಬಚ್ಚನ್​ ಅವರು ತಮ್ಮ ಶೂಟಿಂಗ್​​ ಸೆಟ್​ಗೆ ತೆರಳುವ ಸಲುವಾಗಿ ಅಪರಿಚಿತರಿಂದ ಬೈಕ್​​ ಡ್ರಾಪ್​ ಪಡೆದಿದ್ದರು. ಅದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಕೂಡ ಮಾಡಿದ್ದರು. ಬಳಿಕ ಸೋಮವಾರ ಮುಂಜಾನೆ ಬಹುಬೇಡಿಕೆ ನಟಿ ಅನುಷ್ಕಾ ಶರ್ಮಾ ಅವರು ಸಹ ತಮ್ಮ ಅಂಗರಕ್ಷಕನೊಂದಿಗೆ ಬೈಕ್​ನಲ್ಲಿ ಸಂಚರಿಸಿದ್ದರು. ಅವರ ದೃಶ್ಯ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು. ಟ್ರಾಫಿಕ್​ ಹಿನ್ನೆಲೆ, ಶೀಘ್ರ ತಮ್ಮ ಕೆಲಸದ ಸ್ಥಳಕ್ಕೆ ಶೀಘ್ರ ತಲುಪುವ ಸಲುವಾಗಿ ವೇಗದ ಸಾರಿಗೆ ವಿಧಾನವನ್ನು ಆರಿಸಿಕೊಂಡಿದ್ದರು. ಅವರ ವಿಡಿಯೋ ಮತ್ತು ಫೋಟೋಗಳು ಆನ್​ಲೈನ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಮುಂಬೈನ ರಸ್ತೆಗಳಲ್ಲಿನ ಟ್ರಾಫಿಕ್ ಸ್ಥಿತಿಯನ್ನು ಗಮನಿಸಿದ ಕ್ರಿಕೆಟಿಗ ವಿರಾಟ್​ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮ ಅಂಗರಕ್ಷಕನೊಂದಿಗೆ ಬೈಕ್‌ನಲ್ಲಿ ಹೋಗುವುದು ಸರಿ ಎಂದು ಭಾವಿಸಿದರು. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಅನುಷ್ಕಾ ಶರ್ಮಾ ಅವರ ಅಂಗರಕ್ಷಕ ಸೋನು ಶೇಖ್ ಅವರಿಗೆ ಮುಂಬೈ ಟ್ರಾಫಿಕ್ ಪೊಲೀಸರು ಭಾರಿ ದಂಡ ವಿಧಿಸಿದ್ದಾರೆ.

ವರದಿಗಳ ಪ್ರಕಾರ, ಅನುಷ್ಕಾ ಶರ್ಮಾ ಅವರ ಅಂಗರಕ್ಷಕ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸಿದ್ದಕ್ಕಾಗಿ ಸೆಕ್ಷನ್ 129/194, ಸೆಕ್ಷನ್ 5/180 ಮತ್ತು ಸೆಕ್ಷನ್ 3 (1) 18ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರು ನಟಿಯ ಅಂಗರಕ್ಷಕನಿಗೆ ಹತ್ತೂವರೆ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: Cannes Film Festival: ಭಾರತವನ್ನು ಪ್ರತಿನಿಧಿಸಿದ ಸೆಲೆಬ್ರಿಟಿಗಳಿವರು, ಇವರ ಚೆಲುವಿಗೆ ಸಾಟಿ ಯಾರು!

ಹೆಲ್ಮೆಟ್​ ಹಾಕದೇ ಸೆಲೆಬ್ರಿಟಿಗಳ ಬೈಕ್​ ರೈಡ್​ ಸಂಬಂಧ ಈ ಇಬ್ಬರೂ ಕಲಾವಿದರು ಟ್ರೋಲ್​ ಆದರು. ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಆದರೆ 'ನಾನು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಬಿಗ್​ ಬಿ ಸ್ಪಷ್ಟಪಡಿಸಿದರು. ಮುಂಬೈನ ಶೂಟಿಂಗ್ ಸೆಟ್​ ಬಳಿ ಬೈಕ್​ ರೈಡ್​ ಮಾಡಿದ್ದು, ಭಾನುವಾರ ನಾನು ಅನುಮತಿಯೊಂದಿಗೆ ಸೆಟ್​ಗೆ ಹೋಗುವ ದಾರಿಯಲ್ಲಿ ಬೈಕ್‌ನಲ್ಲಿ ಹೋಗಿದ್ದೆ, ನಾನು ಧರಿಸಿದ ವೇಷಭೂಷಣ ನನ್ನ ಪಾತ್ರದ್ದು' ಎಂದು ಬಿಗ್ ಬಿ ತಿಳಿಸಿದ್ದರು.

ಇದನ್ನೂ ಓದಿ: 2023 ಹಿಟ್ ಸಿನಿಮಾ ಪಟ್ಟಿಗೆ ಸೇರಿದ 'ದಿ ಕೇರಳ ಸ್ಟೋರಿ'.. ಕಲೆಕ್ಷನ್​​ ಎಷ್ಟು ಗೊತ್ತಾ?

ಪ್ರಸಿದ್ಧ 'ಕೇನ್ಸ್​ ಫಿಲ್ಮ್​ ಫೆಸ್ಟಿವಲ್' ನಿನ್ನೆ ಆರಂಭಗೊಂಡಿದೆ. 76ನೇ ಕೇನ್ಸ್​ ಚಲನಚಿತ್ರೋತ್ಸವದಲ್ಲಿ ಭಾರತದಿಂದ ಊರ್ವಶಿ ರೌಟೇಲಾ, ಮಾನುಷಿ ಚಿಲ್ಲರ್​​​, ಸಾರಾ ಅಲಿಖಾನ್​​, ಇಶಾ ಗುಪ್ತಾ ಭಾಗಿ ಆಗಿದ್ದಾರೆ. ಮೇ. 27ರವರೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಭಾರತದಿಂದ ಇನ್ನೂ ಹಲವರು ಕಾಣಿಸಿಕೊಳ್ಳಲಿದ್ದಾರೆ. ಆ ಪೈಕಿ ನಟಿ ಅನುಷ್ಕಾ ಶರ್ಮಾ ಕೂಡ ಇದ್ದಾರೆ. ಇದು ಅವರ ಚೊಚ್ಚಲ ಪ್ರವೇಶ. ಹಾಗಾಗಿ ನಟಿ ಮಾತ್ರವಲ್ಲದೇ ಅಭಿಮಾನಿಗಳು ಸಹ ಸಾಕಷ್ಟು ಕುತೂಹಲರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.