ಹಿಂದಿ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ 67ನೇ ಆವೃತ್ತಿಯ ಫಿಲ್ಮ್‌ಫೇರ್ ಅವಾರ್ಡ್ಸ್ 2022, Wolf 777 news ಸಹಯೋಗದಲ್ಲಿ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ನಟರಾದ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ನಡೆಸಿಕೊಟ್ಟರು. ಬಾಲಿವುಡ್ ಕಲಾವಿದರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರು:
- ಅತ್ಯುತ್ತಮ ನಿರ್ದೇಶಕ - ವಿಷ್ಣುವರ್ಧನ್ (ಶೇರ್ ಷಾ)
- ಅತ್ಯುತ್ತಮ ನಟಿ (critics) - ವಿದ್ಯಾ ಬಾಲನ್ (lioness)
- ಅತ್ಯುತ್ತಮ ನಟ (critics) - ವಿಕ್ಕಿ ಕೌಶಲ್ (ಸರ್ದಾರ್ ಉದಾಮ್)
- ಪ್ರಮುಖ ಪಾತ್ರ, ಅತ್ಯುತ್ತಮ ನಟಿ - ಕ್ರಿತಿ ಸನೋನ್ (ಮಿಮಿ)
- ಪ್ರಮುಖ ಪಾತ್ರ, ಅತ್ಯುತ್ತಮ ನಟ - ರಣ್ವೀರ್ ಸಿಂಗ್ (83)
ಅತ್ಯುತ್ತಮ ಸಿನಿಮಾ:
- ಅತ್ಯುತ್ತಮ ಸಿನಿಮಾ (critics) - ಸರ್ದಾರ್ ಉದಾಮ್
- ಅತ್ಯುತ್ತಮ ಸಿನಿಮಾ (popular) - ಶೇರ್ ಷಾ
ಅತ್ಯುತ್ತಮ ಚೊಚ್ಚಲ(ನವ) ಕಲಾವಿದರು:
- ಅತ್ಯುತ್ತಮ ಚೊಚ್ಚಲ ನಟ- ಯಹಾನ್ ಭಟ್ (99 ಹಾಡುಗಳು)
- ಅತ್ಯುತ್ತಮ ಚೊಚ್ಚಲ ನಟಿ - ಶರ್ವರಿ ವಾಘ್ (ಬಂಟಿ ಔರ್ ಬಬ್ಲಿ 2)
ಅತ್ಯುತ್ತಮ ಗಾಯಕರು:
- ಅತ್ಯುತ್ತಮ ಗಾಯಕ - ಬಿ ಪ್ರಾಕ್
- ಅತ್ಯುತ್ತಮ ಗಾಯಕಿ - ಅಸೀಸ್ ಕೌರ್
- ಅತ್ಯುತ್ತಮ ಮ್ಯೂಸಿಕ್ ಆಲ್ಬಂ - ತನಿಷ್ಕ್ ಬಾಗ್ಚಿ, ಬಿ ಪ್ರಾಕ್, ಜಾನಿ, ಜಸ್ಲೀನ್ ರಾಯಲ್, ಜಾವೇದ್-ಮೊಹ್ಸಿನ್ ಮತ್ತು ವಿಕಾರ್ ಮಾಂಟ್ರೋಸ್ (ಶೇರ್ ಷಾ)
- ಅತ್ಯುತ್ತಮ ಹಾಡು - ಕೌಸರ್ ಮುನೀರ್ (ಲೆಹ್ರಾ ದೋ, 83)
ಅತ್ಯುತ್ತಮ ಕಥೆ:
- ಅತ್ಯುತ್ತಮ ಕಥೆ - ಶುಭೇಂದು ಭಟ್ಟಾಚಾರ್ಯ ಮತ್ತು ರಿತೇಶ್ ಶಾ (ಸರ್ದಾರ್ ಉದಾಮ್)
- ಅತ್ಯುತ್ತಮ ಕಥೆ - ಅಭಿಷೇಕ್ ಕಪೂರ್, ಸುಪ್ರತೀಕ್ ಸೇನ್ ಮತ್ತು ತುಷಾರ್ ಪರಂಜ್ಪೆ (ಚಂಡೀಗಢ್ ಕರೇ ಆಶಿಕಿ)
ಅತ್ಯುತ್ತಮ ಕಲಾವಿದರು (ಪೋಷಕ ಪಾತ್ರ):
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಸಾಯಿ ತಮ್ಹಂಕರ್ (ಮಿಮಿ)
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ - ಪಂಕಜ್ ತ್ರಿಪಾಠಿ (ಮಿಮಿ)
ಇತರೆ ವರ್ಗಗಳು:
- ಅತ್ಯುತ್ತಮ ಆಕ್ಷನ್ - ಸ್ಟೀಫನ್ ರಿಕ್ಟರ್ ಮತ್ತು ಸುನಿಲ್ ರೋಡ್ರಿಗಸ್ (ಶೇರ್ಶಾ)
- ಅತ್ಯುತ್ತಮ ಹಿನ್ನೆಲೆ ಸಂಗೀತ - ಶಾಂತನು ಮೊಯಿತ್ರಾ (ಸರ್ದಾರ್ ಉದಾಮ್)
- ಅತ್ಯುತ್ತಮ ನೃತ್ಯ ಸಂಯೋಜನೆ - ವಿಜಯ್ ಗಂಗೂಲಿ (ಚಕ ಚಕ್, ಅತರಂಗಿ ರೇ)
- ಅತ್ಯುತ್ತಮ ಛಾಯಾಗ್ರಹಣ - ಅವಿಕ್ ಮುಖೋಪಾಧ್ಯಾಯ (ಸರ್ದಾರ್ ಉದಾಮ್)
- ಅತ್ಯುತ್ತಮ ಕಾಸ್ಟೂಮ್ (ವೇಷಭೂಷಣ) - ವೀರ ಕಪೂರ್ (ಸರ್ದಾರ್ ಉದಾಮ್)
- ಅತ್ಯುತ್ತಮ ಸಂಕಲನ - ಎ ಶ್ರೀಕರ್ ಪ್ರಸಾದ್ (ಶೇರ್ಶಾ)
- ಅತ್ಯುತ್ತಮ ನಿರ್ಮಾಣ ವಿನ್ಯಾಸ - ಮಾನ್ಸಿ ಧ್ರುವ್ ಮೆಹ್ತಾ ಮತ್ತು ದಿಮಿತ್ರಿ ಮಲಿಕ್ (ಸರ್ದಾರ್ ಉದಾಮ್)
- ಅತ್ಯುತ್ತಮ ಧ್ವನಿ ವಿನ್ಯಾಸ - ದೀಪಂಕರ್ ಚಾಕಿ ಮತ್ತು ಬಿಹಾರ್ ರಂಜನ್ ಸಮಲ್ (ಸರ್ದಾರ್ ಉದಾಮ್)
ಇದನ್ನೂ ಓದಿ: ರಾಮೋಜಿ ಫಿಲಂ ಸಿಟಿಯಲ್ಲಿ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್.. ಜೂ. ಎನ್ಟಿಆರ್ ಮುಖ್ಯ ಅಥಿತಿ