ETV Bharat / entertainment

ಪಾರ್ಟಿ ಸಾಂಗ್​ನಲ್ಲಿ ಹೃತಿಕ್​​ ಡ್ಯಾನ್ಸ್​ ​ಮೋಡಿ​, ಸಾಟಿ ಇಲ್ಲದಂತೆ ಕುಣಿದ ನಟಿ ದೀಪಿಕಾ; 'ಫೈಟರ್​ ಮೊದಲ ಹಾಡಿನ ವಿಡಿಯೋ ಇಲ್ಲಿದೆ - ಫೈಟರ್​ ಸಿನಿಮಾದಲ್ಲಿ ಹೃತಿಕ್​ ರೋಶನ್​ ದೀಪಿಕಾ ಪಡುಕೋಣೆ

Fighter song Sher Khul Gaye: ತಮ್ಮ ವಿಭಿನ್ನ ಮತ್ತು ಸರಾಗ ಡ್ಯಾನ್ಸಿಂಗ್​ ಸ್ಟೈಲ್​​ನಿಂದ ಈಗಾಗಲೇ ಹೃತಿಕ್​ ರೋಷನ್​​​ ಹೆಸರಾಗಿದ್ದಾರೆ. ಈ ಬಾರಿ ಅವರಿಗೆ ನಟಿ ದೀಪಿಕಾ ಜೊತೆಯಾಗಿದ್ದಾರೆ.

Fighter song Sher Khul Gaye: Hrithik Roshan and Deepika Padukone are here to burn the dance floor with their killer moves

author img

By ETV Bharat Karnataka Team

Published : Dec 15, 2023, 2:04 PM IST

ಹೈದರಾಬಾದ್​​: ನಟ ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಅಭಿಯನದ ಬಹು ನಿರೀಕ್ಷಿತ ಚಿತ್ರ 'ಫೈಟರ್'​. ಈ ಚಿತ್ರದ ಮೊದಲ ಹಾಡು ಡಿಸೆಂಬರ್​ 15 ರಂದು ಬಿಡುಗಡೆಯಾಗಿದೆ. ಈ ಮೂಲಕ ಸಿನಿಮಾ ಸಾಂಪ್ರದಾಯಿಕ ಪ್ರೊಮೋಷನ್ ತಂತ್ರವಾಗಿ​ ಈ ಹಾಡನ್ನು ರಚಿಸಲಾಗಿದೆ. ಹೃತಿಕ್​ ರೋಷನ್​ ಮತ್ತು ನಟಿ ದೀಪಿಕಾ ಒಳಗೊಂಡ ಪಾರ್ಟಿ ಹಾಡು ಇದಾಗಿದ್ದು, ಇದರ ಟ್ರಾಕ್​ ಕಿಕ್​ ಏರಿಸುವುದಂತೂ ಸುಳ್ಳಲ್ಲ.

  • " class="align-text-top noRightClick twitterSection" data="">

ತಮ್ಮ ವಿಭಿನ್ನ ಮತ್ತು ಸರಾಗ ಡ್ಯಾನ್ಸಿಂಗ್​ ಸ್ಟೈಲ್​​ನಿಂದ ಈಗಾಗಲೇ ಹೃತಿಕ್​ ​ಹೆಸರಾಗಿದ್ದಾರೆ. ಈ ಬಾರಿ ಅವರಿಗೆ ನಟಿ ದೀಪಿಕಾ ಜೊತೆಯಾಗಿದ್ದಾರೆ. ಶೇರ್​ ಖುಲ್​ ಗಯೇ'' ಎಂಬ ಹಾಡಿನಲ್ಲಿ ಅವರಿಬ್ಬರು ಸಖತ್​ ಆಗಿ ನಡು ಬಳಕಿಸುವ ಮೂಲಕ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನು ನೀಡಲಿದ್ದಾರೆ. ತಮ್ಮ ವಿಭಿನ್ನ ಡ್ಯಾನ್ಸಿಂಗ್​​ ಮೂವ್​​ಮೆಂಟ್​ ನಟ ಹೃತಿಕ್​ ಹಾಡಿನಲ್ಲಿ ಗಮನ ಸೆಳೆದಿದ್ದು, ನಟಿ ದೀಪಿಕಾ ಕೂಡ ತಾವೇನು ಕಡಿಮೆ ಇಲ್ಲ ಎಂಬಂತೆ ಅವರಿಗೆ ಸಾಥ್​ ನೀಡಿದ್ದಾರೆ. ಈ ಚಿತ್ರಕ್ಕೆ ನೃತ್ಯ ಸಂಯೋಜನೆಯನ್ನು ಬೊಸ್ಕೊ ಮಾರ್ಟಿಸ್​ ಮತ್ತು ಸೀಸರ್​ ಗೊನ್ಸಲೇವ್ಸ್​​ ಮಾಡಿದ್ದಾರೆ. ಅಲ್ಲದೇ ಫೋಟೋಗ್ರಫಿ ಕೂಡ ಹಾಡಿನಲ್ಲಿ ಹೊಸ ಅನುಭ ನೀಡಲಿದೆ. ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ನಟಿ ದೀಪಿಕಾ ಮತ್ತು ಹೃತಿಕ್​ ನಡುವಿನ ಕೆಮಿಸ್ಟ್ರಿ ತೋರಿಸುವಲ್ಲಿ ಹಾಡು ಸಫಲವಾಗಿದ್ದು, ಇಬ್ಬರು ಅದ್ಭುತ ಪ್ರದರ್ಶನ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಲಿದೆ.

ಫೈಟರ್​ ಚಿತ್ರ ನಿರ್ಮಾಪಕರು ತಮ್ಮ ಚಿತ್ರದ ಮೊದಲ ಹಾಡದಾ ಶೇರ್​ ಖುಲ್​ ಗಯೇ' ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕಾಯುವಿಕೆ ಮುಗಿದಿದೆ. ಶಂಶೇರ್​ ಪಂಥನೀಯಾ ಅಕಾ ಪ್ಯಾಟಿ ಮತ್ತು ಮಿನಲ್​ ರಾಥೋರ್​ ಅಕಾ ಮಿನಿ ಡ್ಯಾನ್ಸ್​​ ಫ್ಲೋರ್​ ಮೇಲಿನ ನೃತ್ಯ ಎಂದು ಅಡಿ ಬರಹವನ್ನು ಬರೆದಿದ್ದಾರೆ. ಶೇರ್​ ಖುಲ್​ ಗಯೇ ಹಾಡನ್ನು ವಿಶಾಲ್​ ಡಬ್ಲನಿ ಮತ್ತು ಶೆಖರ್​​ ರವ್ಜಿನನಿ ಸಂಯೋಜಿಸಿದ್ದಾರೆ. ಕುಮಾರ್​​ ಮತ್ತು ವಿಶಾಲ್​ ಡಬ್ಲನಿ ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಪಾರ್ಟಿ ಸಾಂಗ್​​ಗೆ ಬೆನ್ನಿ ದಯಲ್​, ಶಿಲ್ಪಾ ರಾವ್​, ಶೇಖರ್​ ಧ್ವನಿಯಾಗಿದ್ದಾರೆ.

ವರ್ಷಾಂತ್ಯದ ಮೋಜಿಗೆ ಹಾಡಿನ ಉಡುಗೊರೆ: ಚಿತ್ರ ತಂಡ ಈ ಹಾಡನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಿದೆ. ವರ್ಷಾಂತ್ಯದ ಪಾರ್ಟಿ ಮೋಜಿನ ಸಂಭ್ರಮದಲ್ಲಿ ಈ ಹಾಡು ಮತ್ತಷ್ಟು ಕಿಕ್​ ನೀಡಲಿದ್ದು, ಅಭಿಮಾನಿಗಳ ಸೆಳೆಯಲಿದೆ ಎನ್ನಲಾಗಿದೆ. ಫೈಟರ್​ ಸಿನಿಮಾಕ್ಕೆ ಸಿದ್ಧಾರ್ಥ್​ ಆನಂದ್​ ಆ್ಯಕ್ಷನ್​ ​ ಕಟ್​ ಹೇಳಿದ್ದಾರೆ. ನಿರ್ದೇಶಕ ಸಿದ್ಧಾರ್ಥ್​ ಮತ್ತು ಹೃತಿಕ್​ ಒಟ್ಟಿಗೆ ಕೆಲಸ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಹಿಂದೆ ಈ ಜೋಡಿ ಬ್ಯಾಂಗ್​ ಬ್ಯಾಂಗ್​ ಮತ್ತು ವಾರ್​ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಇತ್ತೀಚಿಗಷ್ಟೇ ಚಿತ್ರ ತಂಡ ಸಿನಿಮಾದ ಪಾತ್ರ ಪರಿಚಯದ ಕುರಿತ ಪೋಸ್ಟರ್ ಬಿಡುಗಡೆ ಮಾಡಿತು. ಹೃತಿಕ್​ ರೋಷನ್​​ ಸ್ಕ್ವಾಡ್ರನ್ ಲೀಡರ್​ ಶಂಶೀರ್​ ಪಂಥನೀಯಾ ಆಗಿ, ದೀಪಿಕಾ ಪಡುಕೋಣೆ ಸ್ಪಿರ್ಟೆಂಡ್​ ಸ್ಕ್ವಾಡ್ರನ್ ನಾಯಕಿ ಮಿನಲ್​ ರಾಥೋರ್​​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಎವರ್​ ಗ್ರೀನ್​ ಸ್ಟಾರ್​ ಆಗಿರುವ ಅನಿಲ್​ ಕಪೂರ್​​ ಗ್ರೂಪ್​ ಕ್ಯಾಪ್ಟನ್​ ರಾಕೇಶ್​ ಜೈ ಸಿಂಗ್​ ಆಗಿ ತೆರೆ ಮೇಲೆ ಬರಲಿದ್ದಾರೆ. ಚಿತ್ರದಲ್ಲಿ ಕರಣ್​ ಸಿಂಗ್​ ಗ್ರೋವರ್​​ ಸ್ಕ್ವಾಡ್ರನ್​ ಲೀಡರ್​ ಸರ್ತಜ್​ ಗಿಲ್​ ಆಗಿ, ಅಕ್ಷಯ್​​​ ಒಬೆರಾಯ್​ ಸ್ಕ್ವಾಡರ್ನ್​ ಲೀಡರ್​ ಬಶೀರ್​ ಖಾನ್​ ಆಗಿ ತಮ್ಮ ನಟನೆ ತೋರಲಿದ್ದಾರೆ.

ಸಿದ್ದಾರ್ಥ್​​ ಅವರ ಮಾರ್ಫ್ಲಿಕ್ಸ್​​ ಪಿಕ್ಚರ್​ ಮತ್ತು ವಯೋಕಾಮ್​18 ಸ್ಟುಡಿಯೋ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರ ಗಣರಾಜ್ಯೋತ್ಸವಕ್ಕೆ ಮುನ್ನದಿನ ಅಂದರೆ, 2024ರ ಜನವರಿ 25ಕ್ಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ - ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.