ETV Bharat / entertainment

ಫೈಟರ್ ಪಾರ್ಟ್ 2 ಬರಲಿದೆ: ನಟ ವಿನೋದ್ ಪ್ರಭಾಕರ್

author img

By ETV Bharat Karnataka Team

Published : Oct 11, 2023, 4:23 PM IST

Fighter part 2: ಕಳೆದ ವಾರವಷ್ಟೇ ಫೈಟರ್​ ಚಿತ್ರ ತೆರೆಕಂಡಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ. ಫೈಟರ್ ಸೀಕ್ವೆಲ್ ಮೂಡಿ ಬರಲಿದೆ ಎಂದು ನಟ ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.

Fighter part 2
ಫೈಟರ್ ಪಾರ್ಟ್ 2....

ಆ್ಯಕ್ಷನ್ ಸೀಕ್ವೆನ್ಸ್​ ಜೊತೆಗೆ ರೈತರ ಬಗೆಗಿನ ಕಥೆ ಆಧರಿಸಿ ಮೂಡಿಬಂದ‌ ಸಿನಿಮಾ 'ಫೈಟರ್'. ಕಳೆದ ವಾರವಷ್ಟೇ ಚಿತ್ರ ತೆರೆಕಂಡು ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ಸಿನ ಸಂಭ್ರಮವನ್ನು ಚಿತ್ರತಂಡ ಇತ್ತೀಚೆಗೆ ಹಂಚಿಕೊಂಡಿತ್ತು.

ಫೈಟರ್ ಸೀಕ್ವೆಲ್​: ಫೈಟರ್ ಸಕ್ಸಸ್ ಖುಷಿಯಲ್ಲಿರುವ ನಾಯಕ ನಟ‌ ವಿನೋದ್ ಪ್ರಭಾಕರ್ ಮಾತನಾಡಿ, ''ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಫೈಟರ್ ಸಿನಿಮಾವೇ ಉದಾಹರಣೆ. ನಮ್ಮ ಚಿತ್ರದ ಯಶಸ್ಸಿಗೆ ಕಾರಣರಾದ ಸಮಸ್ತರಿಗೂ ಹೃತ್ಪೂರ್ವಕ ಧನ್ಯವಾದಗಳು. ‌ನಾನು ಚಿತ್ರದಲ್ಲಿ ರೈತರ ಪರ ಹೋರಾಡುವ ಫೈಟರ್. ಚಿತ್ರ ರೈತರಿಗೂ ಬಹಳ ಇಷ್ಟವಾಗಿದೆ. ಸಾಕಷ್ಟು ರೈತ ಮಿತ್ರರು ನಮಗೆ ಕರೆ ಮಾಡಿ ಚಿತ್ರ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಇಂದಿನಿಂದ ನಾನು ಬೇರೆ ಬೇರೆ ಊರುಗಳಲ್ಲಿ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಲು ತೆರಳುತ್ತಿದ್ದೇನೆ. ಮೊದಲು ರಾಮನಗರದಿಂದ ಪ್ರಯಾಣ ಆರಂಭಿಸುತ್ತಿದ್ದೇನೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಒಳ್ಳೆಯದಾಗಲಿ. ಆದಷ್ಟು ಬೇಗ ಫೈಟರ್ ಭಾಗ 2 ಶುರುವಾಗಲಿ. ಫೈಟರ್ ಸೀಕ್ವೆಲ್​ ಕೂಡ ಸಂದೇಶವೊಂದನ್ನು ಸಾರುವ ಕಥೆ ಒಳಗೊಂಡಿರುತ್ತದೆ'' ಎಂದು ತಿಳಿಸಿದರು.

Fighter part 2
ಫೈಟರ್ ಯಶಸ್ಸಿನಲ್ಲಿ ಚಿತ್ರತಂಡ

ಸಿನಿಮಾಗೆ ಸಕಾರಾತ್ಮಕ ಸ್ಪಂದನೆ: ನಿರ್ದೇಶಕ ನೂತನ್ ಉಮೇಶ್ ಮಾತನಾಡಿ, "ಬಿಡುಗಡೆ ಆದ ದಿನದಿಂದಲೂ "ಫೈಟರ್" ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಜನರು ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಚಿತ್ರದಲ್ಲಿರುವ ಸಾಕಷ್ಟು ಉತ್ತಮ ಅಂಶಗಳು ನೋಡುಗರಿಗೆ ಬಹಳ ಇಷ್ಟವಾಗುತ್ತಿದೆ. ಮಾಲ್​​ಗಳಲ್ಲೂ ಹೆಚ್ಚು ಫ್ಯಾಮಿಲಿ ಆಡಿಯನ್ಸ್ ಬರುತ್ತಿದ್ದಾರೆ. ಬಹಳ ಸಂತೋಷ ಆಗುತ್ತಿದೆ" ಎಂದರು.

ರಾಜ್ಯಾದ್ಯಂತ ಪ್ರವಾಸ: ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ಮಾತನಾಡಿ, "ಫೈಟರ್ ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಮನ ತುಂಬಿ ಬಂದಿದೆ. ನಮ್ಮ ಚಿತ್ರಕ್ಕೆ ಸಾಕಷ್ಟು ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿದ್ದವು. ಕಳೆದ ನಾಲ್ಕು ದಿನಗಳಿಂದ ವಿವಿಧ ಸಂಘಟನೆಯವರು, ರೈತರು ನಮ್ಮ ಚಿತ್ರವನ್ನು ನೋಡಿ ‌ಒಳ್ಳೆಯ ಮಾತುಗಳಾಡುತ್ತಿದ್ದಾರೆ. ಸದ್ಯದಲ್ಲೇ ವಕೀಲರ ಸಂಘದವರು ಸಹ ಚಿತ್ರವನ್ನು ನೋಡುವುದಾಗಿ ಹೇಳಿದ್ದಾರೆ. ನಟ ವಿನೋದ್ ಪ್ರಭಾಕರ್ ಅವರ ಸಾರಥ್ಯದಲ್ಲಿ ರಾಜ್ಯಾದ್ಯಂತ ಪ್ರವಾಸ ಆರಂಭವಾಗಲಿದೆ. ನಮ್ಮ ಚಿತ್ರವನ್ನು ಹೆಚ್ಚಿನ ಜನ ನೋಡಿ ಪ್ರೋತ್ಸಾಹಿಸಿ" ಎಂದು ಕೇಳಿಕೊಂಡರು.

ಇದನ್ನೂ ಓದಿ: ಒಂದು ವರ್ಷದ ಬಳಿಕ ಭಾರತಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ' ಸಿನಿಮಾ: ಟೀಸರ್​ ರಿಲೀಸ್

ನಾಯಕಿ ಲೇಖ ಚಂದ್ರ ಮಾತನಾಡಿ, ‌"ನನ್ನ ಪಾತ್ರಕ್ಕೆ ಜನರು ಕೊಡುತ್ತಿರುವ ಅಭಿಪ್ರಾಯಗಳನ್ನು ನೋಡಿ ಬಹಳ ಖುಷಿ ಆಗಿದೆ. ಹೆಚ್ಚಿನ ಸಂಖ್ಯೆಯ ವೀಕ್ಷಕರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ‌" ಎಂದು ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.