ETV Bharat / entertainment

'ಹೋಮ್​ಸಿಕ್​​' ಟ್ರೇಲರ್ ಹಂಚಿಕೊಂಡ ಫರ್ಹಾನ್​ ಅಖ್ತರ್.. ಶಾರ್ಟ್ ಫಿಲ್ಮ್​​ನಲ್ಲಿ ಪುತ್ರಿ ಅಕಿರಾ ಅಭಿನಯ - ಹೋಮ್​ಸಿಕ್​​

Akira Akhtar's short Homesick trailer : ಫರ್ಹಾನ್​ ಅಖ್ತರ್ ಅವರ ಕಿರಿಯ ಮಗಳು ಅಕಿರಾ ಅಖ್ತರ್ ತಮ್ಮ ನಟನಾ ಕೌಶಲ್ಯ ಸಾಬೀತುಪಡಿಸಲು ಸಜ್ಜಾಗಿದ್ದಾರೆ.

Farhan Akhtar shares Homesick trailer
ಹೋಮ್​ಸಿಕ್​​' ಟ್ರೇಲರ್ ಹಂಚಿಕೊಂಡ ಫರ್ಹಾನ್​ ಅಖ್ತರ್
author img

By

Published : Aug 12, 2023, 4:37 PM IST

ಬಹುಮುಖ ಪ್ರತಿಭೆ ಫರ್ಹಾನ್​ ಅಖ್ತರ್ ಪ್ರಸ್ತುತ ಬಹುನಿರೀಕ್ಷಿತ ಡಾನ್​ 3 ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಇಂದು ಮುದ್ದಿನ ಮಗಳು ಅಕಿರಾ ಅಖ್ತರ್ ಅವರ ಶಾರ್ಟ್ ಫಿಲ್ಮ್ 'ಹೋಮ್​ಸಿಕ್​​'ನ ಟ್ರೇಲರ್​ ಅನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಹೋಮ್​ಸಿಕ್​​ ಟ್ರೇಲರ್​ ಅನಾವರಣ: ಬಾಲಿವುಡ್​ನಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಫರ್ಹಾನ್​ ಅಖ್ತರ್ ಇಂದು ಸೋಷಿಯಲ್​ ಮೀಡಿಯಾದಲ್ಲಿ ಹೋಮ್​ಸಿಕ್​ ಟ್ರೇಲರ್​ ಅನ್ನು ಹಂಚಿಕೊಂಡಿದ್ದಾರೆ. ಹೋಮ್​ಸಿಕ್ ಶೀರ್ಷಿಕೆಯ ಕಿರುಚಿತ್ರ ಇದೇ ಆಗಸ್ಟ್ 15 ರಂದು ತೆರೆಕಾಣಲಿದೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ತಂದೆ ಫರ್ಹಾನ್​ ಅಖ್ತರ್ ಕಿರುಚಿತ್ರದ ಟ್ರೇಲರ್​ ಅನ್ನು ಹಂಚಿಕೊಂಡಿದ್ದಾರೆ. ಮಗಳು ಅಕಿರಾ ಅಖ್ತರ್ ಅವರನ್ನೊಳಗೊಂಡ ಹೋಮ್​ಸಿಕ್​ ಕಿರುಚಿತ್ರವನ್ನು ಎರಡು ವಾರಗಳ ಹಿಂದೆ ಮುಂಬೈ ಮನೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಸಹ ತಿಳಿಸಿದರು.

ಇಂದು (ಆಗಸ್ಟ್ 12, ಶನಿವಾರ) ಉದಯೋನ್ಮುಖ ನಿರ್ದೇಶಕ ಅಹಾನ್​ ವಕ್ನಳ್ಳಿ ಆ್ಯಕ್ಷನ್​ ಕಟ್​ ಹೇಳಿರುವ ಹೋಮ್​ ಸಿಕ್​ ಟ್ರೇಲರ್​ ಅನ್ನು ಫರ್ಹಾನ್​ ಅಖ್ತರ್ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡರು. ಮಗಳು ಅಕಿರಾ ಜೊತೆಗೆ ಶ್ರುತಂತ್ ರಾಮಸ್ವಾಮಿ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.​ ಟ್ರೇಲರ್​ ಶೇರ್ ಮಾಡಿರುವ ಫರ್ಹಾನ್​ ಅಖ್ತರ್, '' ಹೋಮ್​ಸಿಕ್​​ ಶಾರ್ಟ್ ಫಿಲ್ಮ್​ನ ಒಂದೆರಡು ಸೀನ್​ ಸೂಟ್​ ಮಾಡುವಂತೆ ಮಗಳು ಅಕಿರಾ ಕೇಳಿದಾಗ ಆಶ್ಚರ್ಯಕ್ಕೊಳಗಾದೆ, ಕುತೂಹಲವಾಯಿತು '' ಎಂದು ತಿಳಿಸಿದರು.

ಇದನ್ನೂ ಓದಿ: Hbd Sara Ali Khan: ಜನ್ಮದಿನ ಸಂಭ್ರಮದಲ್ಲಿ ಸಾರಾ ಅಲಿ ಖಾನ್ ಸರಳ ವ್ಯಕ್ತಿತ್ವದಿಂದಲೇ ಜನಮನ ಗೆಲ್ಲುವ ಚೆಲುವೆ ​

ತಂದೆಯಾಗಿರುವುದರಿಂದ ಮಗಳ ಚಿತ್ರತಂಡದೊಂದಿಗೆ ಸಹಕರಿಸುವುದು ಖುಷಿಯ ವಿಚಾರವೇ. ಆದ್ರೆ 'ಹೋಮ್​ಸಿಕ್​​' ಶಾರ್ಟ್ ಫಿಲ್ಮ್ ಟೀಮ್​ ನಿರ್ದೇಶಕರನ್ನು ಒಳಗೊಂಡಂತೆ ಕೇವಲ ಮೂವರನ್ನು ಹೊಂದಿದೆ. ಕಥೆ ಹೇಳುವಿಕೆ ಹೀಗೆ ಜೀವನವಿಡೀ ಉಳಿಯಲಿ ಎಂದು ಫರ್ಹಾನ್​ ತಮ್ಮ 16 ವರ್ಷದ ಮುದ್ದಿನ ಮಗಳಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Jawan song Chaley: ಶಾರುಖ್​ ಸಿನಿಮಾದ ಮತ್ತೊಂದು ಹಾಡು ಶೀಘ್ರದಲ್ಲೇ ನಿಮ್ಮ ಮುಂದೆ

16ರ ಹರೆಯದ ಅಕಿರಾ ಅಖ್ತರ್ ಅವರು ಫರ್ಹಾನ್​ ಅಖ್ತರ್ ಮತ್ತು ಅಧುನಾ ಭಬಾನಿ (ಫರ್ಹಾನ್​ ಮೊದಲ ಪತ್ನಿ) ದಂಪತಿಯ ಕಿರಿಯ ಪುತ್ರಿ. 16 ವರ್ಷಗಳ ದಾಂಪತ್ಯದ ನಂತರ ಫರ್ಹಾನ್​ ಅಖ್ತರ್ ಮತ್ತು ಅಧುನಾ ಬೇರ್ಪಟ್ಟರು. ಇನ್ನೂ ಫರ್ಹಾನ್​ ಅವರ ಮುಂದಿನ ಚಿತ್ರ ಡಾನ್​ 3. ರಣ್​ವೀರ್​ ಸಿಂಗ್​ ಮುಖ್ಯಭೂಮಿಕೆಯ ಈ ಸಿನಿಮಾವನ್ನು ಇತ್ತೀಚೆಗಷ್ಟೇ ಘೋಷಿಸಿದ್ದಾರೆ. 12 ವರ್ಷಗಳ ಬ್ರೇಕ್​ ಬಳಿಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಇತ್ತಿಚೆಗಷ್ಟೇ ಡಾನ್​ 3ರ ಇಂಟ್ರೂಡಕ್ಷನ್​ ವಿಡಿಯೋ ಕೂಡ ಅನಾವರಣಗೊಂಡಿದ್ದು, ಚಿತ್ರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.