ETV Bharat / entertainment

ಪುನಿತ್ - ಯುವ ರಾಜ್​ಕುಮಾರ್​ ನಡುವೆ ಸಾಮ್ಯತೆ ಹುಡುಕುತ್ತಿರುವ ಫ್ಯಾನ್ಸ್​: '5'ರ ಸೀಕ್ರೆಟ್​ ಇಲ್ಲಿದೆ - Yuva Rajkumar Yuva movie

ಪುನಿತ್ ಮತ್ತು ಯುವ ರಾಜ್​ಕುಮಾರ್​ ನಡುವೆ ಕೆಲ ಸಾಮ್ಯತೆಗಳಿದ್ದು, ಇಂಟ್ರೆಸ್ಟಿಂಗ್​ ವಿಚಾರಗಳು ಇಲ್ಲಿವೆ ನೋಡಿ.

Puneet and Yuva Rajkumar
ಪುನೀತ್​-ಯುವ ರಾಜ್​ಕುಮಾರ್
author img

By

Published : Apr 28, 2023, 3:49 PM IST

ದೊಡ್ಮನೆಯ ಯುವರತ್ನ, ಅಭಿಮಾನಿಗಳ ರಾಜಕುಮಾರ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿಕೆಯ ನಂತರ‌ ಅಭಿಮಾನಿಗಳು ಉದಯೋನ್ಮುಖ ನಟ ಯುವ ರಾಜ್​ಕುಮಾರ್ ಅವರಲ್ಲಿ ಅಪ್ಪುನನ್ನು ಕಾಣುತ್ತಿದ್ದಾರೆ. ಅಭಿಮಾನಿಗಳ 'ಅಪ್ಪು'ಗಾಗಿ ರೆಡಿಯಾಗಿದ್ದ ಕಥೆಗೆ ಯುವ ರಾಜ್​ಕುಮಾರ್ ಜೀವ ತುಂಬುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ದೊಡ್ಮನೆ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಮತ್ತು ಯುವ ರಾಜ್​ಕುಮಾರ್ ನಡುವಿನ ಸಾಮ್ಯತೆ ಹುಡುಕುವ ಪ್ರಯತ್ನ ಮುಂದುವರಿಸಿದ್ದಾರೆ.

Yuva Rajkumar
ಯುವ ರಾಜ್​ಕುಮಾರ್

ಯುವ ರಾಜ್​ಕುಮಾರ್ ನಟನಾಗಬೇಕೆಂದು ಹಪಹಪಿಸಿರಲಿಲ್ಲ. ಬದಲಿಗೆ ತೆರೆ ಹಿಂದೆ ಇದ್ದರು. ಅಣ್ಣ ವಿನಯ್ ರಾಜ್​ಕುಮಾರ್​ ಸಿನಿಜೀವನದ ಆರಂಭದ ದಿನದಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಅದರಂತೆ ಅಪ್ಪು ಕೂಡ ಚಿತ್ರರಂಗಕ್ಕೆ ಬರುವ ಮುನ್ನ ನಿರ್ಮಾಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಐದರ ಪ್ರಾಯದಲ್ಲಿ ಅಪ್ಪು ಮುಖಕ್ಕೆ ಬಣ್ಣ ಹಚ್ಚಿದ್ದು, ಆ ನಂತರ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು.

ಆದರೆ, ನಾಯಕ ನಟನಾಗೋ ಮೊದಲು ಪುನೀತ್ ರಾಜ್​ಕುಮಾರ್ ಅವರು ನಿರ್ಮಾಪಕರಾಗಿ ಶಿವ ರಾಜ್​ಕುಮಾರ್ ಮತ್ತು ರಾಘವೇಂದ್ರ ರಾಜ್​​ಕುಮಾರ್ ಅವರ ಕೆಲ ಚಿತ್ರಗಳನ್ನು ನಿರ್ಮಿಸಿದ್ದಾರೆ. ದೊಡ್ಮನೆಯ ವಜ್ರೇಶ್ವರಿ ಕಂಬೈನ್ಸ್​​ನ ಡಿಸ್ಟ್ರಿಬ್ಯೂಶನ್ ವಿಭಾಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದಕ್ಕೆ ಸಾಕ್ಷಿಯೆಂಬಂತೆ ರಾಘವೇಂದ್ರ ರಾಜ್​ಕುಮಾರ್ ಅಭಿನಯದ ಉಪೇಂದ್ರ ನಿರ್ದೇಶನದ ಸ್ವಸ್ತಿಕ್ ಸಿನಿಮಾದ ಟೈಟಲ್ ಕಾರ್ಡ್​​ನಲ್ಲಿ ನಿರ್ಮಾಪಕನ ಕ್ರೆಡಿಟ್ ಪುನೀತ್ ರಾಜ್​ಕುಮಾರ್ ಹೆಸರಿನಲ್ಲಿತ್ತು. ಅಣ್ಣಾವ್ರ ಅಭಿನಯದ ಆಕಸ್ಮಿಕ ಚಿತ್ರಕ್ಕೂ ಅಪ್ಪು ಕಾಸ್ಟೂಮ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದರು.

ಬಿಸ್ನೆಸ್​​ನಲ್ಲಿ ಹೆಚ್ಚು ಒಲವು ಹೊಂದಿದ್ದ ಪುನೀತ್ ರಾಜ್‍ಕುಮಾರ್ ಹೀರೋ ಆಗಿ ಲಾಂಚ್ ಆಗುವ ಮುನ್ನ ಗ್ರಾನೈಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ರು. ಒಂದು ಹಂತದಲ್ಲಿ ವ್ಯವಹಾರ ಕ್ಷೇತ್ರದಲ್ಲೇ ಮುಂದುವರಿಯಬೇಕು ಅನ್ನೋ ಬಯಕೆ ಪುನೀತ್ ಅವರಲ್ಲಿತ್ತು. ಆದ್ರೆ ಕನ್ನಡ ಚಿತ್ರರಂಗ ಪವರ್ ಸ್ಟಾರ್​​ಗಾಗಿ ಕಾಯುತ್ತಿದ್ದು, ಸ್ವಾಗತಿಸಿತು. ಮುಂದಾಗಿದ್ದು ಇತಿಹಾಸ. ಯುವ ರಾಜ್​ಕುಮಾರ್ ಕಥೆ ಕೂಡ ಅಪ್ಪು ಕಥೆಗಿಂತ ಭಿನ್ನವೇನಿಲ್ಲ. ಯುವ ಕೂಡ ಅಪ್ಪುವಿನಂತೆಯೇ ವ್ಯವಹಾರದಲ್ಲಿ ನಿಪುಣ. ಡಾ. ರಾಜ್​​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಅನೇಕ ಬಡ ಮಕ್ಕಳ ಪಾಲಿನ ಆಶಾಕಿರಣವಾಗಿದೆಯೆಂದರೆ ಅದಕ್ಕೆ ಪ್ರಮುಖ ಕಾರಣವೇ ಯುವ ರಾಜ್​​ಕುಮಾರ್. ಅಕಾಡೆಮಿ ಹಿಂದೆ ಯುವನ ಪರಿಶ್ರಮ ತುಂಬಾನೇ ದೊಡ್ಡದು.

ಇನ್ನೂ ಪುನೀತ್ ಅಭಿನಯದ ಮೊದಲ ಸಿನಿಮಾ ಅಪ್ಪು. ಯುವ ರಾಜ್​​ಕುಮಾರ್ ಅಭಿನಯದ ಮೊದಲ ಸಿನಿಮಾ ಯುವ. ಇವೆರಡು ಸಿನಿಮಾಗಳ ಹಿಂದೆ '5'ರ ನಂಟಿದೆ. ಹೌದು, 'ಅಪ್ಪು' ಪುರಿ ಜಗನ್ನಾಥ್ ನಿರ್ದೇಶನದ ಐದನೇ ಸಿನಿಮಾ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ 'ಯುವ' ಕೂಡಾ ಸಂತೋಷ್ ಆನಂದ್ ರಾಮ್ ನಿರ್ದೇಶನದ ಐದನೇ ಸಿನಿಮಾ.

ಇದನ್ನೂ ಓದಿ: ಜಿಯಾ ಖಾನ್​​ ಆತ್ಮಹತ್ಯೆ ಪ್ರಕರಣ: ಸೂರಜ್ ಪಾಂಚೋಲಿ ನಿರ್ದೋಷಿ..ಕೋರ್ಟ್​​ ಮಹತ್ವದ ತೀರ್ಪು

ಅಪ್ಪು ಚಿತ್ರರಂಗಕ್ಕೆ ಬರುವ ಮುನ್ನವೇ ಅಶ್ವಿನಿ ಅವರ ಕೈ ಹಿಡಿದಿದ್ದರು. ಯುವ ಕೂಡ ಚಿತ್ರರಂಗಕ್ಕೆ ಬರುವ ಮುನ್ನವೇ ಗ್ರಹಸ್ಥಾಶ್ರಮವನ್ನ ಸೇರಿಕೊಂಡಿದ್ದಾರೆ. ಶ್ರೀದೇವಿ ಅವರ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ. ಇನ್ನೂ ಅಪ್ಪು ಕೂಡ ದೇಹ ದಂಡಿಸುತ್ತಿದ್ದರು. ಸದಾ ಫಿಟ್ನೆಸ್ ಕಡೆ ಗಮನ ಕೊಡುತ್ತಿದ್ದರು. ಇತ್ತ ಯುವ ರಾಜ್​ಕುಮಾರ್​ ಕೂಡ ಫಿಟ್ನೆಸ್ ಫ್ರೀಕ್ ಇರುವ ವ್ಯಕ್ತಿ.

ಇದನ್ನೂ ಓದಿ: ಪ್ಲಾಸ್ಟಿಕ್ ಸರ್ಜರಿ ಬಳಿಕ ನಟಿ ಹೃದಯಾಘಾತದಿಂದ ನಿಧನ!

ಅಪ್ಪು ನಾಯಕನಾಗಿದ್ದು ಶಿವಣ್ಣ ಅವರ ಒತ್ತಾಸೆಯಿಂದ. ಪುರಿ ಜಗನ್ನಾಥ್​ ಕಥೆ ಹೇಳಿದಾಗ, ಸಿನಿಮಾ ಅಪ್ಪು ಮಾಡಿದರೆ ಚೆನ್ನಾಗಿರುತ್ತೆ ಎಂದು ಮೊದಲು ಹೇಳಿದವರೇ ಶಿವಣ್ಣ. ಅಷ್ಟೇ ಅಲ್ಲದೇ ಪವರ್ ಸ್ಟಾರ್ ಟೈಟಲ್ ಕೊಟ್ಟವರು ಕೂಡ ಇದೇ ಶಿವಣ್ಣ. ಇಲ್ಲಿರುವ ವ್ಯತ್ಯಾಸ ಎಂದರೆ ಯುವ ರಾಜ್​ಕುಮಾರ್​ ಮನೆ ಮಂದಿ ಮಾತ್ರವಲ್ಲದೇ ಅಭಿಮಾನಿಗಳ ಒತ್ತಾಸೆಯಿಂದ ನಾಯಕ ನಟನಾಗಲು ಸಜ್ಜಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.