ETV Bharat / entertainment

ಅಂಡರ್ ವರ್ಲ್ಡ್ ಕಥೆ 'ಕಬ್ಜ' ಕಮಾಲ್: ಸೀಕ್ವೆಲ್​ ನಿರ್ಮಾಣಕ್ಕೆ ಪ್ರೇಕ್ಷಕರ ಒತ್ತಾಯ - Kabzaa 2

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kabzaa release
ಕಬ್ಜ ರಿಲೀಸ್​
author img

By

Published : Mar 17, 2023, 4:53 PM IST

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಹುಟ್ಟುಹಬ್ಬಕ್ಕೆ ಕರ್ನಾಟಕ ಅಲ್ಲದೇ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಕನ್ನಡದ ಹೈವೋಲ್ಟೆಜ್ ಚಿತ್ರ ಕಬ್ಜ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಿಂದ ಹಿಡಿದು ಮುಂಬೈ, ಹೈದರಾಬಾದ್, ಚೆನ್ನೈ ಸೇರಿದಂತೆ ಎಲ್ಲೆಲ್ಲೂ ಕಬ್ಜ ಚಿತ್ರದ್ದೇ ಹವಾ. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್​ಗಳಾದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವ ರಾಜ್​​ಕುಮಾರ್ ಅಭಿನಯದ ಕಬ್ಜ ಸಿನಿಮಾಗೆ ಅವರ ಅಭಿಮಾನಿಗಳು ಮಾತ್ರವಲ್ಲದೇ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ.

ರೌಡಿಸಂ ಎಂಬ ಅಂಡರ್​ವರ್ಲ್ಡ್ ಕಥೆಗೆ ಓಂಕಾರ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ನಿರ್ದೇಶಕ ಆರ್ ಚಂದ್ರು ಹಾಲಿವುಡ್ ಶೈಲಿಯ ಮೇಕಿಂಗ್ ಮಾಡಿ, ಅದರಲ್ಲಿ ಅಂಡರ್ ವರ್ಲ್ಡ್ ಕಥೆಯನ್ನ ಹೇಳಿದ್ದಾರೆ. ಲವ್ ಸ್ಟೋರಿ ಹಾಗೂ ಫ್ಯಾಮಿಲಿ ಸಿನಿಮಾಗಳಿಗೆ ಬ್ರ್ಯಾಂಡ್​ ಆಗಿದ್ದ ನಿರ್ದೇಶಕ ಆರ್ ಚಂದ್ರು ಇದೀಗ ಅಂಡರ್ ವರ್ಲ್ಡ್ ಕಥೆಯುಳ್ಳ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಕಬ್ಜ ಸಿನಿಮಾ 1960 - 1980ರಲ್ಲಿ ನಡೆಯುವ ಕಥೆ. ಅಮರಾವತಿ ಎಂಬ ನಗರ ಬಲಿಷ್ಠ ಅಂಡರ್ ವರ್ಲ್ಡ್ ಅಧೀನದಲ್ಲಿರುತ್ತೆ. ಬಹದ್ದೂರ್ ಎಂಬ ರಾಜಮನೆತನದವರು ಈ ಅಮರಾವತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ತುದಿಗಾಲಲ್ಲಿ ಲೆಕ್ಕಾಚಾರ ಹಾಕ್ತಾ ಇರುತ್ತಾರೆ. ಆದರೆ ಅದು ಸಾಧ್ಯವಾಗಲ್ಲ. ಅಂಡರ್​ವರ್ಲ್ಡ್ ಮುಷ್ಠಿಯಲ್ಲಿ ಈ ಅಮರಾವತಿ ಇರುತ್ತದೆ. ಈ ಅಮರಾವತಿಯಲ್ಲಿ ಬಹಳ ಬಲಿಷ್ಠನಾದ ಕಲೀಲ್ ಎಂಬ ಡಾನ್ ಪಾಳೇಗಾರನಾಗಿರುತ್ತಾನೆ. ಪೈಲಟ್ ಆಗಬೇಕು ಅಂದುಕೊಂಡಿದ್ದ ಅರ್ಕೇಶ್ವರ ಅಂದ್ರೆ ಉಪೇಂದ್ರ ಅಮರಾವತಿಗೆ ಏಕೆ ಎಂಟ್ರಿ ಕೊಡ್ತಾರೆ ಅನ್ನೋದು ಕಬ್ಜ ಸಿನಿಮಾ ಕಥೆ.

ರಿಯಲ್ ಸ್ಟಾರ್ ಉಪೇಂದ್ರ ರೆಟ್ರೋ ಲುಕ್​​ನಲ್ಲಿ ಥೇಟ್ ಬ್ಲ್ಯಾಕ್​ ಅಂಡ್ ವೈಟ್ ಕಾಲದ ಡಾನ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ಈ ಅರ್ಕೇಶ್ವರನನ್ನು ಬಂಧಿಸುವ ಖಡಕ್ ಭಾರ್ಗವ್ ಬಕ್ಷಿಯಾಗಿ ಮಿಂಚಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಕರುನಾಡ ಚಕ್ರವರ್ತಿ ಶಿವ ರಾಜ್​​ಕುಮಾರ್ ಬಂದೂಕು ಹಿಡಿದು ಬರುವ ದೃಶ್ಯ ಅಭಿಮಾನಿಗಳ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಬಾಯಲ್ಲಿ ಸಿಗರೇಟ್ ಹಚ್ಚಿ ನಾನು ಬಂದಿರೋದು ಕಬ್ಜ ಮಾಡೋದಿಕ್ಕೆ ಅನ್ನೋ ಡೈಲಾಗ್ ಕಬ್ಜ 2 ಸಿನಿಮಾಗೆ ಮುನ್ನುಡಿ ಬರೆದಂತಿದೆ.

ಉಪೇಂದ್ರ ಮಡದಿಯಾಗಿ ಶ್ರೀಯಾ ಶರಣ್ ಮಿಂಚಿದ್ದಾರೆ. ಉಳಿದಂತೆ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ, ಮುರಳಿ ಶರ್ಮ, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ನೀನಾಸಂ ಅಶ್ವಥ್, ಐ ಸಿನಿಮಾ ಖ್ಯಾತಿಯ ಕಾಮರಾಜನ್ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ: ಪುನೀತ್‌ ಬರ್ತ್‌ಡೇ ದಿನವೇ 'ಕಬ್ಜ' ರಿಲೀಸ್‌; ಅಭಿಮಾನಿಗಳ ಸಂಭ್ರಮ- ವಿಡಿಯೋ

ಕಬ್ಜ ಸಿನಿಮಾದ ಮೇಜರ್ ಹೈಲೆಟ್ಸ್ ಅಂದ್ರೆ ಕಲಾ ನಿರ್ದೇಶಕ ಶಿವಕುಮಾರ್ ಹಾಕಿರುವ ಅದ್ಧೂರಿ ಸೆಟ್​ಗಳು. ಈ ಸೆಟ್​ಗಳನ್ನು ಹಾಲಿವುಡ್ ಸಿನಿಮಾದಂತೆ ತೋರಿಸಿದ್ದಾರೆ ಕ್ಯಾಮರಾ ಮ್ಯಾನ್ ಎ.ಜೆ ಶೆಟ್ಟಿ. ಮಹೇಶ್ ಸಂಕಲನ, ಜಾನಿ ಮಾಸ್ಟರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್ ಚೇತನ್​ ಅವರ ಸಾಹಸ ಕಬ್ಜ ಸಿನಿಮಾದ ಸ್ಟ್ರೈಂಥ್. ಸಂಗೀತ ನಿರ್ದೇಶಕ ರವಿ ಬಸ್ರೂರ್ ಹಿನ್ನೆಲೆ ಸಂಗೀತ ಹೆಚ್ಚಿದ್ದು, ನವಾಮಿ ಹಾಗೂ ಕಬ್ಜ ಕಬ್ಜ ಟೈಟಲ್ ಟ್ರ್ಯಾಕ್ ಚುಮು ಚುಮು ಚಳಿ ಸಾಂಗ್ ಸಿನಿ ಪ್ರೇಕ್ಷಕರನ್ನು ರಂಜಿಸುತ್ತವೆ.

ಇದನ್ನೂ ಓದಿ: ಸ್ವರಾ ಭಾಸ್ಕರ್ - ಫಹಾದ್ ಅಹ್ಮದ್ ಆರತಕ್ಷತೆ: ರಾಹುಲ್​ ಗಾಂಧಿ, ಜಯಾ ಬಚ್ಚನ್​ ಸೇರಿದಂತೆ ಗಣ್ಯರು ಭಾಗಿ

ಶ್ರೀ ಸಿದ್ಧೇಶ್ವರ ಎಂಟರ್​ಪ್ರೈಸಸ್​ನಡಿ ಆರ್​ ಚಂದ್ರು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿರೋ ಈ ಕಬ್ಜ ಸಿನಿಮಾ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಯಶಸ್ವಿಯಾಗುವ ಲಕ್ಷಣಗಳಿವೆ. ಸಿನಿಮಾ ನೋಡಿದ ಪ್ರೇಕ್ಷಕರು ಕಬ್ಜ 2 ಸಿನಿಮಾ ಅದಷ್ಟು ಬೇಗ ಮಾಡಿ ಅಂತಾ ಹೇಳುತ್ತಿರೋದು ನಿರ್ದೇಶಕ ಆರ್ ಚಂದ್ರು ಅವರಿಗೆ ಹೆಮ್ಮೆ ಅನಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.