ETV Bharat / entertainment

ಏಳು ವರ್ಷಗಳ ಬಳಿಕ ಪ್ರದರ್ಶನ ನೀಡಿದ ಖ್ಯಾತ ಗಾಯಕಿ ರಿಹಾನ್ನಾ - ಈಟಿವಿ ಭಾರತ್​ ಕನ್ನಡ

ಖ್ಯಾತ ಗಾಯಕಿಯಾಗಿರುವ ರಿಹಾನ್ನಾ ಅವರು ಏಳು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಲೈವ್​ ಪ್ರದರ್ಶನ ನೀಡಿದ್ದಾರೆ.

ಏಳು ವರ್ಷಗಳ ಬಳಿಕ ಪ್ರದರ್ಶನ ನೀಡಿದ ಖ್ಯಾತ ಗಾಯಕಿ ರಿಹಾನ್ನಾ

author img

By

Published : Feb 13, 2023, 1:21 PM IST

ಗ್ಲೆಂಡಲೆ: ಏಳು ವರ್ಷಗಳ ಬಳಿಕ ಗಾಯಕಿ ರಿಹಾನ್ನಾ ತಮ್ಮ ಪ್ರದರ್ಶನವನ್ನು ನೀಡಿದ್ದಾರೆ. ಭಾನುವಾರ ಕಾನ್ಸಾಸ್ ಸಿಟಿ ಚೀಫ್ಸ್ ಮತ್ತು ಫಿಲಡೆಲ್ಫಿಯಾ ಈಗಲ್ಸ್ ನಡುವಿನ ಎನ್​ಎಫ್​ಎಲ್​ ಸೂಪರ್ ಬೌಲ್ 57 ಫುಟ್ಬಾಲ್ ಪಂದ್ಯಾವಳಿಯಲ್ಲಿ ಅವರು ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಇಲ್ಲಿನ ಸ್ಟೇಟ್​ ಫಾರ್ಮ್​ ಸ್ಟೇಡಿಯಂನಲ್ಲಿ ಬಿಚ್​ ಬೆಟರ್​​ ಹಾವ್​ ಮೈ ಮನಿ ಸಾಹಿತ್ಯಕ್ಕೆ ದನಿಯಾದರು. ಕೆಂಪು ಬಣ್ಣದ ಜಂಪ್​ ಸೂಟ್​ ಉಡುಗೆಯಲ್ಲಿ ರಿಹಾನ್ನಾ ಹಾಡುತ್ತಿದ್ದಂತೆ, ಅಭಿಮಾನಿಗಳು ಮೈದಾನದಲ್ಲೇ ಹೆಜ್ಜೆ ಹಾಕಿ ಅವರಿಗೆ ಹುರುದಿಂಬಿಸಿದರು. ತಮ್ಮ ಬಹು ಹಿಟ್​ ಹಾಡಿಗಳಾದ ವೇರ್​ ಹಾವ್​ ಯೂ ಬಿನ್​ ಮತ್ತು ಒನ್ಲಿ ಗರ್ಲ್ಸ್​ ಹಾಗೂ ವಾಂಟ್​ ಯು ಟೂ ಫೀಲ್​ ಲೈಕ್​ ಐ ಎಮ್​ ದಿ ಒನ್ಲಿ ಗರ್ಲ್​ ಇನ್​ ದ ವರ್ಲ್ಡ್​ ಹಾಡಿನ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದರು.

ಸೂಪರ್ ಬೌಲ್​ನ ಹಾಫ್​ಟೈಮ್​​ ಮನೋರಂಜನಾ ವೇದಿಕೆ ಮತ್ತು ಬಣ್ಣಗಳು ಒಂದೇ ಆಗಿರುತ್ತದೆ. ಇದರಲ್ಲಿ ತಕ್ಷಣಕ್ಕೆ ಉಡುಪುಗಳ ಬದಲಾವಣೆ, ದೃಶ್ವಗಳ ಬದಲಾವಣೆ ಅಥವಾ ಅತಿಥಿಗಳ ಪರಿಚಯ ಇರುವುದಿಲ್ಲ. ಇಡೀ ಸೆಟ್​ ಒಂದೇ ರೀತಿಯಲ್ಲಿದ್ದು, ಕೆಂಪು ಬಣ್ಣದಿಂದ ಸಂಪೂರ್ಣವಾಗಿ ಮುಳುಗಿತ್ತು. ಇನ್ನು ಈ ಪ್ರದರ್ಶನ ಮುಂದುವರೆಯುತ್ತಿದ್ದಂತೆ ನೃತ್ಯಗಾರರು ಬಿಳಿ ಬಣ್ಣದ ವಸ್ತ್ರಕ್ಕೆ ಬದಲಾದವರು.

ಇನ್ನು ಆಕೆಯ ಜನಪ್ರಿಯ ಡೈಮಂಡ್​ ಹಾಡು ಹೇಳುತ್ತಿದ್ದಂತೆ, ಪಟಾಕಿಗಳು ಸಿಡಿದು, ಬೆಳಕುಗಳು ಹರಿದವು. ಕಳೆದ ಏಳು ವರ್ಷಗಳಿಂದ ಯಾವುದೇ ಲೈವ್​ ಪ್ರದರ್ಶನ ನೀಡದ ರಿಹಾನ್ನಾ ಇದೀಗ ತಾಯಿಯಾದ ನಂತರ, ಸುದೀರ್ಘ ವಿರಾಮದ ಬಳಿಕ ಇದು ಅವರ ಮೊದಲ ನೇರ ಪ್ರದರ್ಶನವಾಗಿದೆ.

ಸೂಪರ್ ಬೌಲ್ 57 ಫುಟ್ಬಾಲ್​ ಪಂದ್ಯಾವಳಿಯಲ್ಲಿ ಕ್ರಿಸ್ ಸ್ಟ್ಯಾಪಲ್ಟನ್, ರಾಷ್ಟ್ರಗೀತೆ ಹಾಡಿದರು. ಫಿಲಡೆಲ್ಫಿಯಾ ಈಗಲ್ಸ್‌ಗೆ ಕಾನ್ಸಾಸ್ ಸಿಟಿ ಚೀಫ್ಸ್ ಪಂದ್ಯಾವಳಿ ಆರಂಭಕ್ಕೆ ಮುನ್ನ ತಮ್ಮ ಎಲೆಕ್ಟ್ರಿಕ್ ಗಿಟಾರ್‌ನ ಮೂಲಕ ಮೋಡಿ ಮಾಡಿದರು. ಸರಳ ಉಡುಗೆ ಮೂಲಕ ಕಂಗೊಳಿಸಿದ ಕ್ರಿಸ್ ಸ್ಟ್ಯಾಪಲ್ಟನ್, ಕಪ್ಪು ಬಣ್ಣದ ಡೆನಿಮ್​ ಮತ್ತು ಸನ್​ಗ್ಲಸ್​ ತೊಟ್ಟು ತಮ್ಮ ಸಿಗ್ನೇಚರ್​ ಸ್ಟೈಲ್​ ಆದ ಕವ್​ಬಾಯ್​ ಹ್ಯಾಟ್​ ತೊಟ್ಟರು.

ಅವರ ಹಾಡಿನ ಶೈಲಿ ನಿಧಾನವಾಗಿದ್ದು, ಬೇರೆ ಕಂಟ್ರಿ ಸ್ಟಾರ್​ ಆದ ಮಿಕ್ಕಿ ಗುಯೆಟೊನ್​ಗೆ ಹೋಲಿಸಿದರೆ ರಾಷ್ಟ್ರಗೀತೆ ಹಾಡಿನ ಅವಧಿ 10 ಸೆಕೆಂಡ್ ಹೆಚ್ಚಿತು. ​ಈಗಲ್ಸ್ ತರಬೇತುದಾರ ನಿಕ್ ಸಿರಿಯಾನಿ ಮತ್ತು ಆರಂಭಿಕ ಕೇಂದ್ರ ಜೇಸನ್ ಕೆಲ್ಸೆ ಇಬ್ಬರೂ ಸ್ಟೇಪಲ್ಟನ್ ಅವರ ಭಾವನಾತ್ಮಕ ಪ್ರದರ್ಶನದ ವೇಳೆ ಕಣ್ಣೀರು ಹಾಕಿದರು.

ಸ್ಟ್ಯಾಪಲ್‌ಟನ್‌ನ ಗೀತೆಯ ಮೊದಲು, ಅಬಾಟ್ ಎಲಿಮೆಂಟರಿ ತಾರೆ ಶೆರಿಲ್ ಲೀ ರಾಲ್ಫ್ ಲಿಫ್ಟ್ ಎವೆರಿ ವಾಯ್ಸ್ ಮತ್ತು ಸಿಂಗ್ ಅವರು ಕೂಡ ಪ್ರದರ್ಶನ ತೋರಿದರು. ಕೆಂಪು ವೆಲ್ವೆಟ್​ ಗೌನ್​ ತೊಟ್ಟ ಶೆರಿಲ್​, ರಾಷ್ಟ್ರಗೀತೆ ಹಾಡುತ್ತಿದ್ದಂತೆ, ಗಾಯಕ ತಂಡ ಕೂಡ ಆಕೆಗೆ ಧ್ವನಿ ಗೂಡಿಸಿದವು

ಏನಿದು ಸೂಪರ್​ ಬೌಲ್​ 57: ಸೂಪರ್ ಬೌಲ್ ಲೀಗ್ ಚಾಂಪಿಯನ್ ಅನ್ನು ನಿರ್ಧರಿಸಲು ನ್ಯಾಷನಲ್ ಫುಟ್‌ಬಾಲ್ ಲೀಗ್‌ನ ವಾರ್ಷಿಕ ಅಂತಿಮ ಪ್ಲೇಆಫ್ ಆಟವಾಗಿದೆ.

ಇದನ್ನೂ ಓದಿ: ಸಚಿನ್ ತೆಂಡಲ್ಕೂರ್​ 'ಆರ್​ಆರ್​ಆರ್' ಟ್ವೀಟ್​ ಸಖತ್​ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.