ಭಾರತೀಯ ಸಿನಿಮಾರಂಗ ಅಲ್ಲದೇ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗುವಂತೆ ಕನ್ನಡ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈ ಮಧ್ಯೆ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆಗಳು ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿವೆ. ಕೆಲವು ದಿನಗಳ ಹಿಂದೆ ಕೆಜಿಎಫ್, ಕಾಂತಾರ ನಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತದೆ ಎನ್ನುವ ಸುದ್ದಿಯೂ ಇದೆ. ಆದರೆ ಈ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಇದೀಗ ಕನ್ನಡದ ಮತ್ತೊಂದು ಖ್ಯಾತ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್ ಸಂಸ್ಥೆ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ.
ಹೌದು, ಕನ್ನಡ ಚಿತ್ರರಂಗದಲ್ಲಿ ಸಖತ್, ಬೈಟು ಲವ್ ಹಾಗೂ ಈಗ ಕೆ.ಡಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ KVN ನಿರ್ಮಾಣ ಸಂಸ್ಥೆ ಈಗ ಬಾಲಿವುಡ್ಗೆ ಲಗ್ಗೆ ಇಟ್ಟಿದೆ. ಕೆವಿಎನ್ ಸಂಸ್ಥೆ ಹಿಂದಿಯ ಹೆಸರಾಂತ ನಟ ಪಂಕಜ್ ತ್ರಿಪಾಠಿ ನಾಯಕನಾಗಿರುವ ಹೊಸ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದು, ಮೊನ್ನೆಯಿಂದ ಮುಂಬೈನಲ್ಲಿ ಶೂಟಿಂಗ್ ಪ್ರಾರಂಭಿಸಿದೆ.
![production company KVN ventured into Bollywood](https://etvbharatimages.akamaized.net/etvbharat/prod-images/17143479_meg.jpg)
ಕೆವಿಎನ್ ನಿರ್ಮಾಣದ ಮೂರನೇ ಸಿನಿಮಾ ಇದಾಗಿದ್ದು, ಪಂಕಜ್ ತ್ರಿಪಾಠಿ, ಪಾರ್ವತಿ ಮೆನನ್, ಸಂಜನಾ ಸಂಘಿ ಹಾಗೂ ಮುಂತಾದವರು ನಟಿಸುತ್ತಿದ್ದಾರೆ. ಪಿಂಕ್ ಸಿನಿಮಾ ಖ್ಯಾತಿಯ ನಿರ್ದೇಶಕ ಅನಿರುದ್ಧ್ ರಾಯ್ ಚೌದ್ರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ: 'ಪದವಿ ಪೂರ್ವ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ಜಗ್ಗೇಶ್