ತಂತ್ರಜ್ಞಾನ ಬಹಳ ಮುಂದುವರೆದಿದೆ. ಆದರೆ, ಇದರ ದುರ್ಬಳಕೆ ಹೆಚ್ಚಾಗುತ್ತಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಬಳಕೆ ಮಾಡಿಕೊಂಡು ಯಾರ ಮುಖವನ್ನು ಯಾರ ದೇಹಕ್ಕೆ ಬೇಕಾದರೂ ಜೋಡಿಸಬಹುದು. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ನಟಿ ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನರು ಈ ವಿಡಿಯೋದಲ್ಲಿ ಕಾಣಿಸುತ್ತಿರುವುದು ರಶ್ಮಿಕಾರೆಂದೇ ತಪ್ಪಾಗಿ ಭಾವಿಸಿದ್ದಾರೆ. ಆದರೆ, ಪತ್ರಕರ್ತರೊಬ್ಬರು ಮೂಲ ವಿಡಿಯೋವನ್ನು ಪತ್ತೆ ಮಾಡಿ, ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಫಿಟ್ ಡ್ರೆಸ್ ಹಾಕಿ ಲಿಫ್ಟ್ ಏರುತ್ತಿರುವ ದೃಶ್ಯವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವಿದೆ. ಆದರೆ ಈ ವಿಡಿಯೋ ಅಸಲಿಗೆ ಇದು ಮತ್ತೊಬ್ಬ ಯುವತಿಯದ್ದು. ಅಕ್ಟೋಬರ್ 8ರಂದು ಆ ಯುವತಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವಿಡಿಯೋ ಹಂಚಿಕೊಂಡಿದ್ದರು. ಅದೇ ವಿಡಿಯೋಗೆ ಎಐ ತಂತ್ರಜ್ಞಾನ ಬಳಸಿ ಯಾರೋ ಕಿಡಿಗೇಡಿಗಳು ಆಕೆಯ ಮುಖಕ್ಕೆ ರಶ್ಮಿಕಾ ಮುಖವನ್ನು ಜೋಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಜನರು, ಇದು ನಟಿ ರಶ್ಮಿಕಾ ಮಂದಣ್ಣ ಅವರದ್ದೇ ಎಂದು ತಪ್ಪಾಗಿ ಭಾವಿಸಿದ್ದಾರೆ.
-
The original video is of Zara Patel, a British-Indian girl with 415K followers on Instagram. She uploaded this video on Instagram on 9 October. (2/3) pic.twitter.com/MJwx8OldJU
— Abhishek (@AbhishekSay) November 5, 2023 " class="align-text-top noRightClick twitterSection" data="
">The original video is of Zara Patel, a British-Indian girl with 415K followers on Instagram. She uploaded this video on Instagram on 9 October. (2/3) pic.twitter.com/MJwx8OldJU
— Abhishek (@AbhishekSay) November 5, 2023The original video is of Zara Patel, a British-Indian girl with 415K followers on Instagram. She uploaded this video on Instagram on 9 October. (2/3) pic.twitter.com/MJwx8OldJU
— Abhishek (@AbhishekSay) November 5, 2023
ಇದೀಗ ಭಾರತೀಯ ಪತ್ರಕರ್ತ ಅಭಿಷೇಕ್ ಕುಮಾರ್ ಎಂಬವರು ವಿಡಿಯೋದ ಫ್ಯಾಕ್ಟ್ ಚೆಕ್ ಮಾಡಿದ್ದಾರೆ. ಮೂಲ ವಿಡಿಯೋವನ್ನು ಪತ್ತೆ ಹಚ್ಚಿ ಎಡಿಟೆಡ್ ಹಾಗೂ ಒರಿಜಿನಲ್ ಎರಡೂ ವಿಡಿಯೋಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾರದ್ದೇ ಎನ್ನಲಾದ ವೈರಲ್ ವಿಡಿಯೋ ನಿಜವಾಗಿಯೂ ಅವರದ್ದಲ್ಲ. ಬೇರೊಬ್ಬ ಯುವತಿಯ ವಿಡಿಯೋ ಇದು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇಂತಹ ವಿಡಿಯೋ ವೈರಲ್ ಆಗುತ್ತಿರುವ ಹಿಂದಿನ ಜಾಡು ಪತ್ತೆ ಹಚ್ಚಿ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸ್ಟೈಲಿಶ್ ಡ್ರೆಸ್ನಲ್ಲಿ ರಶ್ಮಿಕಾ ಮಂದಣ್ಣ ಬೊಂಬಾಟ್ ಲುಕ್.. ಕಿರಿಕ್ ಬೆಡಗಿಯ ಹೊಸ ಫೋಟೋ
'ಕ್ರಮ ಕೈಗೊಳ್ಳಿ' ಎಂದ ಬಿಗ್ ಬಿ: ಇನ್ನು, ಅಭಿಷೇಕ್ ಕುಮಾರ್ ಅವರ ಎಕ್ಸ್ ಪೋಸ್ಟ್ ಅನ್ನು ಮರುಹಂಚಿಕೊಂಡಿರುವ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
-
yes this is a strong case for legal https://t.co/wHJl7PSYPN
— Amitabh Bachchan (@SrBachchan) November 5, 2023 " class="align-text-top noRightClick twitterSection" data="
">yes this is a strong case for legal https://t.co/wHJl7PSYPN
— Amitabh Bachchan (@SrBachchan) November 5, 2023yes this is a strong case for legal https://t.co/wHJl7PSYPN
— Amitabh Bachchan (@SrBachchan) November 5, 2023
ರಶ್ಮಿಕಾ ಮಂದಣ್ಣ ಸಿನಿಮಾಗಳು.. ಸ್ಯಾಂಡಲ್ವುಡ್ನಿಂದ ವೃತ್ತಿ ಜೀವನ ಆರಂಭಿಸಿದ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿಯೂ ಅವಕಾಶ ಪಡೆದುಕೊಂಡಿದ್ದಾರೆ. ಕೊನೆಯದಾಗಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟ ರಣ್ಬೀರ್ ಕಪೂರ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಜೊತೆ ಅನಿಮಲ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾ ಡಿಸೆಂಬರ್ 1 ರಂದು ತೆರೆಗಪ್ಪಳಿಸಲಿದೆ. ಇನ್ನು ದಕ್ಷಿಣದ ಬಹುನಿರೀಕ್ಷಿತ ಪುಷ್ಪ 2 ಶೂಟಿಂಗ್ ಚುರುಕುಗೊಂಡಿದೆ. ಇದಲ್ಲದೇ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ ನಿರ್ದೇಶನದ ಮುಂದಿನ ಸಿನಿಮಾ 'ದಿ ಗರ್ಲ್ಫ್ರೆಂಡ್'ನಲ್ಲಿ (The Girlfriend) ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾವಾಗಿದೆ.
ಇದನ್ನೂ ಓದಿ: ತಮ್ಮದೇ ಹಿಟ್ ಸಾಂಗ್ಗೆ ಮೈ ಬಳುಕಿಸಿದ ರಶ್ಮಿಕಾ ಮಂದಣ್ಣ - ನ್ಯಾಷನಲ್ ಕ್ರಶ್ ವಿಡಿಯೋ ನೋಡಿ