ಬೆಂಗಳೂರಿನಲ್ಲಿ ಹೆಚ್ಚು ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳು ಇರುವುದರಿಂದ ರಾಜ್ಯ ರಾಜಧಾನಿಯನ್ನು 'ಎಲೆಕ್ಟ್ರಾನಿಕ್ ಸಿಟಿ' ಎಂದೇ ಕರೆಯಲಾಗುತ್ತದೆ. ಇದೀಗ ಇದೇ ಶೀರ್ಷಿಕೆಯಡಿ ಸಿನಿಮಾ ತಯಾರಾಗುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕೆ.ಪಿ.ಸಿ.ಸಿ ಜನರಲ್ ಸೆಕ್ರೆಟರಿ ಶಿವಣ್ಣ, ಶಿಕ್ಷಣ ತಜ್ಞ ವುಡೆ ಪಿ.ಕೃಷ್ಣ ಹಾಗೂ ಚಲನಚಿತ್ರ ನಿರ್ದೇಶಕ ಲಿಂಗದೇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಆರ್.ಚಿಕ್ಕಣ್ಣ ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾದ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
- " class="align-text-top noRightClick twitterSection" data="">
ಆರ್.ಚಿಕ್ಕಣ ಮಾತನಾಡಿ, "ನಾನು ಹದಿನಾರು ವರ್ಷದಿಂದ ಐಟಿ ಉದ್ಯೋಗದಲ್ಲಿದ್ದೇನೆ. ಐಟಿಯವರ ಬದುಕಿನ ಬಗ್ಗೆ ಚಿತ್ರ ಮಾಡುವ ಆಸೆ ಬಂತು. ಐದು ವರ್ಷಗಳ ಹಿಂದೆ ಕಥೆ ಬರೆದೆ. ಚಿತ್ರರಂಗದ ಅನೇಕರ ಜೊತೆ ಚರ್ಚಿಸಿ, 2021ರಲ್ಲಿ ಚಿತ್ರೀಕರಣ ಆರಂಭಿಸಿದೆ. 2022ರಲ್ಲಿ ಚಿತ್ರ ಸಿದ್ದವಾಯಿತು. ಈವರೆಗೂ ನಲವತ್ತೆರಡಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿರುವ ನಮ್ಮ ಚಿತ್ರ ಮೂವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ವಿವಿಧ ಭಾಗಗಳಲ್ಲಿ ಪಡೆದುಕೊಂಡಿದೆ" ಎಂದು ಹೆಮ್ಮೆಯಿಂದ ಹೇಳಿದರು.
ನಂತರ ಮಾತನಾಡಿದ ನಾಯಕ ನಟ ಆರ್ಯನ್ ಶೆಟ್ಟಿ, "ಚಿತ್ರದಲ್ಲಿ ನಾನು ಐಟಿ ಉದ್ಯೋಗಿ. ಚಿಕ್ಕಣ್ಣ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಈ ಚಿತ್ರದಿಂದ 'ಘೋಸ್ಟ್' ಚಿತ್ರದಲ್ಲಿ ನಟಿಸುವ ಅವಕಾಶವೂ ಒದಗಿ ಬಂತು" ಎಂದು ಸಂತಸ ವ್ಯಕ್ತಪಡಿಸಿದರು.
ನ.24 ರಂದು ಬಿಡುಗಡೆ: 'ಎಲೆಕ್ಟ್ರಾನಿಕ್ ಸಿಟಿ'ಯಲ್ಲಿ ನಾಯಕಿಯರಾಗಿ ದಿಯಾ ಆಶ್ಲೇಷ, ರಕ್ಷಿತ ಕೆರೆಮನೆ ಹಾಗೂ ರಶ್ಮಿ ಅಭಿನಯಿಸಿದ್ದಾರೆ. ರಾಜಾ ಶಿವಶಂಕರ್ ಕ್ಯಾಮರಾ ವರ್ಕ್, ಸೌಂದರ್ ರಾಜ್ ಸಂಕಲನ ಹಾಗೂ ಹಂಪಿ ಸುಂದರ್ ಕಲಾ ನಿರ್ದೇಶನವಿದೆ. ನವೆಂಬರ್ 24ರಂದು ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ: ಬ್ಯಾಡ್ ಮ್ಯಾನರ್ಸ್ ಚಿತ್ರ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಬಗ್ಗೆ ಹೇಳಿದ್ದೇನು ?