ಬಾಲಿವುಡ್ ಸ್ಟಾರ್ ನಿರ್ಮಾಪಕಿ ಏಕ್ತಾ ಕಪೂರ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ. ಬಾಲಾಜಿ ಟೆಲಿಫಿಲ್ಮ್ಸ್ ಮೂಲಕ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಿಗೆ ಬಂಡವಾಳ ಹೂಡಿರುವ ನಿರ್ಮಾಪಕಿ, ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾಗೆ ದುಡ್ಡು ಹಾಕಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದ ಮೂಲಕ ಅವರೇ ಮಾಹಿತಿ ನೀಡಿದ್ದಾರೆ.
ಈಗಾಗಲೇ ತಿಳಿದಿರುವಂತೆ ಕನ್ನಡದ ಖ್ಯಾತ ನಿರ್ದೇಶಕ ನಂದಕಿಶೋರ್, ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಹೆಸರು 'ವೃಷಭ'. ಕನ್ನಡದಲ್ಲಿ ಅಧ್ಯಕ್ಷ, ರನ್ನ, ಪೊಗರುನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಕಿಶೋರ್, ಈ ಸಿನಿಮಾ ಮೂಲಕ ಬೇರೆ ಭಾಷೆಯಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
ಇದು 2024ರ ಬಹುದೊಡ್ಡ ಚಿತ್ರ ಎಂದು ಹೇಳಲಾಗುತ್ತಿದೆ. ಇದೇ ಸಿನಿಮಾಗೆ ಏಕ್ತಾ ಕಪೂರ್ ಬಂಡವಾಳ ಹೂಡುತ್ತಿದ್ದಾರೆ. ಈ ಬಗ್ಗೆ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ನಿರ್ಮಾಪಕಿ, "ದಿಗ್ಗಜ ನಟ ಮೋಹನ್ಲಾಲ್ ಅವರೊಂದಿಗೆ ಕೆಲಸ ಮಾಡಲು ತುಂಬಾ ಉತ್ಸುಕಳಾಗಿದ್ದೇನೆ. ಬಾಲಾಜಿ ಟೆಲಿಫಿಲ್ಮ್ಸ್ ಕನೆಕ್ಟ್ ಮೀಡಿಯಾ ಮತ್ತು ಎವಿಎಸ್ ಸ್ಟುಡಿಯೋಸ್ 'ವೃಷಭ'ಕ್ಕಾಗಿ ಜೊತೆಯಾಗಲಿದೆ. ಹೆಚ್ಚಿನ ಎಮೋಷನ್ಸ್ ಮತ್ತು ವಿಎಫ್ಎಕ್ಸ್ಗಳೊಂದಿಗೆ ಸಿನಿಮಾ ಆಕ್ಷನ್ ಎಂಟರ್‌ಟೈನರ್ ಆಗಿರಲಿದೆ. 'ವೃಷಭ' 2024ರ ಅತಿದೊಡ್ಡ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ. ಮಲಯಾಳಂ, ತೆಲುಗು, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಏಕಕಕಾಲಕ್ಕೆ ಬಿಡುಗಡೆಯಾಗಲಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Roopesh Shetty 'ಸರ್ಕಸ್' ಸಕ್ಸಸ್; 'ಬಿಗ್ ಬಾಸ್' ವಿನ್ನರ್ಗೆ ಸ್ಪರ್ಧಿಗಳು ಸಾಥ್, ಸಿಂಪಲ್ ಸುನಿ ಪ್ರಶಂಸೆ
ಈ ಮೂಲಕ ಮೊದಲ ಬಾರಿಗೆ ಏಕ್ತಾ ಕಪೂರ್ ಪ್ಯಾನ್ ಇಂಡಿಯಾ ಸಿನಿಮಾವೊಂದಕ್ಕೆ ಹಣ ಸುರಿಯಲು ಸಿದ್ಧರಾಗಿದ್ದಾರೆ. ಈಗಾಗಲೇ ಸಿನಿಮಾವನ್ನು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಚಿತ್ರೀಕರಿಸಲಾಗುತ್ತಿದೆ. ನಂದ ಕಿಶೋರ್ ಅವರು ಈ ಹಿಂದೆ ಎಂಟು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಲ್ಲವೂ ಸೂಪರ್ ಹಿಟ್ ಆಗಿವೆ. 'ವೃಷಭ' ಆ್ಯಕ್ಷನ್ ಎಂಟರ್‌ಟೈನರ್ ಆಗಿದ್ದು, ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಅಪ್ಪ- ಮಗನ ಬಾಂಧವ್ಯದ ಕಥೆ.. 'ವೃಷಭ' ಕಥೆಯು ಆ್ಯಕ್ಷನ್ ಮತ್ತು ಭಾವನೆಗಳಿಂದ ತುಂಬಿದ ತಂದೆ ಮತ್ತು ಮಗನ ಮೇಲೆ ಕೇಂದ್ರೀಕೃತವಾಗಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಏಕ್ತಾ ಕಪೂರ್ ನಿರ್ಮಾಣದ ಮುಂದಿನ ಚಿತ್ರ 'ದಿ ಕ್ರೂ' ಆಗಿದೆ. ಇದರಲ್ಲಿ ಕೃತಿ ಸನೋನ್, ಕರೀನಾ ಕಪೂರ್ ಖಾನ್ ಮತ್ತು ಟಬು ಇದ್ದಾರೆ. ರಾಜೇಶ್ ಕೃಷ್ಣನ್ ಈ ಚಿತ್ರದ ನಿರ್ದೇಶಕರು. ಇನ್ನೂ ಮಾಲಿವುಡ್ ದಿಗ್ಗಜ ಮೋಹನ್ ಲಾಲ್, 'ಲೂಸಿಫರ್ 2' ಮತ್ತು 'ಮಲೈಕೊಟ್ಟೈ ವಾಲಿಬನ್' ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Allu Arjun & Trivikram: ಮತ್ತೊಮ್ಮೆ ಅಲ್ಲು ಅರ್ಜುನ್- ತ್ರಿವಿಕ್ರಮ್ ಕಾಂಬೋದಲ್ಲಿ ಹೊಸ ಸಿನಿಮಾ..