ETV Bharat / entertainment

ಕಾತರಕ್ಕೆ ಫುಲ್​ಸ್ಟಾಪ್​: ಶಾರುಖ್​ ಖಾನ್​​ ಜನ್ಮದಿನಕ್ಕೆ 'ಡಂಕಿ' ಟೀಸರ್ ಗಿಫ್ಟ್​​ - ರಾಜ್‌ಕುಮಾರ್ ಹಿರಾನಿ

Dunki Teaser out: ಬಾಲಿವುಡ್ ನಟ ಶಾರುಖ್​ ಖಾನ್​ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಚಿತ್ರ 'ಡಂಕಿ'ಯ ಟೀಸರ್​​ ಅನಾವರಣಗೊಂಡಿದೆ.

Dunki teaser
ಡಂಕಿ ಟೀಸರ್
author img

By ETV Bharat Karnataka Team

Published : Nov 2, 2023, 11:33 AM IST

Updated : Nov 2, 2023, 12:02 PM IST

ಅಪಾರ ಅಭಿಮಾನಿಗಳ ಕಾಯುವಿಕೆ ಅಂತ್ಯಗೊಂಡಿದೆ. ಕೊನೆಗೂ, ಶಾರುಖ್ ಖಾನ್ ಅವರ ಜನ್ಮದಿನದ ಸಲುವಾಗಿ 'ಡಂಕಿ' ಸಿನಿಮಾದ ಟೀಸರ್​ ಅನಾವರಣಗೊಳಿಸಲಾಗಿದೆ. ಚಿತ್ರ ತಯಾರಕರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮುಖೇನ ಶಾರುಖ್​ ಖಾನ್​ ಜನ್ಮದಿನವನ್ನು ವಿಶೇಷವಾಗಿಸಿದ್ದಾರೆ. 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ 'ಡಂಕಿ' ಟೀಸರ್​ ಬಿಡುಗಡೆಗೆ ಚಿತ್ರತಯಾರಕರು ವಿಶೇಷ ಸಂದರ್ಭಕ್ಕಾಗಿ ಕಾದಿದ್ದರು.

  • " class="align-text-top noRightClick twitterSection" data="">

ಟೀಸರ್ ಮತ್ತೊಂದು ಬ್ಲಾಕ್​​​​ಬಸ್ಟರ್ ಸಿನಿಮಾ ಬರಲಿದೆ ಎಂಬ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಚಿತ್ರವನ್ನು ಶಾರುಖ್​​ ಖಾನ್ ಅವರ ಬ್ಯಾನರ್, ರೆಡ್ ಚಿಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ತಾಪ್ಸಿ ಪನ್ನು ನಾಯಕಿಯಾಗಿ ನಟಿಸಿದ್ದಾರೆ.

ಟೀಸರ್ ಬಿಡುಗಡೆಗೆ ಮುನ್ನ, '#Dunkiteaser' ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿತ್ತು. ಚಿತ್ರ ಮುಂದಿನ ತಿಂಗಳಾಂತ್ಯ ತೆರೆಕಾಣಲಿದ್ದರೂ, ಕಳೆದ ತಿಂಗಳಿನಿಂದಲೇ ಸಾಕಷ್ಟು ಕ್ರೇಜ್​ ಕ್ರಿಯೇಟ್​ ಮಾಡಿದೆ. ಚಿತ್ರತಂಡಕ್ಕೂ ಮುನ್ನವೇ ಅಭಿಮಾನಿಗಳೇ ಸಿನಿಮಾ ಪ್ರಚಾರ ಪ್ರಾರಂಭಿಸಿದ್ದಾರೆ. ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆ, ಕುತೂಹಲ ಇಟ್ಟುಕೊಂಡಿದ್ದಾರೆ. ಟೀಸರ್​​, ಟ್ರೇಲರ್​​​ ಮೇಲಿನ ಕಾತರಕ್ಕೆ ಸೋಷಿಯಲ್​ ಮಿಡಿಯಾ ಪೋಸ್ಟ್​​ಗಳು ಸಾಕ್ಷಿಯಾಗಿವೆ.

ಪಠಾಣ್ ಮತ್ತು ಜವಾನ್ ಸಿನಿಮಾಗಳ ಅಭೂತಪೂರ್ವ ಯಶಸ್ಸಿನ ನಂತರ ಬರುತ್ತಿರುವ ಶಾರುಖ್ ಖಾನ್ ಅವರ 2023ರ ಮೂರನೇ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ 'ಡಂಕಿ' ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

'ಡಂಕಿ'ಯು 'ಡಾಂಕಿ ಫ್ಲೈಟ್' ಎಂದು ಕರೆಯಲ್ಪಡುವ ವಿಶಿಷ್ಟ ಮತ್ತು ಕುತೂಹಲಕಾರಿ ಪರಿಕಲ್ಪನೆಯ ಸುತ್ತ ಸುತ್ತುತ್ತದೆ. ಇದು ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ದೇಶಗಳಿಗೆ ಕಾನೂನುಬಾಹಿರವಾಗಿ ಪ್ರವೇಶಿಸುವ ಕಥೆ ಹೊಂದಿದೆ. ಈ ರಾಷ್ಟ್ರಗಳನ್ನು ಪ್ರವೇಶಿಸಲು ಅಪಾಯಕಾರಿ, ಕಾನೂನುಬಾಹಿರ ಮಾರ್ಗವನ್ನು ಆರಿಸಿಕೊಳ್ಳುವ ಭಾರತೀಯ ಪ್ರಜೆಗಳ ಜೀವನ ಮತ್ತು ನಂತರ ಸ್ವದೇಶಕ್ಕೆ ಮರಳಲು ಅವರು ನಡೆಸುವ ಹೋರಾಟಗಳನ್ನು ತೋರಿಸಲಿದೆ. ಶಾರುಖ್​ ಖಾನ್​ ಮನರಂಜನೆ ನೀಡುವ ಜೊತೆಗೆ ಜಾಗತಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ. ಪಠಾಣ್​ ಮತ್ತು ಜವಾನ್​ನಲ್ಲಿ ಸಂಪೂರ್ಣ ಆ್ಯಕ್ಷನ್​ ಅವತಾರದಲ್ಲಿ ಕಾಣಿಸಿಕೊಂಡಿರುವ ಎಸ್​ಆರ್​ಕೆ, ಡಂಕಿಯಲ್ಲಿ ಕಾಮಿಡಿ ದೃಶ್ಯಗಳ ಮೂಲಕ ಎಂಟರ್​ಟೈನ್​ಮೆಂಟ್ ಕೊಡಲಿದ್ದಾರೆ. ​​

ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ ಶಾರುಖ್​ ಖಾನ್! ಮಧ್ಯರಾತ್ರಿ ಮನೆ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ-ವಿಡಿಯೋ

ಚಿತ್ರದಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಕ್ಕಿ ಕೌಶಲ್​​​ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಸೂಪರ್​ ಹಿಟ್ ಸಿನಿಮಾ 'ಸಂಜು' ನಂತರ ಐದು ವರ್ಷಗಳ ಬ್ರೇಕ್​ ಪಡೆದು ನಿರ್ದೇಶಕರ ಕುರ್ಚಿಗೆ ಮರಳಿದ್ದಾರೆ. ಅವರ ದಾಖಲೆಗಳನ್ನು ಗಮನಿಸಿದರೆ, ಮತ್ತೊಂದು ಯಶಸ್ವಿ ಸಿನಿಮಾ ಗ್ಯಾರಂಟಿ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಪಠಾಣ್ ಮತ್ತು ಜವಾನ್ ಯಶಸ್ಸಿನಲೆಯಲ್ಲಿರುವ ಶಾರುಖ್ ಖಾನ್ ಅವರೊಂದಿಗೆ ಯಶಸ್ವಿ ನಿರ್ದೇಶಕ ರಾಜ್​ಕುಮಾರ್​​ ಹಿರಾನಿ ಸಹಕರಿಸಿರುವುದು, ಬ್ಲಾಕ್​​ಬಸ್ಟರ್ ಸಿನಿಮಾದ ಮುನ್ಸೂಚನೆಯಾಗಿದೆ.

ಇದನ್ನೂ ಓದಿ: ಇಟಲಿಯಲ್ಲಿ ಹಸೆಮಣೆ ಏರಿದ ವರುಣ್ ತೇಜ್-ಲಾವಣ್ಯ ತ್ರಿಪಾಠಿ: ಫೋಟೋ, ವಿಡಿಯೋ ವೈರಲ್​

ಡಂಕಿ ಡಿಸೆಂಬರ್‌ 22ರಂದು ತೆರೆಗೆ ಬರಲಿದೆ. ಆದಾಗ್ಯೂ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ, ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸಲಾರ್‌ ಕೂಡ ಅಂದೇ ತೆರೆಕಾಣಲಿದ್ದು, ಭರ್ಜರಿ ಬಾಕ್ಸ್​ ಆಫಿಸ್​​​ ಪೈಪೋಟಿ ನಡೆಯುವುದಂತೂ ಪಕ್ಕಾ. ಡಂಕಿ ಮತ್ತು ಸಲಾರ್ ಎರಡೂ ಕೂಡ 2023ರ ಬಹುನಿರೀಕ್ಷಿತ ಚಿತ್ರಗಳು.

Last Updated : Nov 2, 2023, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.