ETV Bharat / entertainment

ಶಾರುಖ್​ ಖಾನ್ ಸಿನಿಮಾ ದಾಖಲೆ: ಬಿಡುಗಡೆಗೂ ಮುನ್ನ 480 ಕೋಟಿ ರೂ. ವ್ಯವಹಾರ ನಡೆಸಿದ ಜವಾನ್, ಡಂಕಿ! - ಶಾರುಖ್ ಖಾನ್ ಲೇಟೆಸ್ಟ್ ನ್ಯೂಸ್

ಶಾರುಖ್ ಖಾನ್ ನಟನೆಯ ಡಂಕಿ ಮತ್ತು ಜವಾನ್​ ಸಿನಿಮಾ ಬಿಡುಗಡೆಗೂ ಮುನ್ನ ಉತ್ತಮ ವ್ಯವಹಾರ ನಡೆಸಿದೆ.

Dunki and Jawan movie
ಜವಾನ್, ಡಂಕಿ ನಾನ್ ಥಿಯೇಟ್ರಿಕಲ್ ಹಕ್ಕುಗಳು
author img

By

Published : Jul 5, 2023, 6:23 PM IST

ನಾಲ್ಕು ವರ್ಷಗಳ ಬ್ರೇಕ್ ಬಳಿಕ ಪಠಾಣ್ ಚಿತ್ರದೊಂದಿಗೆ ಕಮ್​ ಬ್ಯಾಕ್​ ಮಾಡಿದ ಬಾಲಿವುಡ್​ ಕಿಂಗ್​​ ಶಾರುಖ್​ ಖಾನ್ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.​​ ಜವಾನ್ ಮತ್ತು ಡಂಕಿ ಸೂಪರ್​ ಸ್ಟಾರ್ ಶಾರುಖ್​ ನಟನೆಯ ಬಹುನಿರೀಕ್ಷಿತ ಸಿನಿಮಾಗಳು. ಶಾರುಖ್ ಖಾನ್ ಮುಖ್ಯಭೂಮಿಕೆಯ ಈ ಎರಡೂ ಸಿನಿಮಾಗಳು ಇದೇ ಸಾಲಿನಲ್ಲಿ ಬಿಡುಗಡೆ ಆಗಲಿವೆ.

ಜವಾನ್ ಚಿತ್ರವನ್ನು ದಕ್ಷಿಣದ ಸ್ಟಾರ್ ಡೈರೆಕ್ಟರ್ ಅಟ್ಲೀ ಕುಮಾರ್ ನಿರ್ದೇಶಿಸಿದ್ದರೆ, ಡಂಕಿ ಸಿನಿಮಾನ್ನು ಮುನ್ನಾಭಾಯ್ ಎಂಬಿಬಿಎಸ್ ಮತ್ತು ಪಿಕೆಯಂತಹ ಸೂಪರ್‌ಹಿಟ್ ಚಿತ್ರಗಳ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ನಿರ್ದೇಶಿಸಿದ್ದಾರೆ. ಈ ಎರಡೂ ಸಿನಿಮಾಗಳು ಸಖತ್​ ಸುದ್ದಿಯಲ್ಲಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಸಾಕಷ್ಟು ಚರ್ಚೆಯಲ್ಲಿರುವ ಈ ಸಿನಿಮಾಗಳು ಬಿಡುಗಡೆಗೂ ಮುನ್ನ ಭರ್ಜರಿ ವ್ಯವಹಾರ ನಡೆಸಿವೆ ಎನ್ನುವ ಮಾಹಿತಿ ಇದೆ. ಜವಾನ್ ಮತ್ತು ಡಂಕಿ ಚಿತ್ರದ ನಾನ್ ಥಿಯೇಟ್ರಿಕಲ್ ರೈಟ್ಸ್ 450 ಕೋಟಿ ರೂ.ಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದು, ಇಡೀ ಬಿ ಟೌನ್​ನಲ್ಲಿ ಸದ್ದು ಮಾಡುತ್ತಿದೆ.

480 ಕೋಟಿ ರೂ.ಗಳ ವ್ಯವಹಾರ: ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಮುಂಬರುವ ಚಿತ್ರಗಳಾದ 'ಜವಾನ್' ಮತ್ತು 'ಡಂಕಿ' ಎರಡರ ನಾನ್ ಥಿಯೇಟ್ರಿಕಲ್ ಹಕ್ಕುಗಳು 480 ಕೋಟಿ ರೂ.ಗೆ ಮಾರಾಟವಾಗಿವೆ. ಜವಾನ್ ಚಿತ್ರದ ಸ್ಯಾಟಲೈಟ್, ಡಿಜಿಟಲ್ ಮತ್ತು ಮ್ಯೂಸಿಕ್ ರೈಟ್ಸ್ 250 ಕೋಟಿ ರೂಪಾಯಿಗೆ ಒಪ್ಪಂದವಾಗಿದೆ ಎಂದು ಹೇಳಲಾಗುತ್ತಿದೆ. ಇತ್ತ ಡಂಕಿ ಚಿತ್ರದ ಹಕ್ಕು 230 ಕೋಟಿ ರೂ.ಗೆ ಮಾರಾಟವಾಗಿದೆ ಎಂಬ ಮಾಹಿತಿ ಇದೆ.

ಜವಾನ್​​ ಪ್ಯಾನ್​​ ಇಂಡಿಯಾ ಸಿನಿಮಾ. ಹಿಂದಿ ಸಿನಿಮಾ 'ಡಂಕಿ'ಯ ಹಕ್ಕುಗಳು ಸಹ ಭರ್ಜರಿ ಮೊತ್ತಕ್ಕೆ ಮಾರಾಟ ಆಗಿವೆ. ಚಿತ್ರ ಬಿಡುಗಡೆಗೂ ಮುನ್ನವೇ ಶಾರುಖ್ ಖಾನ್ ಜೇಬು ತುಂಬಿದೆ ಎನ್ನಲಾಗುತ್ತಿದೆ. ಈ ಎರಡೂ ಚಿತ್ರಗಳು ಶಾರುಖ್ ಅವರ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ: ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಬಿಡುಗಡೆಗೆ ಸಜ್ಜು: ರಣ್​ವೀರ್​ ಸಿಂಗ್​ ಹಿಟ್​ ಸಿನಿಮಾಗಳ್ಯಾವುವು ಗೊತ್ತಾ?

ನಿರ್ದೇಶಕ ಅಟ್ಲೀ ಕುಮಾರ್ ಆ್ಯಕ್ಷನ್​ ಕಟ್​ ಹೇಳಿರುವ ಜವಾನ್ ಚಿತ್ರ ಸೆಪ್ಟೆಂಬರ್ 7 ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಜವಾನ್ ಚಿತ್ರದಲ್ಲಿ ಸಂಜಯ್ ದತ್, ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಂಕಿ ಸಿನಿಮಾ ಈ ವರ್ಷದ ಕ್ರಿಸ್ಮಸ್ ಸಂದರ್ಭದಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ತಾಪ್ಸಿ ಪನ್ನು ಶಾರುಖ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ವಿಕ್ಕಿ ಕೌಶಲ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಮಾಹಿತಿ ಇದೆ.

ಇದನ್ನೂ ಓದಿ: 'ಭೇಟಿಯಾಗೋಣ, ಬನ್ನಿ..': ಫ್ಯಾನ್ಸ್‌ ಜೊತೆ ರಿಷಬ್​ ಶೆಟ್ಟಿ ಜನ್ಮದಿನಾಚರಣೆ! ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.