ETV Bharat / entertainment

ವಿದೇಶಗಳಲ್ಲಿ 'ಡಂಕಿ' ಅಡ್ವಾನ್ಸ್ ಬುಕ್ಕಿಂಗ್​ ಓಪನ್​; ಭಾರತದಲ್ಲಿ ಯಾವಾಗ? ಇಲ್ಲಿದೆ ಮಾಹಿತಿ - ಈಟಿವಿ ಭಾರತ ಕನ್ನಡ

Dunki advance booking details: ಶಾರುಖ್​ ಖಾನ್​ ನಟನೆಯ 'ಡಂಕಿ' ಚಿತ್ರದ ಅಡ್ವಾನ್ಸ್​ ಬುಕ್ಕಿಂಗ್ ವಿದೇಶಗಳಲ್ಲಿ ಇಂದಿನಿಂದ​ ಆರಂಭವಾಗಿದೆ. ಭಾರತದಲ್ಲಿ ಯಾವಾಗ ಗೊತ್ತೇ?

Dunki advance booking open in overseas
ವಿದೇಶಗಳಲ್ಲಿ 'ಡಂಕಿ' ಅಡ್ವಾನ್ಸ್ ಬುಕ್ಕಿಂಗ್​ ಓಪನ್​; ಭಾರತದಲ್ಲಿ ಯಾವಾಗ? ಇಲ್ಲಿದೆ ಮಾಹಿತಿ..
author img

By ETV Bharat Karnataka Team

Published : Dec 7, 2023, 9:06 PM IST

ಬಾಲಿವುಡ್​ ನಟ​ ಶಾರುಖ್​ ಖಾನ್​ ಅವರ ಮುಂಬರುವ ಚಿತ್ರ 'ಡಂಕಿ' ಡಿಸೆಂಬರ್​ 21ರಂದು ತೆರೆ ಕಾಣಲಿದೆ. 2023ರಲ್ಲಿ ಎರಡು ಬ್ಲಾಕ್​​ ಬಸ್ಟರ್ ಸಿನಿಮಾಗಳನ್ನು ನೀಡಿರುವ ಎಸ್​ಆರ್​ಕೆ ತಮ್ಮ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಡಂಕಿ ಮೂಲಕ ಮತ್ತೊಂದು ಹಿಟ್​ ಪಡೆಯುವುದರ ಜೊತೆಗೆ ಹೊಸ ದಾಖಲೆ ನಿರ್ಮಿಸಲು ಅವರು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಸಿನಿಪ್ರೇಮಿಗಳ ಉತ್ಸಾಹ ಹೆಚ್ಚಿಸಿದೆ.

ಚಿತ್ರನಿರ್ಮಾಣ ಸಂಸ್ಥೆ ಯಶ್​ ರಾಜ್​ ಫಿಲಂಸ್​ 'ಡಂಕಿ' ಮುಂಗಡ ಬುಕ್ಕಿಂಗ್​ಗೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ವಿದೇಶಗಳಲ್ಲಿ ಅಡ್ವಾನ್ಸ್​ ಬುಕ್ಕಿಂಗ್ ಇಂದಿನಿಂದ​ ಆರಂಭವಾಗಿದೆ ಎಂದು ತಿಳಿಸಿದೆ. ವರದಿಗಳ ಪ್ರಕಾರ, ಭಾರತದಲ್ಲಿ ಡಿಸೆಂಬರ್​ 14ರಂದು ಮುಂಗಡ ಟಿಕೆಟ್​ ಬುಕ್ಕಿಂಗ್​ ತೆರೆಯಬಹುದು ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಡಿಸೆಂಬರ್​ 22ರಂದು ಬಿಡುಗಡೆಯಾಗಲಿದ್ದ 'ಡಂಕಿ' ಒಂದು ದಿನ ಮುಂಚಿತವಾಗಿ ಅಂದರೆ, ಡಿಸೆಂಬರ್​ 21ರಂದು ತೆರೆ ಕಾಣುತ್ತಿರುವುದು ವಿಶೇಷ.

ಈವರೆಗೆ ಬಿಡುಗಡೆಯಾದ ಎಲ್ಲಾ ಪೋಸ್ಟರ್​ಗಳಲ್ಲಿ ಹಾಗೂ ಚಿತ್ರತಂಡ ನೀಡಿರುವ ಮಾಹಿತಿಗಳಲ್ಲಿ ಬಿಡುಗಡೆ ದಿನಾಂಕವನ್ನು ಡಿಸೆಂಬರ್​ 22 ಎಂದೇ ನಮೂದಿಸಲಾಗಿತ್ತು. ಆದರೆ, ಅದೇ ದಿನದಂದು ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಮತ್ತು ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ 'ಸಲಾರ್​' ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಇದೀಗ ಯಾವುದೇ ಘೋಷಣೆ ಇಲ್ಲದೇ, ಸೈಲೆಂಟಾಗಿಯೇ ನಿರ್ಧರಿತ ಬಿಡುಗಡೆ ದಿನಾಂಕಕ್ಕಿಂತ ಒಂದು ದಿನ ಮೊದಲೇ 'ಡಂಕಿ' ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ ಎನ್ನಲಾಗಿದೆ.

ಡಂಕಿ ಟ್ರೇಲರ್​: ಸಿನಿಮಾದ ಟೀಸರ್​, ಹಾಡುಗಳು ಅನಾವರಣಗೊಳಿಸಿ ಚಿತ್ರತಂಡ ಪ್ರೇಕ್ಷಕರ ಉತ್ಸಾಹ ಹೆಚ್ಚಿಸಿತ್ತು. ಇತ್ತೀಚೆಗೆ ಈ ಕಾಮಿಡಿ ಡ್ರಾಮಾದ ಟ್ರೇಲರ್ ಅನಾವರಣಗೊಳಿಸಿ ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದೆ. ವಿದೇಶಕ್ಕೆ ಹೋಗಲು ಇಚ್ಛಿಸುವವರ, ಭಾಷಾ ಸಮಸ್ಯೆ ಎದುರಿಸುವವರ, ಅಲ್ಲಿ ಸಿಲುಕಿಕೊಳ್ಳುವವರ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. ಪಠಾಣ್​​ ಮತ್ತು ಜವಾನ್​ ಮೂಲಕ ಆ್ಯಕ್ಷನ್​​​ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದ ಶಾರುಖ್​​ ಖಾನ್​​ ಈ ಚಿತ್ರದಲ್ಲಿ ನಿಮ್ಮ ಹೊಟ್ಟೆ ಹುಣ್ಣಾಗಿಸುವಷ್ಟು ನಗುವಿನ ಮನರಂಜನೆ ಕೊಡಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಯುವ ಮತ್ತು ವಯಸ್ಸಾದ ಪಾತ್ರದಲ್ಲಿ ಎಸ್​ಆರ್​ಕೆ ಕಾಣಿಸಿಕೊಳ್ಳಲಿದ್ದಾರೆ.

ರಾಜ್​ಕುಮಾರ್​ ಹಿರಾನಿ ನಿರ್ದೇಶನದ ಡಂಕಿ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ, ಅನಿಲ್ ಗ್ರೋವರ್, ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೋಮನ್ ಇರಾನಿ ಮತ್ತು ವಿಕ್ರಮ್ ಕೊಚ್ಚಾರ್ ಕೂಡ ನಟಿಸಿದ್ದಾರೆ. ಕನಿಕಾ ಧಿಲ್ಲೋನ್, ರಾಜ್​​ಕುಮಾರ್​ ಹಿರಾನಿ ಮತ್ತು ಅಭಿಜಿತ್ ಜೋಶಿ ಸೇರಿ ಬರೆದಿದ್ದಾರೆ. ಸಿನಿಮಾ ತಮ್ಮ ತಾಯ್ನಾಡಾದ ಭಾರತಕ್ಕೆ ಮರಳಲು ಬಯಸುವ ಜನರ ಗುಂಪಿನ ಕುರಿತಾಗಿದೆ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಿಂದ ಡಂಕಿ ನಿರ್ಮಾಣಗೊಂಡಿದೆ.​

ಇದನ್ನೂ ಓದಿ: ಡಂಕಿ ಸಿನಿಮಾದ ಫಸ್ಟ್ ಸಾಂಗ್​ ರಿಲೀಸ್: ಆ್ಯಕ್ಷನ್​ ಅವತಾರದಿಂದ ಹೊರಬಂದ ಶಾರುಖ್​ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.