ETV Bharat / entertainment

ದುಲ್ಕರ್‌ ಸಲ್ಮಾನ್‌ ನಟನೆಯ 'ಕಿಂಗ್​ ಆಫ್​ ಕೋಥಾ' ರಿಲೀಸ್​: ಪ್ರೇಕ್ಷಕರು ಹೇಳಿದ್ದೇನು? - ಕಿಂಗ್​ ಆಫ್​ ಕೋಥಾ ಲೇಟೆಸ್ಟ್ ನ್ಯೂಸ್

Dulquer Salmaan starrer King of Kotha: 'ಕಿಂಗ್​ ಆಫ್​ ಕೋಥಾ' ಸಿನಿಮಾ ಇಂದು ತೆರೆಕಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದಕ್ಕಿಸಿಕೊಂಡಿದೆ.

King Of Kotha
ಕಿಂಗ್​ ಆಫ್​ ಕೋಥಾ
author img

By ETV Bharat Karnataka Team

Published : Aug 24, 2023, 5:34 PM IST

ಅಭಿಮಾನಿಗಳ ಕಾಯುವಿಕೆ ಮುಗಿದಿದೆ. ಸೌತ್​ ಸೂಪರ್​ ಸ್ಟಾರ್​ ದುಲ್ಕರ್​ ಸಲ್ಮಾನ್​​ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕಿಂಗ್​ ಆಫ್​ ಕೋಥಾ' ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಪ್ರಿಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಿಂಗ್​ ಆಫ್​ ಕೋಥಾ ವೀಕ್ಷಿಸಿದ ಸಿನಿಮಂದಿ ಆ್ಯಕ್ಷನ್​ ಎಂಟರ್​ಟೈನ್​ಮೆಂಟ್​ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣ Xನಲ್ಲಿ (ಹಿಂದಿನ ಟ್ವಿಟರ್) ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಕಿಂಗ್​ ಆಫ್​ ಕೋಥಾ' ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ಬೆಳಗ್ಗೆ 7 ಗಂಟೆಗೆ ಆರಂಭವಾಯಿತು. ದುಲ್ಕರ್​ ಸಲ್ಮಾನ್​ ಅವರ ಕಂಪ್ಲೀಟ್​ ಮಾಸ್ ಎಂಟರ್​ಟೈನ್​​ಮೆಂಟ್​ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬಿದ್ದರು. ದುಬೈನಲ್ಲಿ ಪ್ರೀಮಿಯರ್​ ಶೋ ಬಳಿಕ ಇಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶ ಸಾಧಿಸಿದೆ. ಚಿತ್ರದ ಕುರಿತ ಪ್ರಥಮ ಪ್ರಕ್ರಿಯೆಗಳನ್ನು ಗಮನಿಸಿದರೆ ಸೌತ್​ನ ಮತ್ತೊಂದು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುವ ಸಾಧ್ಯತೆಗಳು ದಟ್ಟವಾಗಿವೆ. ಆದ್ರೆ ನಾಳೆ ಬೆಳಗ್ಗೆ ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ ಬರುವವರೆಗೂ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಈಗಾಗಲೇ ಸಿನಿಮಾ ವೀಕ್ಷಿಸಿರುವ ಪ್ರೇಕ್ಷಕರು ಚಿತ್ರಕಥೆ ಮತ್ತು ನಟನೆ ಮೆಚ್ಚಿ ಕೊಂಡಾಡುತ್ತಿದ್ದಾರೆ. ಕಿಂಗ್​​ ಆಫ್​ ಕೋಥಾ ವಿಶುವಲ್ಸ್ ಚಿತ್ರದ ಹೈಲೆಟ್ಸ್​ ಎಂದು ಬಹುತೇಕರು ಉಲ್ಲೇಖಿಸಿದ್ದಾರೆ. ಚಿತ್ರ ಸಂಗೀತ, ಹಿನ್ನೆಲೆ ಸಂಗೀತ ಅತ್ಯುತ್ತಮ ರಂಗಭೂಮಿ ಅನುಭವ ಕೊಟ್ಟಿದೆ ಎಂದು ಹಲವು ಪ್ರೇಕ್ಷಕರು ತಿಳಿಸಿದ್ದಾರೆ.

ಕಿಂಗ್​​ ಆಫ್​ ಕೋಥಾ ವೀಕ್ಷಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಒಂದೊಳ್ಳೆ ಗ್ಯಾಂಗ್​ಸ್ಟರ್ ಮೂವಿ' ಎಂದು ಬರೆದಿದ್ದಾರೆ. ಇತರೆ ನಟರೊಂದಿಗೆ ದುಲ್ಕರ್​ ಸಲ್ಮಾನ್​​ ಶೈನ್​ ಆಗಿದ್ದು, ಇಡೀ ಚಿತ್ರತಂಡ ಸಿನಿಮಾದ ಅಂದ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ. ಆ್ಯಕ್ಷನ್​ ಸೀನ್ಸ್​, ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ಕೊಟ್ಟು ಪ್ರಶಂಸಿಸಿದ್ದಾರೆ.

ಮತ್ತೋರ್ವ ಸಿನಿಪ್ರಿಯರು ಕೂಡ ತಮ್ಮ ವಿಮರ್ಷೆ ಹಂಚಿಕೊಂಡಿದ್ದಾರೆ. ''ಕಿಂಗ್​ ಆಫ್​ ಕೋಥಾ ವೀಕ್ಷಿಸಿದ ಬಳಿಕ ನಾವು ಗೆದ್ದೆವು ಎಂಬ ಭಾವನೆ ಮೂಡಿದೆ. ಇನ್ನು ದ್ವೇಷಿಗರು ಏನನ್ನೂ ಮಾಡಲು ಸಾಧ್ಯವಿಲ್ಲ. ಮಾಲಿವುಡ್​ನಲ್ಲಿ ಹಿಂದೆಂದೂ ನೋಡಿರದಂತಹ ಸಿನಿಮಾ. ಎಲ್ಲಾ ಮಾಲಿವುಡ್​ ರೆಕಾರ್ಡ್​ಗಳು ಈ ವಾರಾಂತ್ಯ ಬ್ರೇಕ್​ ಆಗಲಿದೆ. ಇದು ಸ್ಮ್ಯಾಶ್​ ಟೈಮ್''​ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವು ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಅನಿರುದ್ಧ್‌ ಜತ್ಕರ್ ಭರ್ಜರಿ ಅಡುಗೆ.. 'Chef ಚಿದಂಬರ'ನಿಗೆ ಅನುಭವಿ Chefಗಳಿಂದ ತರಬೇತಿ

ಅಭಿಲಾಶ್​ ಜೋಶಿ ನಿರ್ದೇಶನದ ಸಿನಿಮಾದಲ್ಲಿ ಡ್ಯಾನ್ಸಿಂಗ್​ ರೋಸ್​, ಪ್ರಸನ್ನ, ಐಶ್ವರ್ಯಾ ಲಕ್ಷ್ಮಿ, ನೈಲಾ ಉಷಾ, ಚೆಂಬನ್​ ವಿನೋದ್, ಗೋಕುಲ್​ ಸುರೇಶ್​, ಶಮ್ಮಿ ತಿಲಕನ್​, ಶಾಂತಿ ಕೃಷ್ಣ, ವಡ ಚಯನ್ನೈ ಶರಣ್​​, ಅನಿಕಾ ಸುರೇಂದ್ರನ್​​ ಸೇರಿ ಹಲವರು ನಟಿಸಿದ್ದಾರೆ. ದುಲ್ಕರ್​ ಸಲ್ಮಾನ್ ಅವರ ಬ್ಯಾನರ್​​ ವೇಫೇರರ್ ಫಿಲ್ಮ್ಸ್ ನಿರ್ಮಾಣ ಮಾಡಿದೆ.

ಇದನ್ನೂ ಓದಿ: ರಾಜಮೌಳಿ - ಮಹೇಶ್​ ಬಾಬು ಕಾಂಬೋದ ಮುಂದಿನ ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್ಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.