ETV Bharat / entertainment

ದೃಶ್ಯಂ 2 ಸಿನಿಮಾ: ನಟ ಅಕ್ಷಯ್ ಖನ್ನಾ ಫಸ್ಟ್ ಲುಕ್​ ರಿಲೀಸ್ - Akshaye Khanna in Drishyam 2

ದೃಶ್ಯಂ 2 ಸಿನಿಮಾ ತಂಡ ಇಂದು ನಟ ಅಕ್ಷಯ್ ಖನ್ನಾ ಫಸ್ಟ್ ಲುಕ್​ ಅನಾವರಣಗೊಳಿಸಿದೆ.

Akshaye Khanna first look
ನಟ ಅಕ್ಷಯ್ ಖನ್ನಾ ಫಸ್ಟ್ ಲುಕ್​ ರಿಲೀಸ್
author img

By

Published : Oct 13, 2022, 5:28 PM IST

ಬಾಲಿವುಡ್‌ ನಟರಾದ ಅಜಯ್ ದೇವಗನ್, ಅಕ್ಷಯ್ ಖನ್ನಾ ಮತ್ತು ನಟಿ ಟಬು ಮತ್ತು ಸೌತ್ ಸುಂದರಿ ಶ್ರಿಯಾ ಶರಣ್ ಅಭಿನಯದ ದೃಶ್ಯಂ 2 ಸಿನಿಮಾ ನವೆಂಬರ್ 18ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಚಿತ್ರದ ಮೇಲೆ ಕುತೂಹಲ ಹೆಚ್ಚಿದೆ. ಇಂದು ನಟ ಅಕ್ಷಯ್ ಖನ್ನಾ ಫಸ್ಟ್ ಲುಕ್​ ಅನ್ನು ಅನಾವರಣಗೊಳಿಸಲಾಗಿದೆ.

ನಟ ಅಕ್ಷಯ್ ಖನ್ನಾ ಚೆಸ್ ಬೋರ್ಡ್‌ ಎದುರು ತನ್ನ ಮುಂದಿನ ನಡೆಯನ್ನು ಯೋಜಿಸುವ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್ 18ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ ಈ ದೃಶ್ಯಂ 2 ಸಿನಿಮಾ ಅಭಿಷೇಕ್ ಪಾಠಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

ದೃಶ್ಯಂ 2 ಸಿನಿಮಾ 2015ರಲ್ಲಿ ತೆರೆಕಂಡ ಮಲಯಾಳಂನ ಕ್ರೈಂ ಥ್ರಿಲ್ಲರ್ ಆಗಿದೆ. ಇದು ದೃಶ್ಯಂ ಒಂದರ ಮುಂದುವರಿದ ಭಾಗ. ಮಲಯಾಳಂನ ಜನಪ್ರಿಯ ನಟ ಮೋಹನ್‌ಲಾಲ್​ ಅಭಿನಯದಲ್ಲಿ ಮೊದಲ ಬಾರಿಗೆ ಈ ಸಿನಿಮಾ ಚಿತ್ರ ನಿರ್ಮಾಣವಾಗಿತ್ತು. ನಂತರ ತೆಲುಗು, ಕನ್ನಡ, ಹಿಂದಿಯಲ್ಲಿ ರಿಮೇಕ್​ ಮಾಡಲಾಗಿದೆ. ಆದರೆ, ಮಲಯಾಳಂನಲ್ಲಿದ್ದ ಹೆಸರನ್ನೇ ಎಲ್ಲ ಭಾಷೆಗಳಲ್ಲೂ ಇಡಲಾಗಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಪೂಜಾ ಹೆಗ್ಡೆ.. ಶೂಟಿಂಗ್​ ಸೆಟ್​ನಲ್ಲಿ ಸಲ್ಮಾನ್​ ಜೊತೆ ಕೇಕ್ ಕತ್ತರಿಸಿದ ಕನ್ನಡತಿ

ಹಿಂದಿ ದೃಶ್ಯಂ 2 ಚಿತ್ರವನ್ನು ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್, ಕ್ರಿಶನ್ ಕುಮಾರ್ ನಿರ್ಮಿಸಿದ್ದು, ಸಂಜೀವ್ ಜೋಶಿ, ಆದಿತ್ಯ ಚೌಕ್ಸೆ ಮತ್ತು ಶಿವ ಚನಾನ ಸಹ ನಿರ್ಮಾಣ ಮಾಡಿದ್ದಾರೆ. ವಯಾಕಾಮ್ 18 ಸ್ಟುಡಿಯೋಸ್, ಟಿ - ಸೀರಿಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸಲಿವೆ.

ಹಿಂದಿ ಭಾಷೆಯ ದೃಶ್ಯಂ ಮೊದಲ ಭಾಗವನ್ನು ನಿರ್ಮಾಪಕ ದಿವಂಗತ ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದರು. ರಾಕ್‌ಸ್ಟಾರ್ ಡಿಎಸ್‌ಪಿ (ದೇವಿ ಶ್ರೀ ಪ್ರಸಾದ್) ಸಂಗೀತ ಚಿತ್ರಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.