ETV Bharat / entertainment

'ಸಲ್ಮಾನ್​ ಖಾನ್​ ಸಿನಿಮಾಗಳ ಸೆಟ್​ನಲ್ಲಿ ನಟಿಯರು ಮೈಮುಚ್ಚುವಂತಹ ಬಟ್ಟೆ ತೊಡಬೇಕು' - ಸಲ್ಮಾನ್​ ಖಾನ್​ ಸಿನಿಮಾ

ನಟ ಸಲ್ಮಾನ್​ ಖಾನ್ ಶೂಟಿಂಗ್​ ಸೆಟ್​ನಲ್ಲಿ ನಟಿಯರಿಗೆ ಡ್ರೆಸ್​ ಕೋಡ್​ ಇದೆ.

palak tiwari on salman khan
ನಟಿಯರಿಗೆ ಸಲ್ಮಾನ್​ ಖಾನ್​ ನಿಯಮಗಳು
author img

By

Published : Apr 13, 2023, 7:53 PM IST

ಪಲಕ್ ತಿವಾರಿ ಅಭಿನಯದ ಚೊಚ್ಚಲ ಹಿಂದಿ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'​ ತೆರೆಕಾಣಲು ಸಜ್ಜಾಗಿದೆ. ಇದೇ ಏಪ್ರಿಲ್​​ 21ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಅಗಲಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಚಾರದಲ್ಲಿ ತೊಡಗಿದೆ. ನಟಿ ಪಲಕ್ ತಿವಾರಿ ಕೂಡ ಸಂದರ್ಶನಗಳನ್ನು ಕೊಡುತ್ತಿದ್ದು, ನಟ ಸಲ್ಮಾನ್​ ಖಾನ್​ ಬಗ್ಗೆ ಕೆಲ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

2021ರಲ್ಲಿ ತೆರೆಕಂಡ ಅಂತಿಮ್​ ದಿ ಫೈನಲ್​ ಟ್ರುತ್ ಚಿತ್ರಕ್ಕೆ ಪಲಕ್ ತಿವಾರಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆಯುಶ್​ ಶರ್ಮಾ ಅಭಿನಯದ ಈ ಚಿತ್ರದಲ್ಲಿ ನಟ ಸಲ್ಮಾನ್​ ಖಾನ್​ ಕೂಡ ನಟಿಸಿ, ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ಸಲ್ಮಾನ್​ ಅವರು ಕೆಲ ನಿಮಯಗಳನ್ನು ಜಾರಿಗೆ ತಂದಿದ್ದರು ಎಂದು ಪಲಕ್ ತಿವಾರಿ ತಿಳಿಸಿದ್ದಾರೆ.

2021ರ ಹಾರ್ಡಿ ಸಂಧು ಅವರ ಬಿಜ್ಲೀ ಬಿಜ್ಲಿ ಮ್ಯೂಸಿಕ್ ವಿಡಿಯೋದಲ್ಲಿ ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಲಕ್ ತಿವಾರಿ ಕಾಣಿಸಿಕೊಂಡಿದ್ದರು. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಅವರ ಬಾಲಿವುಡ್ ಚೊಚ್ಚಲ ಚಿತ್ರ. ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್ ಮತ್ತು ರಾಘವ್ ಜುಯಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ತಮ್ಮ ಸೆಟ್‌ನಲ್ಲಿ ಮಹಿಳೆಯರು ಹೇಗೆ ಡ್ರೆಸ್ ಮಾಡಬೇಕು ಎಂಬ ನಿಯಮವನ್ನು ತಂದಿದ್ದರು ಎಂದು ಪಲಕ್ ತಿವಾರಿ ತಿಳಿಸಿದ್ದಾರೆ

'ಹಲವರಿಗೆ ಈ ವಿಷಯದ ಬಗ್ಗೆ ತಿಳಿದಿರಕ್ಕಿಲ್ಲ. ಸಲ್ಮಾನ್ ಸರ್ ಅವರ 'ಅಂತಿಮ್​ ದಿ ಫೈನಲ್​ ಟ್ರುತ್' ಸೆಟ್‌ನಲ್ಲಿ ಪ್ರತೀ ಹುಡುಗಿಯರು ನೆಕ್‌ಲೈನ್ ಇರುವ ಡ್ರೆಸ್​​ ಧರಿಸಬೇಕೆಂಬ ನಿಯಮ ತಂದಿದ್ದರು. ಎಲ್ಲ ಹುಡುಗಿಯರು ಮೈ ಮುಚ್ಚುವಂತಹ ಬಟ್ಟೆ ತೊಡಬೇಕು. ನಾನು ಸರಿಯಾದ ಬಟ್ಟೆ ಧರಿಸುತ್ತಿದ್ದರಿಂದ ನನ್ನ ತಾಯಿ ಕೂಡ ಆಶ್ಚರ್ಯದ ಜೊತೆಗೆ ಸಮಾಧಾನಗೊಂಡರು. ಒಮ್ಮೆ ನನ್ನ ತಾಯಿ, ನೀವು ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಆಶ್ಚರ್ಯದಿಂದ ಕೇಳಿದ್ದರು. ಇಷ್ಟು ಸುಂದರವಾಗಿ ಹೇಗೆ ರೆಡಿ ಆದ್ರಿ? ಎಂದು ಕೇಳಿದ್ದರು. ಸಲ್ಮಾನ್ ಸರ್ ಸೆಟ್​ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದೆ. ಅದಕ್ಕೆ "ವಾವ್, ಅತ್ಯುತ್ತಮ" ಎಂದು ಹೇಳಿದ್ದರು ಎಂಬ ವಿಚಾರವನ್ನೂ ಹಂಚಿಕೊಂಡರು.

ಮಹಿಳೆಯರ ಮೇಲಿನ ಈ ನಿಯಮಗಳ ಹಿಂದಿನ ಕಾರಣಗಳ ಬಗ್ಗೆ ಪಲಕ್​ ಅವರಲ್ಲಿ ಕೇಳಿದಾಗ, ಸಲ್ಮಾನ್ ಖಾನ್ ಅವರನ್ನು "ಸಾಂಪ್ರದಾಯಿಕ" ಮನುಷ್ಯ ಎಂದು ನಟಿ ತಿಳಿಸಿದರು. ನಿಮಗೆ ಇಷ್ಟವಾದಂತೆ ಉಡುಗೆ ತೊಡಿ ಎಂದು ಹೇಳುತ್ತಾರೆ, ಆದರೆ ಅವರು ನಿರಂತರವಾಗಿ "ನನ್ನ ಹುಡುಗಿಯರು ಯಾವಾಗಲೂ ರಕ್ಷಿಸಲ್ಪಡಬೇಕು" ಎಂಬುದನ್ನೂ ಹೇಳುತ್ತಾರೆ. ಖಾಸಗಿ ಪ್ರದೇಶಗಳಲ್ಲಿ ಅವರು ಯಾರನ್ನೂ ನಂಬುವುದಿಲ್ಲ. ಯಾರಾದರೂ ಪುರುಷರು ಇದ್ದರೆ "ಹುಡುಗಿಯರು ಯಾವಾಗಲೂ ಸುರಕ್ಷಿತವಾಗಿರಬೇಕು" ಎಂದು ಹೇಳುತ್ತಾರೆಂದು ನಟಿ ಸಲ್ಮಾನ್​ ಬಗ್ಗೆ ಗುಣಗಾನ ಮಾಡಿದರು.

ಇದನ್ನೂ ಓದಿ: ಮುದ್ದಾದ ವಿಡಿಯೋ ಹಂಚಿಕೊಂಡು ಪುತ್ರಿಯ ಗುಣಗಾನ ಮಾಡಿದ ಕಿಂಗ್​​​​​​​ ಖಾನ್​​

ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಏಪ್ರಿಲ್ 21ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಬಹುತಾರಾಗಣದ ಈ ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಇನ್ನೂ ನಟಿ ಮುಂದೆ ಸಂಜಯ್ ದತ್ ಜೊತೆಗೆ ದಿ ವರ್ಜಿನ್ ಟ್ರೀ (Virgin Tree) ಅಲ್ಲಿ ಕೆಲಸ ಮಾಡಲಿದ್ದಾರೆ. ಸದ್ಯ ಸಲ್ಮಾನ್​ ಬಗ್ಗೆ ಪಲಕ್​ ಹೇಳಿಕೆಗಳು ಸದ್ದು ಮಾಡುತ್ತಿದೆ. ನಟನ ಮೇಲೆ ಗೌರವ ಹೆಚ್ಚಾಗಿದೆ. ಜೊತೆಗೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಸಲ್ಲು ಎಸ್​ಅರ್​ಕೆ ಭರ್ಜರಿ ಆ್ಯಕ್ಷನ್​ ಸೀನ್​ಗೆ ಮೂವರು ಸಾಹಸ ನಿರ್ದೇಕರು?!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.