ETV Bharat / entertainment

ಆಯುಷ್ಮಾನ್​ ಖುರಾನಾ ನಟನೆಯ 'ಡ್ರೀಮ್ ಗರ್ಲ್ 2' ಟೀಸರ್​ ರಿಲೀಸ್​: ನಾಳೆ ಟ್ರೇಲರ್​ ಬಿಡುಗಡೆ - ಈಟಿವಿ ಭಾರತ ಕನ್ನಡ

Dream Girl 2 teaser: ಆಯುಷ್ಮಾನ್​ ಖುರಾನಾ ಮತ್ತು ಅನನ್ಯಾ ಪಾಂಡೆ ನಟನೆಯ 'ಡ್ರೀಮ್ ಗರ್ಲ್ 2' ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ.

Dream Girl 2
ಡ್ರೀಮ್ ಗರ್ಲ್ 2
author img

By

Published : Jul 31, 2023, 8:45 PM IST

ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಡ್ರೀಮ್ ಗರ್ಲ್ 2'. ಇದು ಅವರ ಬ್ಲಾಕ್​ಬಸ್ಟರ್​ 'ಡ್ರೀಮ್​ ಗರ್ಲ್'​ನ ಮುಂದುವರಿದ ಭಾಗವಾಗಿದೆ. ಚಿತ್ರದಲ್ಲಿ ಬಿಟೌನ್​ ಬೆಡಗಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಕೆಲ ದಿನಗಳ ಹಿಂದೆ 'ಡ್ರೀಮ್ ಗರ್ಲ್ 2'ನ ಪೂಜಾ ಪಾತ್ರದ ಪೋಸ್ಟರ್​ ಅನ್ನು ಹಂಚಿಕೊಳ್ಳಲಾಗಿತ್ತು. ಇಂದು ತಯಾರಕರು ಟೀಸರ್​ ಅನ್ನು ಬಿಡುಗಡೆ ಮಾಡಿದ್ದಾರೆ. ಸಣ್ಣ ತುಣುಕನ್ನು ಹಂಚಿಕೊಳ್ಳುವುದರೊಂದಿಗೆ, ಪ್ರೇಕ್ಷಕರಿಗೆ ಹೆಚ್ಚಿನದನ್ನು ಬಯಸುವಂತೆ ಮಾಡಿದ್ದಾರೆ.

'ಡ್ರೀಮ್ ಗರ್ಲ್ 2' ಪ್ರೇಕ್ಷಕರು ನೋಡಲು ತುದಿಗಾಲಿನಲ್ಲಿ ಕಾಯುತ್ತಿರುವ ಸಿನಿಮಾ. ಈ ಚಿತ್ರದ ಮೇಲೆ ಸಿನಿ ಪ್ರೇಮಿಗಳಿಗೆ ವಿಪರೀತ ನಿರೀಕ್ಷೆಯಿದೆ. ಇತ್ತೀಚೆಗಿನ ಪೋಸ್ಟರ್​ಗಳು, ಅಪ್​ಡೇಟ್​ಗಳು ಜನರನ್ನು ಆಕರ್ಷಿಸಿದೆ. ಇಂದು ಬಿಡುಗಡೆಯಾಗಿರುವ ಟೀಸರ್​ ಕೇವಲ 14 ಸೆಕೆಂಡ್​ ಮಾತ್ರ ಇದೆ. ಆಯುಷ್ಮಾನ್​ ಖುರಾನಾ ಅವರ ಪೂಜಾ ಪಾತ್ರವನ್ನು ಕೇವಲ ಹಿಂಬಂದಿಯಿಂದ ಮಾತ್ರ ತೋರಿಸಲಾಗಿದೆ. ಕೆಂಪು ಸೀರೆಯುಟ್ಟು ಸೊಂಟ ಬಳುಕಿಸಿದ್ದಾರೆ. ಆದರೆ ಇದು ಪ್ರೇಕ್ಷಕರನ್ನು ಮತ್ತಷ್ಟು ಬಯಸುವಂತೆ ಮಾಡಿದೆ.

  • " class="align-text-top noRightClick twitterSection" data="">

'ಡ್ರೀಮ್ ಗರ್ಲ್ 2' ತಯಾರಕರು ಟೀಸರ್​ ಅನ್ನು ಕೈಬಿಟ್ಟ ಕೂಡಲೇ ನೆಟಿಜನ್​ಗಳು ಕಾಮೆಂಟ್​ ವಿಭಾಗವನ್ನು ತುಂಬಿದರು. ಟೀಸರ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, "ಇದು ನಿಜವಾಗಿಯೂ ಪ್ರೇಕ್ಷಕರನ್ನು ಮೆಚ್ಚಿಸಿದೆ" ಎಂದಿದ್ದಾರೆ. ಮತ್ತೊಬ್ಬರು, "ಇದು ನಿಜವಾಗಿಯೂ ಟೀಸರ್​ ಅಲ್ಲ, ಟ್ರೇಲರ್​ ಘೋಷಣೆಯ ವಿಡಿಯೋ" ಎಂದು ಪ್ರತಿಕ್ರಿಯಿಸಿದ್ದಾರೆ. "ಇದು ಪ್ರಾರಂಭವಾಗುವ ಮೊದಲೇ ಮುಗಿದಿದೆ" ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: 31ನೇ ವಸಂತಕ್ಕೆ ಕಾಲಿರಿಸಿದ ಕಿಯಾರಾ ಅಡ್ವಾಣಿ: ಕೇಕ್​ ಕತ್ತರಿಸಿ ಸಂಭ್ರಮಿಸಿದ ತಾರೆ

ಚಿತ್ರ ತಯಾರಕರು ನಾಳೆ ಡ್ರೀಮ್ ಗರ್ಲ್ 2 ಟ್ರೇಲರ್​ ಅನ್ನು ಬಿಡುಗಡೆ ಮಾಡಲಿದ್ದಾರೆ. ಆಯುಷ್ಮಾನ್ ಪೂಜಾ ಪಾತ್ರದೊಂದಿಗೆ ಮರಳಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ. ಈ ಸಿನಿಮಾವನ್ನು ರಾಜ್​ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಚಿತ್ರವು ಆಗಸ್ಟ್​ 25 ರಂದು ತೆರೆ ಕಾಣಲಿದೆ. ನಿಜವಾಗಿಯೂ ಜುಲೈನಲ್ಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು.

ವಿಎಫ್​ಎಕ್ಸ್​ ಕೆಲಸ ವಿಳಂಬ: ಆದರೆ, ಸಿನಿಮಾಗೆ ಅಗತ್ಯವಿರುವ ವಿಎಫ್‌ಎಕ್ಸ್ ಕೆಲಸದಿಂದಾಗಿ ವಿಳಂಬವಾಯಿತು. ​ಡ್ರೀಮ್ ಗರ್ಲ್ 2 ಗೆ ವಿಎಫ್​ ಕೆಲಸವು ನಿರ್ಣಾಯಕವಾಗಿದೆ. ಸಿನಿಮಾದ ಕುರಿತು ಈ ಹಿಂದೆ ಮಾತನಾಡಿದ್ದ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಏಕ್ತಾ ಕಪೂರ್, "ಡ್ರೀಮ್ ಗರ್ಲ್ 2 ನಲ್ಲಿ ಆಯುಷ್ಮಾನ್ ಖುರಾನಾ ಅವರ ಪಾತ್ರವು ಪರಿಪೂರ್ಣವಾಗಿ ಕಾಣಬೇಕು ಎಂದು ನಾವು ಬಯಸುತ್ತೇವೆ. ಅದಕ್ಕಾಗಿಯೇ ವಿಎಫ್​ಎಕ್ಸ್​ ಕೆಲಸವನ್ನು ಪರಿಪೂರ್ಣಗೊಳಿಸಲು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತಿದ್ದೇವೆ" ಎಂದು ತಿಳಿಸಿದ್ದರು.

ಇದನ್ನೂ ಓದಿ: ಅಭಿಷೇಕ್​ ಬಚ್ಚನ್​ ನಟನೆಯ 'ಘೂಮರ್' ಮೋಷನ್ ಪೋಸ್ಟರ್​ ರಿಲೀಸ್​; ಬಿಡುಗಡೆಗೂ ಮುಹೂರ್ತ ಫಿಕ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.