ETV Bharat / entertainment

Once Upon A Time ಜಮಾಲಿಗುಡ್ಡದಲ್ಲಿ ಬಾರ್ ಸಪ್ಲೇಯರ್ ಆದ ಡಾಲಿ ಧನಂಜಯ್​ - ಪ್ರಕಾಶ್ ಬೆಳವಾಡಿ

ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಂದ ಯಶಸ್ಸು ಸಾಧಿಸಿರುವ ಡಾಲಿ ಧನಂಜಯ್​ Once Upon A Time ಜಮಾಲಿಗುಡ್ಡ ಸಿನಿಮಾದಲ್ಲಿ ಬಾರ್​ ಸಪ್ಲೇಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ..

Dhananjay
ಡಾಲಿ ಧನಂಜಯ್​
author img

By

Published : May 30, 2022, 7:52 PM IST

ಕನ್ನಡ ಚಿತ್ರರಂಗ ಅಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಬೇಡಿಕೆ ಕ್ರಿಯೇಟ್ ಮಾಡಿಕೊಂಡಿರೋ ನಟ ಡಾಲಿ ಧನಂಜಯ್. ರತ್ನನ್‌ ಪ್ರಪಂಚ ಹಾಗೂ ಬಡವ ರಾಸ್ಕಲ್ ಸಿನಿಮಾಗಳ ಸಕ್ಸಸ್ ನಂತರ ಡಾಲಿ ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ರೌಡಿ, ಡಾನ್, ಲವರ್ ಬಾಯ್ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಅಭಿಮಾನಿಗಳನ್ನು ಗಳಿಸಿದ್ದಾರೆ‌.

Once Upon A Time jamaligudda
ಸೆಪ್ಟೆಂಬರ್ 9 ರಂದು ತೆರೆಗೆ ಬರಲು ಸಿದ್ದತೆ

ಸದ್ಯ ಡಾಲಿ ಧನಂಜಯ್ ಮತ್ತೊಂದು ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ Once Upon A Time ಜಮಾಲಿಗುಡ್ಡ ಟೈಟಲ್ ಇಟ್ಟಿದ್ದು, ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ‌. ಇದು 90ರ ದಶಕದಲ್ಲಿ ನಡೆಯುವ ಕಥೆ. ಈ ಚಿತ್ರದಲ್ಲಿ ಡಾಲಿ ಧನಂಜಯ್ ಬಾರ್ ಸಪ್ಲೇಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Once Upon A Time jamaligudda
ಜಮಾಲಿಗುಡ್ಡ ಸಿನಿಮಾದಲ್ಲಿ ಬಾರ್ ಸಪ್ಲೇಯರ್ ಆಗಿ ಧನಂಜಯ್​

ಇತ್ತೀಚೆಗೆ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಅವರು ಧನಂಜಯ್​ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಅದಿತಿ ಅವರ ಪಾತ್ರವೂ ಈ ಹಿಂದಿನ ಸಿನಿಮಾಗಿಂತ ವಿಭಿನ್ನವಾಗಿ ಮೂಡಿ ಬರುತ್ತಿದೆ. ಪ್ರಕಾಶ್ ಬೆಳವಾಡಿ, ಭಾವನಾ ರಾಮಣ್ಣ, ಕಾಮಿಡಿ ಕಿಲಾಡಿಗಳು ಸಂತು, ತ್ರಿವೇಣಿ, ಪ್ರಾಣ್ಯ, ನಂದ ಗೋಪಾಲ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

Once Upon A Time jamaligudda
ರತ್ನನ್‌ ಪ್ರಪಂಚ ಹಾಗು ಬಡವ ರಾಸ್ಕಲ್ ಸಿನಿಮಾಗಳ ಸಕ್ಸಸ್ ಕಂಡ ಡಾಲಿ

ಸದ್ಯ ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಗೋಕರ್ಣ, ಶಿವಮೊಗ್ಗದಲ್ಲಿ ಚಿತ್ರತಂಡ ಚಿತ್ರೀಕರಣ ಮುಗಿಸಿದೆ. ಎಂಬತ್ತು ದಿನಗಳ ಕಾಲ Once Upon A Time ಜಮಾಲಿಗುಡ್ಡ ಸಿನಿಮಾದ ಚಿತ್ರೀಕರಣ ನಡೆದಿದೆ.

ಸಂಭಾಷಣೆ ಜೋಡಣೆ ಸಹ ಅಂತಿಮ ಹಂತದಲ್ಲಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸೆಪ್ಟೆಂಬರ್ 9ರಂದು ತೆರೆಗೆ ಬರಲು ಸಿದ್ದತೆ ಮಾಡಿಕೊಳ್ಳುತ್ತಿದೆ.

Once Upon A Time jamaligudda
ಬಹುತೇಕ ಚಿತ್ರೀಕರಣ ಮುಗಿಸಿರುವ ಜಮಾಲಿಗುಡ್ಡ

ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕುಶಾಲ್ ಗೌಡ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಅವರೇ ಬರೆದಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಇದೆ.

ಕಾರ್ತಿಕ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಕುಟುಂಬ ಸಮೇತ ನೋಡಬಹುದಾದ ಸುಂದರ ಕಥಾಹಂದರದ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: ಸಕ್ಸಸ್ ಅನ್ನೋದು ತಲೆಗೆ ಏರಿಲ್ಲ.. ಹೆಗಲ ಮೇಲೆ‌ ನಾನು ಸೋತಿರೋ ಸಿನಿಮಾಗಳಿವೆ ಎಂದ ಕ್ರೇಜಿಸ್ಟಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.