ETV Bharat / entertainment

ಕನ್ನಡ ಚಿತ್ರರಂಗದಲ್ಲಿ ದಶಕ ಪೂರೈಸಿದ ನಟರಾಕ್ಷಸ ಡಾಲಿ ಧನಂಜಯ್

ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದಾರೆ.

author img

By

Published : May 31, 2023, 6:25 PM IST

Dolly Dhananjay
ನಟರಾಕ್ಷಸ ಡಾಲಿ ಧನಂಜಯ್

ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ಶ್ರಮ, ಪ್ರತಿಭೆ ಇದ್ದರೆ ಯಾರು ಏನು ಬೇಕಾದರೂ ಆಗಬಹು. ಅದಕ್ಕೆ ತಾಜಾ ಉದಾಹರಣೆ ಎಂದರೆ ಸದ್ಯ ಕನ್ನಡ, ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್. ಹೌದು ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​ ಕನ್ನಡ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಪೂರೈಸಿದ್ದಾರೆ. ಈ ಒಂದು ದಶಕದ ಸಿನಿ ಪಯಣದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.

Dolly Dhananjay
ಡಾಲಿ ಧನಂಜಯ್

ಧನಂಜಯ್​ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಹುಡುಗ. ಬಾಲ್ಯದಲ್ಲಿ ತಮ್ಮ ತಂದೆಯೊಂದಿಗೆ ಹಳ್ಳಿಯಲ್ಲಿ ನಾಟಕಗಳನ್ನು ನೋಡ್ತಾ ನೋಡ್ತಾ ಸಿನಿಮಾ ಆಸಕ್ತಿ ಬೆಳೆಸಿಕೊಂಡರು. ಎಷ್ಟೇ ಅವಮಾನ, ಟೀಕೆ, ಕಷ್ಟ ಎದರುರಾದರೂ ಎಲ್ಲವನ್ನೂ ಮೆಟ್ಟಿ ಯಶಸ್ಸನ್ನು ಕಂಡ ಹಳ್ಳಿ ಹೈದ ಧನಂಜಯ್.

Dolly Dhananjay
ಡಾಲಿ ಧನಂಜಯ್

ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಧನಂಜಯ್ ತನ್ನ ಕೆಲಸಕ್ಕೆ ಗುಡ್ ಬೈ ಹೇಳಿ, ಗುರು ಪ್ರಸಾದ್ ನಿರ್ದೇಶನದ ಡೈರೆಕ್ಟರ್ ಸ್ಪೆಷಲ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಾರೆ. ಆದರೆ ಈ ಸಿನಿಮಾ ಅಂದುಕೊಂಡಂತೆ ಧನಂಜಯ್ ಅವರಿಗೆ ಹೆಸರು ತಂದು ಕೊಡುವುದಿಲ್ಲ. ಈ ಚಿತ್ರದ ನಂತರ ಧನಂಜಯ್, ರಾಟೆ, ಬಾಕ್ಸರ್​, ಜೆಸ್ಸಿ, ಬದ್ಮಾಶ್​, ಎರಡನೇ ಸಲ, ಅಲ್ಲಮ ಮುಂತಾದ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಅಷ್ಟೇನೂ ಸುದ್ದಿ ಮಾಡಲಿಲ್ಲ. ಧನಂಜಯ್​ ಒಂದು ದೊಡ್ಡ ಯಶಸ್ಸನ್ನು ಕಾಣಲು 2018ರಲ್ಲಿ ಬಿಡುಗಡೆಯಾದ ಶಿವ ರಾಜ್​ಕುಮಾರ್ ಅಭಿನಯದ ಹಾಗು ಸೂರಿ ನಿರ್ದೇಶನದ ಟಗರು ಚಿತ್ರದವರೆಗೂ ಕಾಯಬೇಕಾಯಿತು.

Dolly Dhananjay
ಸುದೀಪ್​, ಅಪ್ಪು ಜೊತೆ ಡಾಲಿ ಧನಂಜಯ್

ಧನಂಜಯ್​ ದೊಡ್ಡ ಮಟ್ಟದ ಗೆಲುವು ಕಂಡಿದ್ದು, ಸೂರಿ ನಿರ್ದೇಶನದ ಟಗರು ಚಿತ್ರ. ಈ ಚಿತ್ರದಲ್ಲಿ ಡಾಲಿ ಎಂಬ ವಿಲನ್​ ಆಗಿ ಕಾಣಿಸಿಕೊಂಡ ಧನಂಜಯ್​, ಮೊದಲ ಬಾರಿಗೆ ದೊಡ್ಡ ಯಶಸ್ಸು ಕಂಡರು. ಅಷ್ಟೇ ಅಲ್ಲ ಧನಂಜಯ್ ಸಿನಿಮಾ ಬದುಕಿಗೆ ದೊಡ್ಡ ತಿರುವು ಕೊಟ್ಟ ಚಿತ್ರ ಕೂಡ ಹೌದು. ಈ ಸಿನಿಮಾ ನಂತರ ಡಾಲಿ ಎಂದೇ ಧನಂಜಯ್​ ಫೇಮಸ್ ಆದರು.

ಹೀರೋ ಆಗಬೇಕು ಅಂದುಕೊಂಡು ಕನ್ನಡ ಚಿತ್ರರಂಗಕ್ಕೆ ಬಂದ ಡಾಲಿ ಆರಂಭದಲ್ಲಿ ಹಲವು ಅವಮಾನ, ತಿರಸ್ಕಾರ, ಸೋಲುಗಳನ್ನು ಅನುಭವಿಸಿ ಈಗ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅವರು ಸ್ಟಾರ್ ಆಗಿದ್ದು ಮಾತ್ರವಲ್ಲದೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಹಲವು ಪ್ರತಿಭಾವಂತರಿಗೆ ನೆರವಾಗಿಯೂ ನಿಂತಿದ್ದಾರೆ.

ಇದನ್ನೂ ಓದಿ: ಉಚಿತ ಅಕ್ಕಿ ಕೊಟ್ಟರೆ ಸೋಮಾರಿಗಳಾಗ್ತಾರೆ ಎಂಬುದು ತಪ್ಪು ಹೇಳಿಕೆ: ಡಾಲಿ ಧನಂಜಯ್

ಒಂದೇ ಒಂದು ಸಿನಿಮಾ ಅವಕಾಶಕ್ಕಾಗಿ ನಿರ್ದೇಶಕರ, ನಿರ್ಮಾಪಕರ ಮನೆ ಬಾಗಿಲ ಬಳಿ ಹೋಗಿದ್ದ ಡಾಲಿಗೆ ಸದ್ಯ ಕನ್ನಡ ಮಾತ್ರವಲ್ಲ ತೆಲುಗು, ತಮಿಳಿನಿಂದಲೂ ಅವಕಾಶಗಳು ಹರಿದು ಬರುತ್ತಿವೆ. ನಟನಾಗಿ, ನಿರ್ಮಾಪಕನಾಗಿ, ಕಥೆಗಾರನಾಗಿ, ಗೀತ ಸಾಹಿತಿಯಾಗಿ ತಮ್ಮ ಪ್ರತಿಭೆಯ ಕವಲುಗಳನ್ನು ಡಾಲಿ ಪ್ರದರ್ಶಿಸುತ್ತಿದ್ದಾರೆ. ತಮ್ಮ ಮೆಚ್ಚಿನ ನಾಯಕ ಚಿತ್ರರಂಗದಲ್ಲಿ 10 ವರ್ಷ ಯಶಸ್ವಿಯಾಗಿ ಪೂರೈಸಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಕಾಮನ್ ಡಿಪಿ ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ರಮ್ಯಾ, ಅಮೃತಾ ಅಯ್ಯಂಗಾರ್​, ಸಪ್ತಮಿ ಗೌಡ, ಯೋಗಿ, ನವೀನ್​ ಶಂಕರ್​, ಶ್ರುತಿ ಹರಿಹರನ್​ ಸೇರಿದಂತೆ ಹಲವರು ಡಾಲಿಗೆ ಶುಭ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.