ETV Bharat / entertainment

ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ರೋಲ್​ ಮಾಡೆಲ್ ಯಾರು ಗೊತ್ತಾ? - vijay sethupathi

ತಮ್ಮ ಮುಂದಿನ ಸಿನಿಮಾ 'ಮೇರಿ ಕ್ರಿಸ್ಮಸ್​​' ಪ್ರಚಾರದಲ್ಲಿ ಬ್ಯುಸಿಯಾಗಿರುವ ಕತ್ರಿನಾ ಕೈಫ್​ ಸಂದರ್ಶನವೊಂದರಲ್ಲಿ ಕೆಲ ಆಸಕ್ತಿಕರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

Katrina Kaif
ಕತ್ರಿನಾ ಕೈಫ್​
author img

By ETV Bharat Karnataka Team

Published : Dec 23, 2023, 5:20 PM IST

ಬಾಲಿವುಡ್‌ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ಇತ್ತೀಚಿನ ದಿನಗಳಲ್ಲಿ 'ಮೇರಿ ಕ್ರಿಸ್ಮಸ್​​' ಸಲುವಾಗಿ ಸುದ್ದಿಯಲ್ಲಿದ್ದಾರೆ. ದಕ್ಷಿಣದ ಜನಪ್ರಿಯ ನಟ ವಿಜಯ್​​ ಸೇತುಪತಿ ಅವರೊಂದಿಗೆ ತೆರೆ ಹಂಚಿಕೊಂಡಿರುವ ಈ ಸಿನಿಮಾ 2024ರ ಆರಂಭದಲ್ಲಿ ತೆರೆಗಪ್ಪಳಿಸಲಿದೆ. ಈ ಬಹುನಿರೀಕ್ಷಿತ ಚಿತ್ರ ಇದೇ ಸಾಲಿನಲ್ಲಿ ತೆರೆಕಾಣಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಕೆಲವು ಬಾರಿ ಮುಂದೂಡಿಕೆಯಾಗಿದ್ದು, ಇದೀಗ 2024ರ ಜನವರಿಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.

ಟೈಗರ್​​ ಸಿನಿಮಾ ಖ್ಯಾತಿಯ ನಟಿ ಕತ್ರಿನಾ ಕೈಫ್ ಈಗಾಗಲೇ ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ನಟಿ ಕತ್ರಿನಾ ಕೈಫ್​ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಮಾಡೆಲಿಂಗ್ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅಂದಿನ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕತ್ರಿನಾ ಕೈಫ್ ರೋಲ್ ಮಾಡೆಲ್ ಯಾರು? ಕತ್ರಿನಾ ಕೈಫ್ ಸಂದರ್ಶನದಲ್ಲಿ ತಮ್ಮ ರೋಲ್​ ಮಾಡೆಲ್​​ ಯಾರು ಎಂಬುದನ್ನು ಬಹಿರಂಗಪಡಿಸಿದರು. ಫಿಟ್ನೆಸ್ ಕ್ವೀನ್ ಮಲೈಕಾ ಅರೋರಾ ಅವರನ್ನು ಬಹಳ ಇಷ್ಟಪಡುವುದಾಗಿ ಬಹಿರಂಗಪಡಿಸಿದರು. ತಮ್ಮ ಮಾಡೆಲಿಂಗ್ ದಿನಗಳಲ್ಲಿ ಮಲೈಕಾ ಅರೋರಾ, ಮಧು ಸಪ್ರೆ ಮತ್ತು ಲಕ್ಷ್ಮಿ ಮೆನನ್ ಅವರನ್ನು ತಮ್ಮ ರೋಲ್ ಮಾಡೆಲ್​​ ಆಗಿ ಪರಿಗಣಿಸಿದ್ದೆ ಎಂಬುದನ್ನು ಕತ್ರಿನಾ ಬಹಿರಂಗಪಡಿಸಿದ್ದಾರೆ. ಇವರನ್ನು ಅನುಸರಿಸುತ್ತಿದ್ದೆ, ಸೂಪರ್ ಮಾಡೆಲ್ ಆಗಲು ಬಯಸಿದ್ದೆ ಎಂದು ಕತ್ರಿನಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಲೈಕಾ ಅರೋರಾ ಮಾಡೆಲಿಂಗ್​​ ಕ್ಷೇತ್ರದಲ್ಲಿ ಪರಿಣಿತರು. ಡ್ಯಾನ್ಸ್ ಮೂಲಕವೂ ಗಮನ ಸೆಳೆದಿದ್ದಾರೆ. ಫಿಟ್ನೆಸ್ ಬಗ್ಗೆ ಎರಡು ಮಾತಿಲ್ಲ. 50ರ ಹರೆಯದಲ್ಲೂ ಯುವತಿಯರೂ ನಾಚುವಂಥ ಸೌಂದರ್ಯ. ನಿತ್ಯ ಯೋಗ, ವರ್ಕ್ಔಟ್ ಮೂಲಕ ಗಮನ ಸೆಳೆಯುತ್ತಾರೆ. ದೇಹ ದಂಡಿಸಲು ಹೋಗುವ ಸ್ಥಳದಿಂದ ಪಾಪರಾಜಿಗಳು ನಿತ್ಯ ವಿಡಿಯೋ ಹಂಚಿಕೊಳ್ಳುತ್ತಾರೆ. ನಟಿಯ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತವೆ. ಫಿಟ್ನೆಸ್ ವಿಚಾರದಲ್ಲಿ ಮಲೈಕಾ ಅರೋರಾ ನಂಬರ್ ಒನ್ ಅಂತಲೇ ಹೇಳಬಹುದು. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ಅವರ ಮಾಜಿ ಪತ್ನಿ ಎಂಬುದು ನಿಮಗೆ ತಿಳಿದಿರುವ ವಿಚಾರವೇ.

ಇದನ್ನೂ ಓದಿ: ಪ್ರಭಾಸ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನ ಶೈಲಿಗೆ ಮನಸೋತ ನಟ ಚಿರಂಜೀವಿ

ಶ್ರೀರಾಮ್ ರಾಘವನ್ ಆ್ಯಕ್ಷನ್​ ಕಟ್​ ಹೇಳಿರುವ 'ಮೇರಿ ಕ್ರಿಸ್ಮಸ್​​' ಸಿನಿಮಾದಲ್ಲಿ ಇದೇ ಮೊದಲ ಬಾರಿ ಕತ್ರಿನಾ ಕೈಫ್ ಮತ್ತು ವಿಜಯ್​ ಸೇತುಪತಿ ನಟಿಸಿದ್ದಾರೆ. ಜನವರಿ 12ರಂದು ಸಿನಿಮಾ ಬಿಡುಗಡೆ ಆಗಲಿದೆ. ನಟಿ ಕೊನೆಯದಾಗಿ ಸಲ್ಮಾನ್​​ ಖಾನ್​ ಜೊತೆ ಟೈಗರ್ 3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ 'ದಂಗಲ್​'ಗೆ 7 ವರ್ಷ; ಹಿಟ್​ ಲಿಸ್ಟ್ ಇಲ್ಲಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.