ETV Bharat / entertainment

ಚಿತ್ರೀಕರಣದ ವೇಳೆ ದಿವ್ಯಾ ಖೋಸ್ಲಾ ಕುಮಾರ್​​ಗೆ ತೀವ್ರ ಗಾಯ, ಇನ್​ಸ್ಟಾಗ್ರಾಂ ಫೋಟೊ ಹಂಚಿಕೊಂಡ ನಟಿ - hyderabad

ನಟಿ ದಿವ್ಯಾ ಖೋಸ್ಲಾ ಕುಮಾರ್ ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ಸಾಹಸ ದೃಶ್ಯವನ್ನು ಚಿತ್ರೀಕರಿಸುವ ಸಮಯದಲ್ಲಿ ಗಾಯಗೊಂಡಿದ್ದು, ಗಾಯಗೊಂಡಿರುವ ಪೋಟೊವನ್ನು ತಮ್ಮ ಇನ್​ಸ್ಟಾಗ್ರಾಂ ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

divya-khosla-kumar-badly-injured-during-shoot
ಚಿತ್ರೀಕರಣದ ವೇಳೆ ದಿವ್ಯಾ ಖೋಸ್ಲಾ ಕುಮಾರ್ ತೀವ್ರ ಗಾಯ, ಇನ್ಸ್​​ಸ್ಟಾಗ್ರಾಂ ಪೋಟೊ ಹಂಚಿಕೊಂಡ ನಟಿ
author img

By

Published : Mar 15, 2023, 10:43 PM IST

ಹೈದರಾಬಾದ್​: ಬಾಲಿವುಡ್​ ನಟಿ ದಿವ್ಯಾ ಖೋಸ್ಲಾ ಕುಮಾರ್​ ಅವರು ಚಿತ್ರೀಕರಣ ಸಮಯದಲ್ಲಿ ಗಾಯಗೊಂಡಿರುವ ಫೋಟೊವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಗಾಯದಿಂದ ಬೇಗ ಗುಣಮುಖವಾಗುವಂತೆ ಆರ್ಶೀವಾದ ಮಾಡಿ ಎಂದು ತಮ್ಮ ಅಭಿಮಾನಿಗಳ ಬಳಿ ವಿನಂತಿಸಿಕೊಂಡಿದ್ದಾರೆ. ‘‘ನನ್ನ ಮುಂಬರುವ ಪ್ರಾಜೆಕ್ಟ್​ನ ಆ್ಯಕ್ಷನ್​ ಸೀಕ್ವೇನ್ಸ್​​ನಲ್ಲಿ ತೀವ್ರವಾಗಿ ಗಾಯಗೊಂಡೆ. ಆದರೆ, ಪ್ರದರ್ಶನವು ಮುಂದುವರೆಯಬೇಕು. ನಿಮ್ಮೆಲ್ಲರ ಆರ್ಶಿವಾದ ಮತ್ತು ಬೇಗ ಗುಣಮುಖವಾಗುವ ಶಕ್ತಿ ನನಗೆ ಬೇಕು ಎಂಬ ಶೀರ್ಷಿಕೆಯೊಂದಿಗೆ ದಿವ್ಯಾ ಖೋಸ್ಲಾ ಅವರು ತಮ್ಮ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಪೋಟೊವನ್ನು ಹಂಚಿಕೊಂಡಿದ್ದಾರೆ.

ನಟಿಯ ಪೋಸ್ಟ್​​ಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದು ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಕಾಮೆಂಟ್​ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ ‘‘ಮೇಡಂ ಬೇಗಾ ಗುಣಮುಖರಾಗಿ’’ ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೋರ್ವ ಬಳಕೆದಾರನು ‘‘ ನಿಮಗೆ ತುಂಬಾ ನೋವಾಗಿದೆ ನೀವು ಬೇಗ ಗುಣಮುಖರಾಗಿ, ಚೆನ್ನಾಗಿ ಕೆಲಸ ಮಾಡಲಿ ಎಂದು ಪ್ರಾರ್ಥಿಸುತ್ತೇನೆ, ಇಂಡಸ್ಟ್ರಿಯಲ್ಲಿ ನಿಮಗೆ ಒಳ್ಳೆಯ ಹೆಸರು ಬರಲಿ, ಕಾಳಜಿ ವಹಿಸಿ’’ ಎಂದು ಬರೆದಿದ್ದಾರೆ.

ಮತ್ತೊಂದಡೆ, ಇತರ ಬಳಕೆದಾರರು ವ್ಯಂಗ್ಯವಾಗಿ ಕಾಮೆಂಟ್​ ಮಾಡಿರುವುದನ್ನು ಕಾಣಬಹುದಾಗಿದೆ. ‘‘ನಿರೀಕ್ಷಿಸಿ, ಏನು? ಇದಕ್ಕೆ ಆರ್ಶೀವಾದ ಮತ್ತು ಗುಣ ಪಡಿಸುವ ಶಕ್ತಿ ಬೇಕೆ’’ ಎಂದು ವ್ಯಂಗ್ಯವಾಗಿ ಕಮೆಂಟ್​ ಮಾಡಿದ್ದರೆ. ಇನ್ನೊಬ್ಬ ಬಳಕೆದಾರ ‘‘ಮಧ್ಯಮ ವರ್ಗದ ಮನೆಯ ತಾಯಿಯೊಬ್ಬರು ಇದನ್ನು ದಿನ ನಿತ್ಯದ ಆಧಾರದ ಮೇಲೆ ಪಡೆಯುತ್ತಾರೆ LOL’’ ಎಂದು ಬರೆದಿದ್ದಾರೆ.

ನಟಿ ದಿವ್ಯಾ ಅವರು ನಟಿಸುತ್ತಿರುವ ಚಲನಚಿತ್ರದ ಶೀರ್ಷಿಕೆ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ, ಆದರೆ, ಯಾರಿಯಾನ್​ 2 ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದಿವ್ಯಾ, ಮೀಜಾನ್​ ಜಾಫ್ರಿ ಮತ್ತು ಯಶ್​ ದಾಸ್​ ಗುಪ್ತಾ ಮುಖ್ಯ ನಟರು. ಚಿತ್ರದಲ್ಲಿ ವಾರಿನಾ ಹುಸೇನ್​, ಪ್ರಿಯಾ ವಾರಿಯರ್​ ಮತ್ತು ಪರ್ಲ್ ವಿ ಪುರಿ ಸಹ ನಟಿಸಿದ್ದಾರೆ. ಈ ಚಿತ್ರಕ್ಕೆ ಟಿ-ಸೀರಿಸ್​ ನಿರ್ಮಾಣವಿದೆ.

ಇದನ್ನೂ ಓದಿ: ಭಾತರದ ಲೋಕಲ್​ ರೈಲಿನಲ್ಲಿ "ದಿ ಕ್ವಿಕ್ ಸ್ಟೈಲ್" ಡ್ಯಾನ್ಸ್​: ಫಿದಾ ಆದ ಅಭಿಮಾನಿಗಳು..

ನನ್ನ ಜೀವನದ ಅತ್ಯುತ್ತಮ ಕ್ಷಣ: ದೇಶದಲ್ಲೀಗ ಆಸ್ಕರ್​​ ಗೌರವದ ಸಂಭ್ರಮ ನೆಲೆಸಿದೆ. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿದ್ದು, ಚಿತ್ರತಂಡ ದೇಶಕ್ಕೆ ವಾಪಸಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆರ್‌ಆರ್‌ಆರ್‌ ಸಲುವಾಗಿ 95ನೇ ಆಸ್ಕರ್‌ನ ರೆಡ್ ಕಾರ್ಪೆಟ್ ಮೇಲೆ ಜೂನಿಯರ್ ಎನ್‌ಟಿಆರ್ ಹೆಜ್ಜೆ ಹಾಕಿದ್ದು, ಸಮಾರಂಭದ ಬಳಿಕ ಮಂಗಳವಾರ ತಡರಾತ್ರಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಅದ್ಧೂರಿ ಸ್ವಾಗತ ಕೋರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ನನ್ನ ಜೀವನದ "ಅತ್ಯುತ್ತಮ ಕ್ಷಣ" ಎಂದು ಹರ್ಷ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.