ETV Bharat / entertainment

India Couture Week 2023: ಫ್ಯಾಷನ್​ ಈವೆಂಟ್​ನಲ್ಲಿ ಮಿಂಚಿದ ದಿಶಾ ಪಟಾನಿ, ಸಾರಾ ಅಲಿ ಖಾನ್​, ಆದಿತ್ಯ ರಾಯ್​ ಕಪೂರ್ - ಈಟಿವಿ ಭಾರತ ಕನ್ನಡ

ಇಂಡಿಯಾ ಕೌಚರ್​ ವೀಕ್​ 2023 ಫ್ಯಾಷನ್​ ಈವೆಂಟ್​ನಲ್ಲಿ ಬಾಲಿವುಡ್​ ನಟರಾದ ದಿಶಾ ಪಟಾನಿ, ಸಾರಾ ಅಲಿ ಖಾನ್​ ಮತ್ತು ಆದಿತ್ಯ ರಾಯ್​ ಕಪೂರ್​ ಭಾಗವಹಿಸಿ ಗಮನ ಸೆಳೆದರು.

ಇಂಡಿಯಾ ಕೌಚರ್​ ವೀಕ್​ 2023
India Couture Week 2023
author img

By

Published : Aug 1, 2023, 12:26 PM IST

ಇಂಡಿಯಾ ಕೌಚರ್​ ವೀಕ್​ 2023 (India Couture Week 2023) ಫ್ಯಾಷನ್​ ಈವೆಂಟ್ ನವದೆಹಲಿಯಲ್ಲಿ ನಡೆಯುತ್ತಿದೆ. ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಜಂಟಿಯಾಗಿ ಆಯೋಜಿಸಿರುವ ಈ ಮೆಗಾ ಈವೆಂಟ್ ಆಗಸ್ಟ್ 2ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಾಲಿವುಡ್​ ನಟರಾದ ದಿಶಾ ಪಟಾನಿ, ಸಾರಾ ಅಲಿ ಖಾನ್​ ಮತ್ತು ಆದಿತ್ಯ ರಾಯ್​ ಕಪೂರ್​ ಭಾಗವಹಿಸಿ ಗಮನ ಸೆಳೆದರು. ಟ್ರೆಡಿಷನಲ್​ ಮತ್ತು ಮಾರ್ಡನ್​ ಡ್ರೆಸ್​ನೊಂದಿಗೆ ನೋಡುಗರನ್ನು ಆಕರ್ಷಿಸಿದರು.

ಈ ಮೂವರು ಫ್ಯಾಷನ್​ ಡಿಸೈನರ್​ಗಳಾದ ಡಾಲಿ ಜೆ, ಶಾಂತನು ಮತ್ತು ನಿಖಿಲ್‌ ಅವರಿಗಾಗಿ ರ‍್ಯಾಂಪ್​ ವಾಕ್ ಮಾಡಿದರು. ಫಿಟ್ನೆಸ್​ ಐಕಾನ್​ ದಿಶಾ ಪಟಾನಿ ಸಿಲ್ವರ್​ ಬಣ್ಣದ ಸ್ಟೈಲಿಶ್​ ಡ್ರೆಸ್​ನಲ್ಲಿ ಅಂದವಾಗಿ ಕಂಡರು. ಸಾರಾ ಅಲಿ ಖಾನ್​ ಮತ್ತು ಆದಿತ್ಯ ರಾಯ್​ ಕಪೂರ್​ ಈವೆಂಟ್​ಗಾಗಿ ಸಾಂಪ್ರದಾಯಿಕ ಉಡುಪು ಧರಿಸಿದ್ದರು. ದಿಶಾ ಪಟಾನಿ ವೇದಿಕೆಯಲ್ಲಿ ನಡೆದು ಬರುತ್ತಿದ್ದಂತೆ, ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿತು. ಸಾರಾ ಮತ್ತು ಆದಿತ್ಯ ಜೋಡಿ ಪ್ರೇಕ್ಷಕರನ್ನು ಸೆಳೆಯಿತು.

ಮಲಾಂಗ್​ ತಾರೆ ದಿಶಾ ಪಟಾನಿ ಮಿನುಗುವ ಬೆಳ್ಳಿಯ ದಿರಿಸಿನಲ್ಲಿ ರ‍್ಯಾಂಪ್ ವಾಕ್ ಮಾಡಿದರು. ಕನಿಷ್ಠ ಮೇಕಪ್​ ಮತ್ತು ಬೆಳ್ಳಿಯ ಕಿವಿಯೋಲೆಯೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಡಾಲಿ ಜೆ ಅವರ ಕಾರಣದಿಂದಾಗಿ ನಟಿ ದೇವತೆಯಂತೆ ಕಂಗೊಳಿಸಿದರು. ಸುಂದರವಾದ ಈವೆಂಟ್​ ಅಂದವನ್ನು ದಿಶಾ ಮತ್ತಷ್ಟು ಹೆಚ್ಚಿಸಿದರು.

ಇದನ್ನೂ ಓದಿ: ಆಯುಷ್ಮಾನ್​ ಖುರಾನಾ ನಟನೆಯ 'ಡ್ರೀಮ್ ಗರ್ಲ್ 2' ಟೀಸರ್​ ರಿಲೀಸ್​: ನಾಳೆ ಟ್ರೇಲರ್​ ಬಿಡುಗಡೆ

ಮತ್ತೊಂದೆಡೆ, ಸಾರಾ ಅಲಿ ಖಾನ್​ ಕ್ರೀಮ್ - ಹ್ಯೂಡ್ ಲೆಹೆಂಗಾವನ್ನು ಆರಿಸಿಕೊಂಡರು. ಅದ್ಭುತವಾದ ಮಿನುಗುವ ಬಸ್ಟಿಯರ್ ಕುಪ್ಪಸದೊಂದಿಗೆ ಕಾಣಿಸಿಕೊಂಡರು. ಅದಕ್ಕೆ ತಕ್ಕಂತೆ ಮೇಕಪ್​, ಆಭರಣಗಳನ್ನು ಧರಿಸಿ ತಮ್ಮ ನೋಟ ಪೂರ್ಣಗೊಳಿಸಿದರು. ಆದಿತ್ಯ ರಾಯ್​ ಕಪೂರ್​ ಬಿಳಿ ಸೆಲ್ವಾರ್​ ಧರಿಸಿದ್ದರು. ಶಾಂತನು ಮತ್ತು ನಿಖಿಲ್‌ ಅವರನ್ನು ಪ್ರತಿನಿಧಿಸಿ ಈ ಸ್ಟಾರ್​ ನಟರು ರ‍್ಯಾಂಪ್​ ವಾಕ್ ಮಾಡಿದರು.

ಸಾರಾ ಮತ್ತು ಆದಿತ್ಯ ತಮ್ಮ ಮುಂಬರುವ ಚಲನಚಿತ್ರ 'ಮೆಟ್ರೋ ಇನ್ ಡಿನೋ'ದ ಪ್ರಚಾರ ಕಾರ್ಯಕ್ಕಾಗಿ ವೇದಿಕೆಗೆ ಜೊತೆಯಾಗಿ ಬಂದಂತಿದೆ. ಅನುರಾಗ್​ ಬಸು ನಿರ್ದೇಶನದ ಚಿತ್ರದಲ್ಲಿ ಈ ಜೋಡಿ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ಒಂದು ಸುಂದರ ದಂಪತಿಯ ಹೃದಯಸ್ಪರ್ಶಿ ಕಥೆ ಎಂದು ಹೇಳಲಾಗುತ್ತಿದೆ. ಚಿತ್ರವು ಮಾರ್ಚ್ 2024 ರಲ್ಲಿ ಬಿಡುಗಡೆಯಾಗಲಿದೆ.

ನಟಿ ದಿಶಾ ಪಟಾನಿ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​, ಅಮಿತಾಭ್​ ಬಚ್ಚನ್​, ದೀಪಿಕಾ ಪಡುಕೋಣೆ ಮತ್ತು ಕಮಲ್​ ಹಾಸನ್​ ನಟನೆಯ ಪ್ರಾಜೆಕ್ಟ್ ಕೆ​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅಧಿಕೃತವಾಗಿ 'ಕಲ್ಕಿ 2898 ಎಡಿ' (Kalki 2898 AD) ಎಂದು ಹೆಸರಿಡಲಾಗಿದೆ. ಸಿನಿಮಾವನ್ನು ನಾಗ್​ ಅಶ್ವಿನ್​ ನಿರ್ದೇಶಿಸುತ್ತಿದ್ದಾರೆ. ಇದಲ್ಲದೇ ದಿಶಾ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಯೋಧ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಡಿಸೆಂಬರ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ನಿಮಿಕಾ ರತ್ನಾಕರ್​: 'ತ್ರಿಶೂಲಂ' ಮೂಲಕ ಉಪ್ಪಿಗೆ ಜೋಡಿಯಾದ 'ಪುಷ್ಪವತಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.