ETV Bharat / entertainment

ನಿರ್ದೇಶಕ ಯೋಗರಾಜ್ ಭಟ್ ಮಾವ ಸತ್ಯ ಉಮ್ಮತ್ತಾಲ್ ನಿಧನ! - ಪೋಷಕ ಕಲಾವಿದನಾಗಿ ಹಾಗು ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದ ಸತ್ಯ ಉಮ್ಮತ್ತಾಲ್

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಆಗಿರುವ ಸತ್ಯ ಉಮ್ಮತ್ತಾಲ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ‌. ಇವರಿಗೆ 70 ವರ್ಷ ವಯಸ್ಸಾಗಿತ್ತು.

ನಿರ್ದೇಶಕ ಯೋಗರಾಜ್ ಭಟ್ ಮಾವ ಸತ್ಯ ಉಮ್ಮತ್ತಾಲ್ ನಿಧನ

author img

By

Published : Jun 3, 2022, 4:34 PM IST

ಹಿರಿಯ ‌ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕಾಲದಿಂದಲೂ ಕನ್ನಡ ಚಿತ್ರತಂಡದ ಪೋಷಕ ಕಲಾವಿದನಾಗಿ ಹಾಗೂ ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದ ಸತ್ಯ ಉಮ್ಮತ್ತಾಲ್ ಇಂದು ನಿಧನರಾಗಿದ್ದಾರೆ‌. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಆಗಿರುವ ಸತ್ಯ ಉಮ್ಮತ್ತಾಲ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ‌. ಇವರಿಗೆ 70 ವರ್ಷ ವಯಸ್ಸಾಗಿತ್ತು.

ಸತ್ಯ ಉಮ್ಮತ್ತಾಲ್
ಸತ್ಯ ಉಮ್ಮತ್ತಾಲ್ ಅವರು ಚಿತ್ರ ಬಳಗದೊಂದಿಗೆ

ಹಿರಿಯ ‌ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಿನಿಮಾದಲ್ಲಿ, ಸತ್ಯ ಉಮ್ಮತ್ತಾಲ್ ನಟಿಸಬೇಕು ಅಂತಾ ಹೋಗಿ ಕೊನೆಗೆ ಪುಟ್ಟಣ್ಣ ಕಣಗಾಲ್ ಅವರ ಕಾರು ಡ್ರೈವರ್ ಆಗಿ ಫೇಮಸ್ ಆಗಿದ್ದರು‌. ಲೂಸಿಯಾ ಸಿನಿಮಾ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದ ಲೈಫು ಇಷ್ಟೇನೇ ಚಿತ್ರದ ಮೂಲಕ ಪೋಷಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಗಣೇಶ್, ದುನಿಯಾ ವಿಜಯ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಸೇರಿದಂತೆ ಸಾಕಷ್ಟು ನಟರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಸತ್ಯ ಉಮ್ಮತ್ತಾಲ್
ಸತ್ಯ ಉಮ್ಮತ್ತಾಲ್

ನಿರ್ದೇಶಕ ಯೋಗರಾಜ್ ಭಟ್ ಸ್ವತಃ ಮಾವ ಆಗಿರುವ ಸತ್ಯ ಉಮ್ಮತ್ತಾಲ್, ನಾನು ನಿರ್ದೇಶಕ ಯೋಗರಾಜ್ ಭಟ್ ಮಾವ ಅಂತಾ ಎಲ್ಲೂ ಹೇಳಿಕೊಳ್ಳದೇ ತಮಗೆ ಸಿಕ್ಕ ಪೋಷಕ ಪಾತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಸಲ ಮಾಡಿದ್ದಾರೆ‌.

ನಿರ್ದೇಶಕ ಯೋಗರಾಜ್ ಭಟ್ ಮಾವ ಸತ್ಯ ಉಮ್ಮತ್ತಾಲ್ ನಿಧನ!
ಚಿತ್ರೀಕರಣ ಸಂದರ್ಭದಲ್ಲಿ ಸತ್ಯ ಉಮ್ಮತ್ತಾಲ್

ಯೋಗರಾಜ್ ಭಟ್ ನಿರ್ದೇಶನದ ದನಕಾಯೋನು, ಪಂಚತಂತ್ರ ಹಾಗೂ ಕೆಂಡ ಸಂಪಿಗೆ ಜಯಮ್ಮನ ಮಗ, ಕಡ್ಡಿಪುಡಿ, ದನಕಾಯೋನು, ಆಕ್ಟ್​ 1978 ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಯೋಗರಾಜ್ ಭಟ್ ಮನೆಯಲ್ಲೇ ಸತ್ಯ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಸತ್ಯ ಉಮ್ಮತ್ತಾಲ್
ಖ್ಯಾತ ನಟರೊಂದಿಗೆ ಸತ್ಯ ಉಮ್ಮತ್ತಾಲ್

ಇದನ್ನೂ ಓದಿ: ಗೋವಾದಲ್ಲಿ ಜನ್ಮದಿನ ಆಚರಿಸಿ ಬರುವಾಗ ಜವರಾಯನ ಅಟ್ಟಹಾಸ.. ಹೊತ್ತಿ ಉರಿದ ಬಸ್​, 7 ಜನ ಸಜೀವ ದಹನ‌

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.