ETV Bharat / entertainment

ಹಿರಿಯ ಸಿನಿಮಾ ನಿರ್ದೇಶಕ ರಾಜ್​​​ಕುಮಾರ್ ಕೊಹ್ಲಿ ಹೃದಯಾಘಾತದಿಂದ ನಿಧನ - Rajkumar Kohli heart attack

Director Rajkumar Kohli passes away: ಹಿರಿಯ ಸಿನಿಮಾ ನಿರ್ದೇಶಕ ರಾಜ್​​​ಕುಮಾರ್ ಕೊಹ್ಲಿ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Rajkumar Kohli passes away
ನಿರ್ದೇಶಕ ರಾಜ್​​​ಕುಮಾರ್ ಕೊಹ್ಲಿ ನಿಧನ
author img

By ETV Bharat Karnataka Team

Published : Nov 24, 2023, 1:18 PM IST

Updated : Nov 24, 2023, 2:03 PM IST

'ಜಾನಿ ದುಷ್ಮನ್', 'ನಾಗಿನ್' ಮತ್ತು 'ಪತಿ ಪತ್ನಿ ಔರ್ ತವೈಫ್' ಸಿನಿಮಾಗಳಿಗೆ ಹೆಸರುವಾಸಿಯಾದ ಹಿರಿಯ ಸಿನಿಮಾ ನಿರ್ದೇಶಕ ರಾಜ್​​​ಕುಮಾರ್ ಕೊಹ್ಲಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಇವರಿಗೆ 93 ವರ್ಷ ವಯಸ್ಸಾಗಿತ್ತು.

ಸುದೀರ್ಘ ಸಿನಿಮಾ ಬದುಕು: 1963ರಿಂದ ಸಿನಿಮಾ ಲೋಕದಲ್ಲಿ ಇವರು ಗುರುತಿಸಿಕೊಂಡಿದ್ದರು. ಸುದೀರ್ಘ ವೃತ್ತಿಜೀವನದಲ್ಲಿ ರಾಜ್‌ಕುಮಾರ್ ಕೊಹ್ಲಿ ಸಿನಿಮಾ ಕ್ಷೇತ್ರದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು. ನಿರ್ದೇಶನದ ಜೊತೆ ಜೊತೆಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದರು. ಇವರ ನಿರ್ದೇಶನದ ಚೊಚ್ಚಲ ಚಿತ್ರ 'ಸಪ್ನಿ'. ಈ ಚಿತ್ರದಲ್ಲಿ ಪ್ರೇಮ್ ಚೋಪ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸ್ನಾನದ ಕೋಣೆಯಲ್ಲಿ ಹೃದಯಾಘಾತ: ಪುತ್ರ ನಟ ಅರ್ಮಾನ್ ಕೊಹ್ಲಿ ತಂದೆ ಸ್ನಾನದ ಕೋಣೆಯಿಂದ ಬಹಳ ಹೊತ್ತು ಹೊರ ಬಾರದ ಹಿನ್ನೆಲೆಯಲ್ಲಿ ಹೋಗಿ ನೋಡಿದ್ದಾರೆ. ಆ ಸಂದರ್ಭದಲ್ಲಿ ತಂದೆ ಮೃತಪಟ್ಟಿರುವುದು ಗೊತ್ತಾಗಿದೆ. ಇಂದು ಸಂಜೆ ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

ರಾಜ್​​​ಕುಮಾರ್ ಕೊಹ್ಲಿ ವೃತ್ತಿಜೀವನ: 1930ರಲ್ಲಿ ಜನಿಸಿದ ರಾಜ್‌ಕುಮಾರ್ ಕೊಹ್ಲಿ 1960ರ ದಶಕದಲ್ಲಿ ಸಿನಿಮಾ ಕ್ಷೇತ್ರದಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. 1963ರಲ್ಲಿ ಚೊಚ್ಚಲ ಚಿತ್ರ ಸಪ್ನಿ ಬಿಡುಗಡೆ ಆಯಿತು. ಈ ಮೂಲಕ ಚಿತ್ರರಂಗ ಪ್ರವೇಶಿಸಿದ ನಿರ್ದೇಶಕರು 1966ರಲ್ಲಿ ಪಂಜಾಬಿ ಚಲನಚಿತ್ರ 'ದುಲ್ಲಾ ಭಟ್ಟಿ' ನಿರ್ದೇಶಿಸಿದರು. ಹಿಂದಿ ಚಿತ್ರರಂಗದಲ್ಲಿ ಲೂಟೆರಾ (1970) ಮತ್ತು ಕಹಾನಿ ಹಮ್ ಸಬ್ ಕಿ (1973) ಅಂತಹ ಹಿಟ್​ ಸಿನಿಮಾಗಳ ಮೂಲಕ ಗಮನ ಸೆಳೆದರು. 1976ರಲ್ಲಿ ಬಹು ತಾರೆಯರನ್ನೊಳಗೊಂಡ ಬ್ಲಾಕ್‌ಬಸ್ಟರ್ 'ನಾಗಿನ್‌' ಮೂಲಕ ರಾಜ್‌ಕುಮಾರ್ ಕೊಹ್ಲಿ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದರು. 1979ರಲ್ಲಿ ತೆರೆಗೆ ಬಂದ ಜಾನಿ ದುಷ್ಮನ್ ಕೂಡ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶ ಕಂಡಿತು. 'ಜಾನಿ ದುಷ್ಮನ್' ಭಾರತದ ಮೊದಲ ಯಶಸ್ವಿ ಭಯಾನಕ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಟಪಟ್ಟಿದೆ.

ಇದನ್ನೂ ಓದಿ: ಅಂಬರೀಶ್ ಪುಣ್ಯಸ್ಮರಣೆಯಂದು ಪುತ್ರನ ಹೊಸ ಸಿನಿಮಾ ಬಿಡುಗಡೆ; ಸುಮಲತಾ, ದರ್ಶನ್​​ ಭಾವುಕ

1983ರಲ್ಲಿ ನೌಕರ್ ಬಿವಿ ಕಾ ಮತ್ತು 1988ರಲ್ಲಿ ಇಂತೆಕಾಮ್ ನಂತಹ ಕೆಲ ಹಿಟ್‌ ಚಿತ್ರಗಳನ್ನು ನಿರ್ಮಿಸಿದರು. ಆದಾಗ್ಯೂ ಯಶಸ್ವಿ ವೃತ್ತಿಜೀವನ ಹೀಗೆಯೇ ಮುಂದುವರಿಯಲಿಲ್ಲ. 90ರ ದಶಕದಲ್ಲಿ ನಿರ್ಮಾಪಕರೂ ಆದ ರಾಜ್​​​ಕುಮಾರ್ ಕೊಹ್ಲಿ ಸಿನಿಮಾ ನಿರ್ಮಾಣದಿಂದ ದೂರ ಸರಿದರು. ಒಂದೇ ಒಂದು ಚಿತ್ರ ನಿರ್ದೇಶಿದರು. 'ಜಾನಿ ದುಷ್ಮನ್: ಏಕ್ ಅನೋಖಿ ಕಹಾನಿ' ಇವರ ಬ್ಲಾಕ್​ಬಸ್ಟರ್ ಚಿತ್ರಗಳಲ್ಲಿ ಕೊನೆಯದು. ನಂತರದ ಸಾಧಾರಣ ಪ್ರತಿಫಲ ರಾಜ್‌ಕುಮಾರ್ ಕೊಹ್ಲಿ ಅವರನ್ನು ಸಿನಿಮಾಗಳಿಂದ ದೂರ ಉಳಿಯುವಂತೆ ಮಾಡಿತು. ಇದೀಗ ಹಿರಿಯ ನಿರ್ದೇಶಕರ ನಿಧನದ ಸುದ್ದಿ ಚಿತ್ರರಂಗಕ್ಕೆ ನೋವುಂಟು ಮಾಡಿದೆ. ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸುವುದು ಅಪಾಯಕಾರಿ, ನಾನಿದನ್ನು ಬೆಂಬಲಿಸುವುದಿಲ್ಲ: ಸಲ್ಮಾನ್ ಖಾನ್

Last Updated : Nov 24, 2023, 2:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.