ETV Bharat / entertainment

R Chandru: ಕನ್ನಡ ನಿರ್ದೇಶಕ ಆರ್.ಚಂದ್ರು ಸಿನಿ ಪಯಣಕ್ಕೆ 15ರ ಸಂಭ್ರಮ - R Chandru Taj Mahal movie

2008ರ ಜುಲೈ 25ರಂದು "ತಾಜ್ ಮಹಲ್" ಸಿನಿಮಾ ತೆರೆಕಂಡಿತ್ತು. ಇದು ನಿರ್ದೇಶಕ ಆರ್.ಚಂದ್ರು ಅವರ ಚೊಚ್ಚಲ ಚಿತ್ರವಾಗಿದ್ದು, ಸ್ಯಾಂಡಲ್​ವುಡ್​ನಲ್ಲಿ 15 ವರ್ಷ ಪೂರ್ಣಗೊಳಿಸಿದ್ದಾರೆ.

director R Chandru completed 15 years in Kannada industry
ನಿರ್ದೇಶಕ ಆರ್.ಚಂದ್ರು ಸಿನಿಪಯಣಕ್ಕೆ 15ರ ಸಂಭ್ರಮ
author img

By

Published : Jul 25, 2023, 5:44 PM IST

ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಎಂದರೆ ಅದು ಆರ್ ಚಂದ್ರು. ಕಳೆದ ಹದಿನೈದು ವರ್ಷಗಳಿಂದ ಕನ್ನಡ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳುತ್ತಾ ಬಂದಿರುವ ಆರ್​ ಚಂದ್ರು ಅವರ ಸಿನಿಮಾಗಳು ವಿಭಿನ್ನ. ತಾಜ್ ಮಹಲ್, ಚಾರ್ ಮಿನಾರ್, ಮೈಲಾರಿ, ಕಬ್ಜ ಅಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಕ್ಲಾಸ್ ಅಂಡ್​ ಮಾಸ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

director R Chandru completed 15 years in Kannada industry
ತಾಜ್​ಮಹಲ್​ ಸಿನಿಮಾಗೆ 15ರ ಸಂಭ್ರಮ

ಸಣ್ಣ ಹಳ್ಳಿಯಿಂದ ಬಂದು, "ಕಬ್ಜ" ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಭಾರತದಾದ್ಯಂತ ಹೆಸರು‌ ಮಾಡಿರುವ ನಿರ್ದೇಶಕ ಆರ್ ಚಂದ್ರು ಅವರ ಸಿನಿಪಯಣಕ್ಕೆ ಇಂದು ಹದಿನೈದರ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ಆರ್ ಚಂದ್ರು ಅವರ ಆರಂಭದ ದಿನಗಳು ಬಹಳ ಕಷ್ಟದಿಂದ ಕೂಡಿದ್ದವು. ಬಾಲ್ಯದಿಂದಲೂ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಆರ್ ಚಂದ್ರು ತಾವು ಅಂದುಕೊಂಡಂತೆ ಸಾಧನೆ ಮಾಡಿದ ಹಳ್ಳಿ ಪ್ರತಿಭೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೇಶವಾರದಲ್ಲಿ ರಾಮಯ್ಯ ಹಾಗೂ ಲಕ್ಷ್ಮಿ ದೇವಮ್ಮ ದಂಪತಿಗೆ ಜನಿಸಿದ ಆರ್ ಚಂದ್ರು ಅವರ ಬಾಲ್ಯ ಬಹುತೇಕ ಬಡತನದಲ್ಲಿಯೇ ಕಳೆಯಿತು. ಶಾಲಾ ದಿನಗಳಿಂದಲೂ ಚಂದ್ರು ಅವರಿಗೆ ವಿದ್ಯಾಭ್ಯಾಸಕ್ಕಿಂತ ಸಿನಿಮಾ ಹುಚ್ಚು ಹೆಚ್ಚಿತ್ತು. ಸಿನಿಮಾ ನೋಡುವುದೆಂದರೆ ಬಹಳ ಪ್ರೀತಿ. ಸಿನಿಮಾ ಮಾಡಬೇಕು ಎಂಬ ಕನಸನ್ನೂ ಹೊತ್ತಿದ್ದರು. ಒಮ್ಮೆಯಂತೂ ಕೆಮಿಸ್ಟ್ರಿ ಪರೀಕ್ಷೆ ತಪ್ಪಿಸಿ, ನಂದಿ ಬೆಟ್ಟದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ನೋಡಲು ಹೊರಟು ಹೋಗಿದ್ದರಂತೆ. ಆ ಮಟ್ಟಿಗೆ ಆರ್ ಚಂದ್ರು ಸಿನಿಮಾ ಹುಚ್ಚು ಹಿಡಿಸಿಕೊಂಡಿದ್ದರು.

ರಿಯಲ್​ ಸ್ಟಾರ್​ ಉಪೇಂದ್ರ ಜೊತೆ ನಿರ್ದೇಶಕ ಆರ್.ಚಂದ್ರು

ಇದೀಗ ಆರ್ ಚಂದ್ರು ಅವರ ನಿರ್ದೇಶನದ ಮೊದಲ ಚಿತ್ರ "ತಾಜ್ ಮಹಲ್" ತೆರೆಕಂಡು ಇಂದಿಗೆ ಹದಿನೈದು ವರ್ಷಗಳಾಗಿದೆ. 2008ರ ಜುಲೈ 25 ಈ ಚಿತ್ರ ತೆರೆ ಕಂಡಿತ್ತು. ಶಿವಶಂಕರ್ ‌ರೆಡ್ಡಿ ಅವರು ನಿರ್ಮಿಸಿದ್ದ, ಅಜಯ್ ರಾವ್ ಹಾಗೂ ಪೂಜಾ ಗಾಂಧಿ ನಾಯಕ, ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಕರ್ನಾಟಕದಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಅನೇಕ ಚಿತ್ರಮಂದಿರಗಳಲ್ಲಿ 200ಕ್ಕೂ ಅಧಿಕ ದಿನಗಳ ಕಾಲ ಈ ಸಿನಿಮಾ ಪ್ರದರ್ಶನವಾಗಿತ್ತು. ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ಆರ್ ಚಂದ್ರು ಡಬಲ್ ಸೆಂಚುರಿ ಬಾರಿಸಿದ್ದರು. ನಂತರದ ದಿನಗಳಲ್ಲಿ ಆರ್ ಚಂದ್ರು, "ತಾಜ್ ಮಹಲ್" ಚಂದ್ರು ಅಂತಲೇ ಪ್ರಸಿದ್ಧರಾದರು. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅಭಿಮಾನ್ ರಾಯ್ ಅವರಿಗೆ ರಾಜ್ಯಪ್ರಶಸ್ತಿ ಸಹ ಬಂದಿತ್ತು. ಈ ಚಿತ್ರ 2010ರಲ್ಲಿ "ತಾಜ್ ಮಹಲ್" ಶೀರ್ಷಿಕೆಯಲ್ಲೇ ತೆಲುಗಿನಲ್ಲೂ ಬಿಡುಗಡೆ ಆಗಿತ್ತು.

ಶಿವಣ್ಣನ ಜೊತೆ ನಿರ್ದೇಶಕ ಆರ್.ಚಂದ್ರು

ಇದನ್ನೂ ಓದಿ: Buddhivantha 2: ಉಪೇಂದ್ರ ಫ್ಯಾನ್ಸ್​ಗೆ ಗುಡ್​ ನ್ಯೂಸ್ - ಬುದ್ಧಿವಂತ 2 ರಿಲೀಸ್​ ಡೇಟ್​ ಫಿಕ್ಸ್!

ಆನಂತರದ ದಿನಗಳಲ್ಲಿ ಆರ್ ಚಂದ್ರು ಕನ್ನಡದ ಹೆಸರಾಂತ ನಾಯಕ ನಟರ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗಕ್ಕೆ ಸೂಪರ ಹಿಟ್ ಚಿತ್ರಗಳನ್ನು ನೀಡಿದರು. ನಿರ್ಮಾಪಕರಾಗಿಯೂ ಆರ್ ಚಂದ್ರು ಜನಪ್ರಿಯರಾದರು. "ತಾಜ್ ಮಹಲ್" ನಿಂದ ಇತ್ತೀಚಿಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ" ತನಕ ಆರ್ ಚಂದ್ರು ಅವರ ಯಶಸ್ಸಿನ ಸಿನಿ ಯಾನ ಮುಂದುವರೆದುಕೊಂಡು ಬಂದಿದೆ. ಮುಂದೆ ಕೂಡ ಸಾಕಷ್ಟು ಸದಭಿರುಚಿಯ ಚಿತ್ರಗಳು ಆರ್ ಚಂದ್ರು ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬರಲಿ ಎಂಬುದು ಅಭಿಮಾನಿಗಳ ಹಾರೈಕೆ.

ಇದನ್ನೂ ಓದಿ: BAD: ಟೈಟಲ್​ನಿಂದಲೇ ಸದ್ದು ಮಾಡ್ತಿರುವ ಚಿತ್ರ.. ಕಾಮ ಪ್ರತಿನಿಧಿಸುವ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್

ಆರ್ ಚಂದ್ರು ಸಿನಿ ಪಯಣಕ್ಕೆ 15 ವರ್ಷ ತುಂಬಿದೆ. ಈ ಸುಸಂದರ್ಭದಲ್ಲಿ ಆರ್‌ ಚಂದ್ರು ತಮಗೆ ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸಿದ್ದಾರೆ. ಮತ್ತಷ್ಟು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಲಿ ಅನ್ನೋದು ಅಭಿಮಾನಿಗಳ ಆಶಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.