ಪೌರಾಣಿಕ ಕಥಾಹಂದರ ಹೊಂದಿರುವ ಬಹು ನಿರೀಕ್ಷಿತ ಆದಿಪುರುಷ್ ಸಿನಿಮಾ ಟೀಸರ್ ರಿಲೀಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ. ಈ ಚಿತ್ರದಲ್ಲಿ ಬರುವ ಕೆಲ ಗ್ರಾಫಿಕ್ಸ್ ಅನ್ನು ಅನೇಕರು ಕಾರ್ಟೂನ್ಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ. ರಿಲೀಸ್ಗೂ ಮುನ್ನವೇ ಈ ರೀತಿಯ ನೆಗೆಟಿವ್ ಪ್ರತಿಕ್ರಿಯೆಗೆ ನಿರ್ದೇಶಕ ಓಂ ರಾವತ್ ಸೇರಿದಂತೆ ಚಿತ್ರತಂಡ ಬೇಸರಕ್ಕೊಳಗಾಗಿದೆ.
ಚಿತ್ರದ ಟೀಸರ್ ಅನ್ನು ಅಕ್ಟೋಬರ್ 2 ರಂದು ಅನಾವರಣಗೊಳಿಸಲಾಯಿತು. ಅಂದಿನಿಂದ ಚಿತ್ರದ ಗ್ರಾಫಿಕ್ಸ್ ಸೇರಿದಂತೆ ಕೆಲ ವಿಚಾರವಾಗಿ ಟೀಸರ್ ಟೀಕೆಗೊಳಗಾಗಿದೆ. ಸಂದರ್ಶನವೊಂದರಲ್ಲಿ ನಿರ್ದೇಶಕ ಓಂ ರಾವತ್ ಈ ಟ್ರೋಲ್ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಖಂಡಿತವಾಗಿ ನಿರಾಶೆಗೊಂಡಿದ್ದೇನೆ, ಆಶ್ಚರ್ಯವೇನಿಲ್ಲ. ಏಕೆಂದರೆ ಈ ಚಲನಚಿತ್ರವನ್ನು ದೊಡ್ಡ ಮಾಧ್ಯಮಕ್ಕಾಗಿ, ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಮಾಡಲಾಗಿದೆ. ನೀವು ಅದನ್ನು ಸ್ವಲ್ಪಮಟ್ಟಿಗೆ ಕಡಿತಗೊಳಿಸಬಹುದು ಆದರೆ ಅದನ್ನು ಮೊಬೈಲ್ ಫೋನ್‌ಗೆ ತರಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
![director Om Raut](https://etvbharatimages.akamaized.net/etvbharat/prod-images/16560732_news.jpg)
ಈ ಸಿನಿಮಾವನ್ನು ಮಾಡಿರುವುದು ದೊಡ್ಡ ಪರದೆಗಾಗಿ. ಚಿತ್ರದ ಯಾವುದೇ ತುಣುಕನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡುತ್ತಿರಲಿಲ್ಲ. ಆದರೆ ಪ್ರಚಾರದ ಸಲುವಾಗಿ ಮಾಡಿದ್ದೇವೆ ಎಂದು ಓಂ ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಕಂಠದಲ್ಲಿ ಮೂಡಿ ಬಂತು ದೇವಿ ಸಂಗೀತ
ನಾನು ಆ ಟೀಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ನಾನು ಅದನ್ನು ಎಂದಿಗೂ ಯೂಟ್ಯೂಬ್‌ನಲ್ಲೂ ಹಾಕುವುದಿಲ್ಲ. ಸಣ್ಣ ತುಣುಕುಗಳನ್ನೂ ಕೂಡ. ವ್ಯಾಪಕ ಪ್ರೇಕ್ಷಕರನ್ನು ತಲುಪಲು ದೊಡ್ಡ ಸ್ಕ್ರೀನ್ನಲ್ಲೇ ಪ್ರದರ್ಶನ ಮಾಡಿಸಬೇಕಿದೆ. ಸಿನಿಮಾವನ್ನು 3ಡಿ ವರ್ಷನ್ನಲ್ಲಿ ನೋಡಿದಾಗ ಗ್ರಾಫಿಕ್ಸ್ ಚೆನ್ನಾಗಿ ಕಾಣಿಸುತ್ತದೆ. ಆದರೆ, ಮೊಬೈಲ್ ಯೂಟ್ಯೂಬ್ನಲ್ಲಿ ಜನರಿಗೆ ತಲುಪಿಲ್ಲ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದಾಗ ಗ್ರಾಫಿಕ್ಸ್ ಚೆನ್ನಾಗಿ ಕಾಣಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಗವಾನ್ ರಾಮನಾಗಿ ಪ್ರಭಾಸ್, ರಾವಣನಾಗಿ ಸೈಫ್ ಅಲಿ ಖಾನ್, ಸೀತಾ ಪಾತ್ರದಲ್ಲಿ ಕೃತಿ ಸನೋನ್ ಮತ್ತು ಸನ್ನಿ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ಜನವರಿ 12ರ 2023ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.