ETV Bharat / entertainment

ಹೊಸ ಪ್ರತಿಭೆಗಳ 'ದಿಲ್​ ಖುಷ್'​ ಸಿನಿಮಾಗೆ ಡಾರ್ಲಿಂಗ್​ ಕೃಷ್ಣ ಸಾಥ್​ - ಈಟಿವಿ ಭಾರತ ಕನ್ನಡ

Dil Kush movie teaser out: ಹೊಸ ಪ್ರತಿಭೆಗಳ 'ದಿಲ್ ಖುಷ್' ಚಿತ್ರದ ಟೀಸರ್​ ಅನ್ನು ಡಾರ್ಲಿಂಗ್​ ಕೃಷ್ಣ ಬಿಡುಗಡೆಗೊಳಿಸಿದ್ದಾರೆ.

Dil Kush movie teaser out
ಹೊಸ ಪ್ರತಿಭೆಗಳ 'ದಿಲ್​ ಖುಷ್'​ ಸಿನಿಮಾ
author img

By ETV Bharat Karnataka Team

Published : Nov 4, 2023, 7:34 PM IST

ಸ್ಯಾಂಡಲ್​ವುಡ್​ಗೆ ಕಂಟೆಂಟ್ ಆಧಾರಿತ ಚಿತ್ರಗಳ ಜೊತೆ ಟ್ಯಾಲೆಂಟ್‌ ಇರುವ ನಿರ್ದೇಶಕರು, ಯುವ ನಟರ ಆಗಮನವಾಗುತ್ತಿದೆ. ಅದೇ ರೀತಿ ಇಲ್ಲೊಂದು ಚಿತ್ರತಂಡ 'ದಿಲ್ ಖುಷ್' ಅಂತ ಟೈಟಲ್ ಇಟ್ಟುಕೊಂಡು ಆಲ್‌ ಮೋಸ್ಟ್ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇತ್ತೀಚೆಗೆ ನಟ ಡಾರ್ಲಿಂಗ್ ಕೃಷ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಎಲ್ಲೆಡೆ ಟೀಸರ್​ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಜೊತೆಗೆ ನವೀರಾದ ಪ್ರೇಮಕಥೆಯ ಚಿತ್ರವನ್ನು ಪ್ರಮೋದ್ ಜಯ ನಿರ್ದೇಶನ ಮಾಡಿದ್ದಾರೆ. ಟೀಸರ್​ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ, "ದಿಲ್ ಖುಷ್' ಎಂದರೆ ನಾಯಕ ಹಾಗೂ ನಾಯಕಿ ಹೆಸರು. ದಿಲ್ಮಯ ನಾಯಕಿಯ ಹೆಸರಾದರೆ, ಕುಷಾಲ್ ನಾಯಕನ ಹೆಸರು. ಮನೆಮಂದಿಯಲ್ಲಾ ಕುಳಿತು ನೋಡುವ ಕೌಟುಂಬಿಕ ಚಿತ್ರವಿದು" ಎಂದು ತಿಳಿಸಿದರು.

ಯುವ ಪ್ರತಿಭೆ ರಂಜಿತ್ 'ದಿಲ್ ಖುಷ್' ಚಿತ್ರದ ನಾಯಕನಾಗಿ, ಸ್ಪಂದನ ಸೋಮಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಅರುಣಾ ಬಾಲರಾಜ್, ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು, ಸೂರ್ಯ ಪ್ರವೀಣ್ ಮುಂತಾದವರು ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದು ಐದು ಹಾಡುಗಳು ಚಿತ್ರದಲ್ಲಿದೆ. 'ದಿಲ್ ಖುಷ್' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕೊಡಗಿನ ಸೋಮವಾರಪೇಟೆ,‌ ಶನಿವಾರಸಂತೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.‌

ನಿವಾಸ್ ನಾರಾಯಣ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜ್ಞಾನೇಶ್ ಬಿ ಮಠದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ. ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭಶೇಖರ್ ನಿರ್ಮಿಸಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: 'ಒಂದು ಸರಳ ಪ್ರೇಮಕಥೆ'ಯಲ್ಲಿ ಮಗನೊಂದಿಗೆ ತೆರೆ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್​

ಡಾರ್ಲಿಂಗ್ ಕೃಷ್ಣರ 'ಶುಗರ್ ಫ್ಯಾಕ್ಟರಿ': ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸುದ್ದಿಯಾಗುತ್ತಿರುವ ಸಿನಿಮಾ 'ಶುಗರ್ ಫ್ಯಾಕ್ಟರಿ'. ಡಾರ್ಲಿಂಗ್ ಕೃಷ್ಣ, ಸೋನಾಲ್ ಮಾಂಟೆರೊ, ಶಿಲ್ಪಾ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಮುಖ್ಯಭೂಮಿಕೆಯ 'ಶುಗರ್ ಫ್ಯಾಕ್ಟರಿ' ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸಿನಿಮಾ ಟ್ರೇಲರ್ ಹಾಗೂ ಹಾಡುಗಳಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ. ವಿನೂತನ ಪ್ರಚಾರದ ಮೂಲಕ ಶುಗರ್ ಫ್ಯಾಕ್ಟರಿ ಈಗಾಗಲೇ ಸಿನಿರಸಿಕರ ಗಮನ ಸೆಳೆದಿದೆ. ದೀಪಕ್​ ಅರಸ್​​ ನಿರ್ದೇಶನದ 'ಶುಗರ್ ಫ್ಯಾಕ್ಟರಿ' ಹೇಗಿರಬಹುದೆಂಬ? ಕೌತುಕ ಎಲ್ಲರಲ್ಲೂ ಮನೆಮಾಡಿದೆ. ಬಹುನಿರೀಕ್ಷಿತ ಚಿತ್ರ ನವೆಂಬರ್ 24ರಂದು ತೆರೆಕಾಣಲಿದೆ.

ಇದನ್ನೂ ಓದಿ: 'ಹಾಯ್​ ನಾನ್ನ' ಚಿತ್ರದ ರೊಮ್ಯಾಂಟಿಕ್​ ಹಾಡು ಬಿಡುಗಡೆ; ನಾನಿ-ಮೃಣಾಲ್​ ಕೆಮಿಸ್ಟ್ರಿ ಸೂಪರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.