ನವದೆಹಲಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಗಣಪತ್ ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಈ ಕುರಿತ ವಿಡಿಯೋವನ್ನು ನಟ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಟ ಶ್ರಾಫ್ ತಮ್ಮ ಮುಂಬರುವ ಸಿನಿಮಾ ಗಣಪತ್: ಭಾಗ 1 ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾದ ಸಾಹಸ ದೃಶ್ಯದ ವೇಳೆ ನಟನ ಮುಖದ ಮೇಲೆ ಗಾಯವಾಗಿದೆ. ಕಣ್ಣಿನ ಪಕ್ಕದಿಂದ ರಕ್ತ ಸುರಿಯುತ್ತಿದ್ದರೆ, ಕೈ ಮೇಲೆ ದೊಡ್ಡ ಗಾಯವಾಗಿ ಅಲ್ಲಿಯೂ ರಕ್ತ ಸುರಿಯುತ್ತಿದೆ. ಇದರ ವಿಡಿಯೋವನ್ನು ತಮ್ಮ ಇನ್ಸ್ಟ್ರಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, 'ಇದೊಂದು ಎಂದಿಗೂ ನೆನಪಿರುವ ವಿಷಯ..ಔಚ್' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಈ ವಿಡಿಯೋಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ನಟನ ಸಿನಿಮಾ ಮೇಲಿನ ಶ್ರದ್ಧೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೈಗರ್ ಶ್ರಾಫ್ರ ಹೀರೋಪಂತಿ- 2 ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಿಲ್ಲ. ಇದೀಗ ಕೃತಿ ಸನೋನ್ ನಾಯಕಿಯಾಗಿರುವ ಗಣಪತ್: ಭಾಗ 1 ರಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಕ್ರಿಸ್ಮಸ್ ವೇಳೆ ಸಿನಿಮಾವನ್ನು ಬಿಡುಗಡೆ ಮಾಡುವ ಇರಾದೆ ತಂಡಕ್ಕಿದೆ.
ಓದಿ: ವಿದೇಶ ಪ್ರವಾಸಕ್ಕೆ ಸಜ್ಜಾದ ಆರ್ಯನ್ ಖಾನ್ಗೆ ಪಾಸ್ಪೋರ್ಟ್ನದ್ದೇ ತಲೆನೋವು!